ಬೆಳ್ತಂಗಡಿ : ಕಳೆದ ಎರಡು ವರ್ಷ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಈ ಬಾರಿ ಬಡವರ ವಸತಿಗಾಗಿ ನೀಡಿದ ಸಾಲ 2488.99 ರೂ.ಕೋಟಿಯನ್ನುರಾಜ್ಯದಲ್ಲಿ ಮನ್ನಾ ಮಾಡಲಾಗಿದೆಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿ ಗುರುನಾರಾಯಣ ಸಂಕೀರ್ಣದ ಆಶಾಸಾಲಿಯಾನ್ ಸಭಾಭವನದಲ್ಲಿ ನಡೆದ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ವಸತಿ ಇಲಾಖೆ, ತಾ.ಪಂ. ಹಾಗೂ ಪಟ್ಟಣ ಪಂ. ಆಶ್ರಯದಲ್ಲಿ ನಡೆದ ಸಾಲಮನ್ನಾ ತಿಳುವಳಿಕೆ ಪತ್ರ ವಿತರಣಾಕಾರ್ಯಕ್ರಮದಲ್ಲಿ ತಿಳುವಳಿಕೆ ಪತ್ರಗಳನ್ನು ವಿತರಿಸಿ ಮಾತನಾಡಿದರು.
2008-09 ರಿಂದ ಬಡವರ ವಸತಿ ನಿರ್ಮಾಣಕ್ಕಾಗಿ ನೀಡಿದ ಸಾಲ ಹಾಗೂ ಬಡ್ಡಿಯನ್ನು ಮನ್ನಾ ಮಾಡುತ್ತಿದೆ. ಬಡವರಿಗೆ ಬಿಪಿಎಲ್ ಪಡಿತರಚೀಟಿಯನ್ನು ನೀಡಿ ತಿಂಗಳಿಗೆ 30 ಕೆ.ಜಿ.ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ.ಸರಕಾರ ಬಡವರಿಗಾಗಿ ಹಮ್ಮಿಕೊಂಡ ಯೋಜನೆಗಳು ಪ್ರಯೋಜನಕಾರಿಯಾಗಿದ್ದರೂ ಉಪಕಾರ ಸ್ಮರಣೆಯನ್ನು ಇಟ್ಟುಕೊಳ್ಳದಿರುವುದು ವಿಷಾದನೀಯ. ಶ್ರೀಮಂತರೂ ಬಿಪಿಎಲ್ನ್ನು ಮಾಡಿಸಿಕೊಂಡಿರವುದರಿಂದ ಅರ್ಹರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಯಾರು ಅರ್ಹರಲ್ಲದವರು ಬಿಪಿಎಲ್ ಮಾಡಿಸಿಕೊಂಡಿರುವವರನ್ನು ಕಂಡು ಹುಡುಕಿ ಕ್ರಮಕೈಗೋಳ್ಳುವಂತೆ ಒತ್ತಾಯಿಸಿದ್ದೇನೆ ಎಂದರು.
94ಸಿಯಲ್ಲಿ ಅರ್ಜಿಕೊಟ್ಟ ಫಲಾನುಭವಿಗಳು ಯಾವುದೇ ಲಂಚ ನೀಡದೆ ಹಕ್ಕುಪತ್ರಗಳನ್ನು ಪಡೆದುಕೊಳ್ಳಬೇಕು. ಯಾರಾದರೂ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸಿದರೆ ಅಂತಹವರ ಬಗ್ಗೆ ನನ್ನ ಗಮನಕ್ಕೆ ತನ್ನಿ ಎಂದ ಅವರು ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಪ್ರೋತ್ಸಾಹ ನೀಡಿ ಎಂದರು.ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು ಅವರು, ಬಡವರ ಸಾಲವನ್ನು ಸರಕರ ಮನ್ನಾ ಮಾಡುತ್ತಿರುವುದು ಸ್ವಾಗತಾರ್ಹ. ಇದುಅವರ ಭದ್ರತೆಗಾಗಿ ಮಾಡುತ್ತಿದೆ ಎಂದರು.
ವೇದಿಕೆಯಲ್ಲಿ ಜಿ.ಪಂ. ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ಪಟ್ಟಣ ಪಂ. ಅಧ್ಯಕ್ಷೆ ನಳಿನಿ ವಿಶ್ವನಾಥ್, ಉಪಾಧ್ಯಕ್ಷೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಮಹಾಂತೇಶ್ ಪ್ರಸ್ತಾವಿಸಿದರು.ಲೆಕ್ಕಾಧಿಕಾರಿ ವೆಂಕಟ್ರಮಣ ಶರ್ಮ ಸ್ವಾಗತಿಸಿದರು.ನೊಚ್ಚ ಪ್ರಕಾಶ್ ಶೆಟ್ಟಿಕಾರ್ಯಕ್ರಮ ನಿರ್ವಹಿಸಿದರು.
ಬೆಳ್ತಂಗಡಿ ತಾಲೂಕಿನಲ್ಲಿಒಟ್ಟು 5,117 ಫಲಾನುಭವಿಗಳಲ್ಲಿ 3,609 ಮಂದಿಗೆ ಸಾಲಮನ್ನಾ ತಿಳುವಳಿಕೆ ಪತ್ರ ವಿತರಿಸಲಾಯಿತು.ಒಟ್ಟುರೂ. 4,63,24,364 ಸಾಲ ಮತ್ತು ರೂ.3,31,43,249 ಬಡ್ಡಿ ಸೇರಿ ರೂ.7,94,67,613 ಗಳನ್ನು ತಾಲೂಕಿನಲ್ಲಿ ಮನ್ನಾ ಮಾಡಲಾಗಿದೆ. ಪಟ್ಟಣ ಪಂ.ವ್ಯಾಪ್ತಿಯಲ್ಲಿ 57 ಫಲಾನುಭವಿಗಳಿಗೆ 29.50 ಲಕ್ಷ ರೂಗಳನ್ನು ಮನ್ನಾ ಮಾಡಲಾಗಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.