ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (PMBJP) ಯ ಅನುಷ್ಠಾನ ಸಂಸ್ಥೆಯಾದ ಫಾರ್ಮಾಸ್ಯುಟಿಕಲ್ಸ್ ಆಂಡ್ ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (PMBI) ಮೊದಲ ಬಾರಿಗೆ ಈ ತಿಂಗಳು 100 ಕೋಟಿ ರೂಪಾಯಿಗಳ ಮಾರಾಟವನ್ನು ಕಂಡಿದೆ.
ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು ಮಾರ್ಚ್ 2024 ರ ವೇಳೆಗೆ 10,000 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದ್ದು, ಸಾಮಾನ್ಯ ಜನರಿಗೆ, ವಿಶೇಷವಾಗಿ ಬಡವರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಗುರಿಯನ್ನು ಇದ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯಡಿ ಸಾರ್ವಜನಿಕರಿಗೆ 15,000 ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯವಾಗಿದೆ.
PMBJP ದೇಶದ 739 ಜಿಲ್ಲೆಗಳನ್ನು ಒಳಗೊಂಡಿದೆ. PMBJK ಗಳಲ್ಲಿ ಅಗತ್ಯ ಔಷಧಿಗಳ ಅಡೆತಡೆಯಿಲ್ಲದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು PMBI ಬದ್ಧವಾಗಿದೆ. ಕಳೆದ ಎಂಟು ವರ್ಷಗಳ ಪಯಣದಲ್ಲಿ, 2014-15 ರಲ್ಲಿ ಎಂಟು ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟಿನಿಂದ ಪ್ರಾರಂಭಿಸಿ ಪಿಎಂಬಿಐ ಈ ತಿಂಗಳಿನಲ್ಲಿ 100 ಕೋಟಿ ರೂಪಾಯಿಗಳ ಗರಿಷ್ಠ ಮಾಸಿಕ ಮಾರಾಟದ ವಹಿವಾಟು ನಡೆಸಿದೆ. ಪ್ರಸ್ತುತ, ಈ ಕೇಂದ್ರಗಳಲ್ಲಿ 1,600 ಕ್ಕೂ ಹೆಚ್ಚು ಔಷಧಿಗಳು ಮತ್ತು ನ್ಯೂಟ್ರಾಸ್ಯುಟಿಕಲ್ಸ್, ಆಯುಷ್ ಉತ್ಪನ್ನಗಳು ಮತ್ತು ಸುವಿಧಾ ಸ್ಯಾನಿಟರಿ ಪ್ಯಾಡ್ಗಳನ್ನು ಒಳಗೊಂಡಂತೆ 250 ಶಸ್ತ್ರಚಿಕಿತ್ಸಾ ಸಾಧನಗಳನ್ನು ಲಭ್ಯವಿವೆ.
PMBJP ಅಡಿಯಲ್ಲಿ, ದೇಶದ ಪ್ರತಿಯೊಬ್ಬ ನಾಗರಿಕರಿಗೆ ಜನೌಷಧಿ ಕೇಂದ್ರಗಳ ಮೂಲಕ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಒದಗಿಸಲು 406 ಜಿಲ್ಲೆಗಳ 3,579 ಬ್ಲಾಕ್ಗಳನ್ನು ಒಳಗೊಳ್ಳಲು ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಣ್ಣ ಪಟ್ಟಣಗಳು ಮತ್ತು ಬ್ಲಾಕ್ ಪ್ರಧಾನ ಕಛೇರಿಗಳ ನಿವಾಸಿಗಳು ಈಗ ಜನೌಷಧಿ ಕೇಂದ್ರಗಳನ್ನು ತೆರೆಯುವ ಅವಕಾಶವನ್ನು ಪಡೆಯಬಹುದು.
ಅದರಂತೆ, ಪಿಎಂಬಿಐ ಗುರುಗ್ರಾಮ್, ಚೆನ್ನೈ, ಗುವಾಹಟಿ ಮತ್ತು ಸೂರತ್ನಲ್ಲಿ ನಾಲ್ಕು ಗೋದಾಮುಗಳನ್ನು ಸ್ಥಾಪಿಸುವ ಮೂಲಕ ಪೂರೈಕೆ ಸರಪಳಿ ವ್ಯವಸ್ಥೆಯನ್ನು ಬಲಪಡಿಸಿದೆ. ಜೊತೆಗೆ, ಸಕಾಲಿಕ ಪೂರೈಕೆಗಾಗಿ ದೇಶಾದ್ಯಂತ 39 ವಿತರಕರ ಪ್ರಬಲ ವಿತರಕರ ಜಾಲವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.