ಕೇಂದ್ರ ಸರ್ಕಾರವು ಭಾರತೀಯ ಸಂಸ್ಕೃತಿ ಪೋರ್ಟಲ್ ಆದ www.indianculture.gov.in ಮೂಲಕ ಐಐಟಿ ಬಾಂಬೆ ಸಹಯೋಗದೊಂದಿಗೆ ನ್ಯಾಷನಲ್ ವರ್ಚುವಲ್ ಲೈಬ್ರರಿ ಆಫ್ ಇಂಡಿಯಾ (ಎನ್ವಿಎಲ್ಐ) ಗೆ ಚಾಲನೆ ನೀಡಿದೆ. ವೈವಿಧ್ಯಮಯ ಸಾಂಸ್ಕೃತಿಕ ಕಲಾಕೃತಿಗಳ ಡಿಜಿಟಲ್ ಸಂರಕ್ಷಣೆಗೆ ವೇದಿಕೆಯನ್ನು ಒದಗಿಸುವುದು ಮತ್ತು ನಾಗರಿಕರಲ್ಲಿ ಅವರ ಹಂಚಿಕೆಯ ಪರಂಪರೆಯ ಬಗ್ಗೆ ಜಾಗೃತಿ ಮತ್ತು ಸಾಮೂಹಿಕ ಮಾಲೀಕತ್ವದ ಪ್ರಜ್ಞೆಯನ್ನು ಮೂಡಿಸುವುದು ಇದರ ಉದ್ದೇಶ.
ಈ ಯೋಜನೆಯು ತುಂಬಾ ಚೆನ್ನಾಗಿ ಸಾಗುತ್ತಿದ್ದು, ಈ ಯೋಜನೆಯ ಮುಖ್ಯ ಫಲಿತಾಂಶವೇ ಭಾರತೀಯ ಸಂಸ್ಕೃತಿ ಪೋರ್ಟಲ್ www.indianculture.gov.in.
ನ್ಯಾಷನಲ್ ವರ್ಚುವಲ್ ಲೈಬ್ರರಿ ಆಫ್ ಇಂಡಿಯಾ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲಾಗಿದೆ. ಇದರ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಭಾರತೀಯ ಸಂಸ್ಕೃತಿ ಪೋರ್ಟಲ್ ಒಟ್ಟು 2.98 ಲಕ್ಷ ಡಿಜಿಟಲ್ ಕಲಾಕೃತಿಗಳನ್ನು ಹೊಂದಿದೆ, ಮೆಟಾಡೇಟಾ ಮತ್ತು 34 ಲಕ್ಷಕ್ಕೂ ಹೆಚ್ಚು ಗ್ರಂಥಸೂಚಿಗಳ ವಿವರಗಳನ್ನು ಹೊಂದಿದೆ.
ವಿಷಯವನ್ನು ಅಪರೂಪದ ಪುಸ್ತಕಗಳು, ಇ-ಪುಸ್ತಕಗಳು, ಆರ್ಕೈವ್ಗಳು, ಪೇಂಟಿಂಗ್ಗಳು, ಕಥೆಗಳು, ಸುದ್ದಿ ತುಣುಕುಗಳು, ಐತಿಹಾಸಿಕ ನಗರಗಳು ಮತ್ತು ಕೋಟೆಗಳು ಮುಂತಾದ 28 ವಿಭಾಗಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಪೋರ್ಟಲ್ ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ ಮತ್ತು ಭಾರತೀಯ ಸಂಸ್ಕೃತಿ ಎನ್ನುವ ಆ್ಯಪ್ ಮೂಲಕ ಪಡೆಯಬಹುದು. ಆಂಡ್ರಾಯ್ಡ್ ಫೋನ್ಗಳು ಮತ್ತು ಐಫೋನ್ ಎರಡರಲ್ಲೂ ಲಭ್ಯವಿದೆ.
