ಕೊಲಂಬೊ: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪರಾಷ್ಟ್ರಕ್ಕೆ ಸಹಾಯ ಮಾಡುವ ಭಾರತದ ಪ್ರಯತ್ನಗಳಿಗೆ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವಿಟರ್ ಮೂಲಕ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
“ಈ ಕಷ್ಟದ ಅವಧಿಯಲ್ಲಿ ಭಾರತ ನೀಡಿದ ಬೆಂಬಲಕ್ಕಾಗಿ ನಾನು ನಮ್ಮ ದೇಶದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇಚೆ. ನಮ್ಮ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಶ್ರೀಲಂಕಾದ ಪ್ರಧಾನಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ವಿಕ್ರಮಸಿಂಘೆ ಅವರು, ಶ್ರೀಲಂಕಾಕ್ಕೆ ಸಹಾಯ ಮಾಡಲು ವಿದೇಶಿ ನೆರವು ಒಕ್ಕೂಟವನ್ನು ಸ್ಥಾಪಿಸಲು ಕ್ವಾಡ್ ಮುಂದಾಳತ್ವ ವಹಿಸುವಂತೆ ಮಾಡಿದ ಪ್ರಸ್ತಾವನೆಯ ಬಗ್ಗೆ ಭಾರತ ಮತ್ತು ಜಪಾನ್ನ ಪ್ರತಿಕ್ರಿಯೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಭಾರತ ಶ್ರೀಲಂಕಾಗೆ 25 ಟನ್ಗಳಷ್ಟು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು, ಇಂಧನವನ್ನು ಪೂರೈಕೆ ಮಾಡಿದ್ದು, ಮತ್ತಷ್ಟು ನೆರವು ನೀಡಲು ಸಜ್ಜಾಗಿದೆ.
ಈ ಮಾನವೀಯ ಸರಬರಾಜುಗಳನ್ನು ಶ್ರೀಲಂಕಾದ ಜನರಿಗೆ ಆರ್ಥಿಕ ನೆರವು, ವಿದೇಶೀ ವಿನಿಮಯ ಬೆಂಬಲ, ವಸ್ತು ಪೂರೈಕೆಯಂತಹ ಅನೇಕ ರೂಪಗಳಲ್ಲಿ ಭಾರತ ಸರ್ಕಾರ ನಿರಂತರವಾಗಿ ನೀಡಲಿದೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ.
1. Assistance from India and Japan: I am grateful for the positive response from India and Japan on the proposal made for the Quad members (United States, India, Japan, and Australia) to take the lead in setting up a foreign aid consortium to assist Sri Lanka.
— Ranil Wickremesinghe (@RW_SRILANKA) May 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.