ಬೆಂಗಳೂರು: ಜನರಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವ, ಅರಿವು ಮೂಡಿಸುವ ಹಾಗೂ ರಾಷ್ಟ್ರ ಪ್ರೇಮ ಬೆಳೆಸುವ ನಿಟ್ಟಿನಲ್ಲಿ ವಂದೇ ಮಾತರಂ ಚಾರಿಟೇಬಲ್ ಟ್ರಸ್ಟ್ ಬೃಹತ್ ರಾಷ್ಟ್ರಧ್ವಜ ಪ್ರದರ್ಶನ ಏರ್ಪಡಿಸಲಿದೆ.
ರಾಷ್ಟ್ರ ಧ್ವಜ ನಿರ್ಮಾಣಕ್ಕೆ 33,750 ಚದರ ಹತ್ತಿ ಬಟ್ಟೆ, 20 ಹೊಲಿಗೆ ಯಂತ್ರಗಳ ಬಳಕೆಯಾಗಲಿದೆ.
ಸುಮಾರು 150ರಿಂದ 225 ಅಡಿ ಉದ್ದದ ಈ ರಾಷ್ಟ್ರ ಧ್ವಜವನ್ನು ಸೆಪ್ಟೆಂಬರ್ 7ರಂದು ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಜ್ಯ ಸರ್ಕಾರಿ ನೌಕರರ ಸಂಘ ಇದರ ಸಹಯೋಗದೊಂದಿಗೆ ಈ ರಾಷ್ಟ್ರ ಧ್ವಜ ನಿರ್ಮಾಣ ಹಾಗೂ ಪ್ರದರ್ಶಿಸಲಾಗುತ್ತಿದೆ. ಈ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಕೆ.ಯು. ಗೋಪಾಲ ಭಟ್ ತಿಳಿಸಿದ್ದಾರೆ.
ಮುಂಬಯಿ ದಾಳಿ ಸಂದರ್ಭ ಮೃತರಾದ ಸೈನಿಕರ ಸ್ಮರಣಾರ್ಥ ನವೆಂಬರ್ 26ರಂದು ಈ ರಾಷ್ಟ್ರಧ್ವಜ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.