ಎನ್ವಿಎಲ್ಐ ಗ್ರಂಥಾಲಯವು ಸಂಸ್ಕೃತಿ ಸಚಿವಾಲಯದ ಒಂದು ಉಪಕ್ರಮವಾಗಿದೆ, ಇದು ಭಾರತದಾದ್ಯಂತ ವಿವಿಧ ಭಂಡಾರಗಳು ಮತ್ತು ಸಂಸ್ಥೆಗಳಿಂದ ಸಾಂಸ್ಕೃತಿಕ ಲೋಕಕ್ಕೆ ಸಂಬಂಧಪಟ್ಟ ದತ್ತಾಂಶವನ್ನು ಹೊಂದಿರುವ ಭಂಡಾರವಾಗಿದೆ.
ಎನ್ವಿಎಲ್ಐ ಯೋಜನೆಯ ಭಾಗವಾಗಿ, ಐಐಟಿ-ಬಿ ಭಾರತೀಯ ಸಂಸ್ಕೃತಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ (www.indianculture.gov.in ) – ಇದು ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಮಾಹಿತಿಯೆಲ್ಲವೂ ಒಂದೇ ಕಡೆ ಸಿಗುವ ಮೂಲವಾಗಿದೆ.
ಎನ್ವಿಎಲ್ಐ ನ ಪ್ರಮುಖ ಲಕ್ಷಣಗಳು: –
ಎಲ್ಲವನ್ನು ಒಳಗೊಂಡ ಡಿಜಿಟಲ್ ಪ್ಲಾಟ್ಫಾರ್ಮ್ – ರಾಷ್ಟ್ರೀಯ ಮತ್ತು ರಾಜ್ಯ ಆರ್ಕೈವ್ಗಳು, ಗ್ರಂಥಾಲಯಗಳು ಮತ್ತು ಜಿಲ್ಲಾ ಗೆಜೆಟಿಯರ್ಗಳಂತಹ ಬಹು ಸಾಂಸ್ಕೃತಿಕ ಸಂಪನ್ಮೂಲಗಳು ಸಮಾಜದ ಎಲ್ಲಾ ವರ್ಗಗಗಳಿಗೆ ಲಭಿಸುವಂತೆ ಮಾಡುತ್ತದೆ.
ದತ್ತಾಂಶ ಸಂಗ್ರಹಣೆ ಮತ್ತು ಕ್ಯುರೇಶನ್ (ಸಂಘಟನೆ ಮತ್ತು ಪ್ರಸ್ತುತಿ) – ಸಚಿವಾಲಯದ ವಿವಿಧ ಸಂಸ್ಥೆಗಳಿಂದ ದತ್ತಾಂಶವನ್ನು ಸಂಗ್ರಹಿಸಲಾಗಿದೆ. ಹೀಗೆ ಸ್ವೀಕರಿಸಿದ ದತ್ತಾಂಶವನ್ನು ಸರಿಯಾಗಿ ಸಂಘಟಿಸಿ ಪ್ರಸ್ತುತಪಡಿಸಲಾಗಿದೆ.
ದತ್ತಾಂಶ ಕೊಯ್ಲು (ಡೇಟಾ ಹಾರ್ವೆಸ್ಟಿಂಗ್) – ಕ್ಯುರೇಟೆಡ್ ಡೇಟಾವನ್ನು ಸಾಮಾನ್ಯ ಭಂಡಾರ ಅಥವಾ ರಿಪೋಸಿಟರಿಯಲ್ಲಿ ಕೊಯ್ಲು ಮಾಡಲಾಗುತ್ತದೆ ಮತ್ತು ಭಾರತೀಯ ಸಂಸ್ಕೃತಿ ಪೋರ್ಟಲ್ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.
ಉಚಿತ ಪ್ರವೇಶ – ಆರ್ಕೈವಲ್ ಸಂಪನ್ಮೂಲಗಳು ಮತ್ತು ದಾಖಲೆಗಳಿಗೆ ಉಚಿತ ಪ್ರವೇಶವಿರುತ್ತದೆ
ಸುಧಾರಿತ ಮತ್ತು ಬಳಕೆದಾರ ಸ್ನೇಹಿ ಸಂಪರ್ಕಸಾಧನ – ಪೋರ್ಟಲ್ನ ಸುಲಭ ಮಾದರಿಯು ಬಳಕೆದಾರರು ಬಯಸಿದ ಫಲಿತಾಂಶವನ್ನು ತ್ವರಿತವಾಗಿ ಪಡೆಯಲು ಅನುಮತಿಸುತ್ತದೆ.
