ಪ್ರಸ್ತುತ ದಿನದ ಬಹು ಚರ್ಚಿತ ವಿಚಾರ ಹಲಾಲ್. ಇಂದಿನ ದಿನಗಳಲ್ಲಿ ಮುಸ್ಲಿಮೇತರ ಸಮುದಾಯಗಳು ಪರೋಕ್ಷವಾಗಿ ‘ಹಲಾಲ್’ ಉತ್ಪನ್ನಗಳನ್ನು ಖರೀದಿಸುವಂತೆ ಮಾಡಲಾಗುತ್ತಿದೆ. ಬಹುಸಂಖ್ಯಾತ ಮತ್ತು ಇತರ ಮುಸಲ್ಮಾನೇತರ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಇದರಿಂದ ಧಕ್ಕೆಯಾಗಿದೆ. ಹಲಾಲ್ ಪ್ರಮಾಣೀಕರಣ ