ನವದೆಹಲಿ: ಇಂದು ಭೂ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಭೂಮಿ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನ ಎಂದು ಬಣ್ಣಿಸಿದ್ದಾರೆ.
“ಭೂಮಿತಾಯಿಯು ತೋರಿಸುತ್ತಿರುವ ಕರುಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಈ ಭೂಮಿಯ ಕಾಳಜಿಗೆ ಪ್ರತಿಯೊಬ್ಬರ ಬದ್ಧತೆಯನ್ನು ಪುನರ್ ಆಚರಿಸುವುದು ಭೂ ದಿನವಾಗಿದೆ” ಎಂದಿದ್ದಾರೆ.
ಭೂಮಿಯ ಸಂರಕ್ಷಣೆಯ ಅಗತ್ಯವನ್ನು ಸಾರುವ ಸಲುವಾಗಿ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 22ರಂದು ಭೂ ದಿನವನ್ನು ಆಚರಿಸಲಾಗುತ್ತದೆ.
ಭಾರತದ ಪರಿಸರ ಸಂರಕ್ಷಣೆಯ ಸಾಂಪ್ರದಾಯಕ ಕ್ರಮಗಳ ಬಗ್ಗೆ ತಾವು ಮಾತನಾಡಿರುವ ವಿಡಿಯೋ ಕ್ಲಿಪ್ಪನ್ನು ಮೋದಿ ಪೋಸ್ಟ್ ಮಾಡಿದ್ದಾರೆ. ಪರಿಸರ ಸಂರಕ್ಷಣೆ ಪ್ರತಿ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದಿದ್ದಾರೆ.
#EarthDay is about expressing gratitude to Mother Earth for her kindness and reiterating our commitment to care for our planet. pic.twitter.com/wVeQ6qmLm2
— Narendra Modi (@narendramodi) April 22, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.