ದೃಷ್ಟಿದೋಷವಿರುವ ವರು ಪ್ರವೇಶಿಸಬಹುದು – ಪೋರ್ಟಲ್ ನಿರ್ದಿಷ್ಟ ವೈಶಿಷ್ಟ್ಯಗಳು ಮತ್ತು ಕಾರ್ಯಗಳನ್ನು ಹೊಂದಿದೆ ಅದು ದೃಷ್ಟಿದೋಷವಿರುವವರಿಗೆ ಕಷ್ಟವಿಲ್ಲದೆ ಪೋರ್ಟಲ್ ಅನ್ನು ಓದಲು ಮತ್ತು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಫೇಸೆಟೆಡ್ ಮತ್ತು ಸುಧಾರಿತ ಹುಡುಕಾಟ – ಫೇಸೆಟೆಡ್ ಹುಡುಕಾಟವು ಫಿಲ್ಟರ್ಗಳ ಬಳಕೆಯೊಂದಿಗೆ ಪೋರ್ಟಲ್ನ ವಿವಿಧ ಪದರಗಳ ಮೂಲಕ ನೋಡಲು ಬಳಕೆದಾರರಿಗೆ ಅನುಮತಿಸುತ್ತದೆ. ಸುಧಾರಿತ ಹುಡುಕಾಟವು ಲೇಖಕರ ಹೆಸರು, ಶೀರ್ಷಿಕೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳನ್ನು ಬಳಸಿಕೊಂಡು ಪುಸ್ತಕಗಳು ಮತ್ತು ಇತರ ಸಂಪನ್ಮೂಲಗಳನ್ನು ಹುಡುಕಲು ಸಹಾಯ ಮಾಡುತ್ತದೆ.
ದ್ವಿಭಾಷಾ ಡಿಜಿಟಲ್ ಪ್ಲಾಟ್ಫಾರ್ಮ್ – ಪೋರ್ಟಲ್ ದ್ವಿಭಾಷಾ ಮತ್ತು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.
ಅಪರೂಪದ ಪುಸ್ತಕಗಳು ಮತ್ತು ಇ-ಪುಸ್ತಕಗಳಿಗಾಗಿ ಡಿಜಿಟಲ್ ಫ್ಲಿಪ್ಬುಕ್ – ಈ ವಿಶೇಷ ವೈಶಿಷ್ಟ್ಯವು ಪೋರ್ಟಲ್ನಲ್ಲಿರುವ ಎಲ್ಲಾ ಪುಸ್ತಕಗಳಿಗೆ ಲಭ್ಯವಿದೆ. ಪೋರ್ಟಲ್ನಲ್ಲಿ ಅಪರೂಪದ ಪುಸ್ತಕಗಳನ್ನು ಡೌನ್ಲೋಡ್ ಕೂಡಾ ಮಾಡಬಹುದು.
ಸುಲಭವಾಗಿ ಓದಬಹುದಾದ ವಿಷಯ ವಸ್ತು – ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯವನ್ನು ಎಲ್ಲಾ ವರ್ಗದ ಜನರು ಓದಲು ಅನುಕೂಲವಾಗುವಂತೆ ಸುಲಭವಾದ ರೂಪದಲ್ಲಿ ಬರೆಯಲಾಗಿದೆ.
ಕ್ಯೂ ಆರ್ ಕೋಡ್ ಹಂಚಿಕೆ – ಪೋರ್ಟಲ್ನಲ್ಲಿನ ದತ್ತಾಂಶವನ್ನು ಅನನ್ಯ ಕ್ಯೂ ಆರ್ ಕೋಡ್ಗಳನ್ನು ಬಳಸಿಕೊಂಡು ಸುಲಭವಾಗಿ ಹಂಚಿಕೊಳ್ಳಬಹುದು. ಒಮ್ಮೆ ಸ್ಕ್ಯಾನ್ ಮಾಡಿದ ನಂತರ, ಬಯಸಿದ ಪುಟವನ್ನು ಫೋನ್ ಮತ್ತು ಇತರ ಸಾಧನಗಳಲ್ಲಿ ಸುಲಭವಾಗಿ ಪಡೆಯಬಹುದು.
ನಿರಂತರ ಬೆಳವಣಿಗೆ ಮತ್ತು ಹೊಸ ಸೇರ್ಪಡೆಗಳು – ಹೊಸ ವಿಷಯ ಮತ್ತು ಕ್ಯುರೇಟೆಡ್ ದತ್ತಾಂಶಗಳೊಂದಿಗೆ ಪೋರ್ಟಲ್ ನಿರಂತರವಾಗಿ ಬೆಳೆಯುತ್ತಿದೆ. ಪೋರ್ಟಲ್ ಪುಸ್ತಕಗಳು, ಹಸ್ತಪ್ರತಿಗಳು, ಆರ್ಕೈವಲ್ ದಾಖಲೆಗಳು, ಚಿತ್ರಗಳು, ವೀಡಿಯೊಗಳು ಮತ್ತು ಇತರ ಸಂಪನ್ಮೂಲಗಳ ರೂಪದಲ್ಲಿ ಲಕ್ಷಗಟ್ಟಲೆ ದತ್ತಾಂಶದ ಭಂಡಾರವಾಗಿದೆ.
ಭಾರತೀಯ ಸಂಸ್ಕೃತಿ ಪೋರ್ಟಲ್ನಲ್ಲಿ ಪ್ರಸ್ತುತ ಲಭ್ಯವಿರುವ ವರ್ಗಗಳು: –
ಅಪರೂಪದ ಪುಸ್ತಕಗಳು, ಇ-ಪುಸ್ತಕಗಳು, ಆರ್ಕೈವ್ಗಳು, ಗೆಜೆಟ್ಗಳು ಮತ್ತು ಗೆಜೆಟಿಯರ್ಗಳು, ಹಸ್ತಪ್ರತಿಗಳು, ಮ್ಯೂಸಿಯಂ ಸಂಗ್ರಹಗಳು, ಚಿತ್ರಕಲೆಗಳು, ಆಡಿಯೊಗಳು, ಅಮೂರ್ತ ಸಾಂಸ್ಕೃತಿಕ ಪರಂಪರೆ, ಫೋಟೋ ಆರ್ಕೈವ್ಗಳು, ಚಿತ್ರಗಳು, ವೀಡಿಯೊಗಳು, ಯುನೆಸ್ಕೋದಿಂದ ವಿಷಯ, ಸಂಶೋಧನಾ ಪ್ರಬಂಧಗಳು, ಭಾರತೀಯ ರಾಷ್ಟ್ರೀಯ ಗ್ರಂಥಸೂಚಿ, ವರದಿಗಳು ಮತ್ತು ಇತರ ಸಂಗ್ರಹಣೆಗಳು ಇತ್ಯಾದಿ. ಕಥೆಗಳು, ಸುದ್ದಿ ತುಣುಕುಗಳು, ಫೋಟೋ ಪ್ರಬಂಧಗಳು, ಭಾರತದ ಕೋಟೆಗಳು, ಭಾರತದ ಜವಳಿ ಮತ್ತು ಬಟ್ಟೆಗಳು, ಭಾರತದ ಐತಿಹಾಸಿಕ ನಗರಗಳು, ಭಾರತದ ಸಂಗೀತ ಉಪಕರಣಗಳು, ಆಹಾರ ಮತ್ತು ಸಂಸ್ಕೃತಿ, ವರ್ಚುವಲ್ ವಲ್ಕ್ಥ್ರೂಗಳು ಮತ್ತು ಸ್ವಾತಂತ್ರ್ಯ ಹೋರಾಟದ ಆರ್ಕೈವ್ – ಪ್ರಚಾರಪಡೆಯದ ವೀರರು ಇತ್ಯಾದಿ.
ಈಶಾನ್ಯ ಪ್ರದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ ಅವರು ಲೋಕಸಭೆಯಲ್ಲಿ ಈ ಮಾಹಿತಿಯನ್ನು ವಿವರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.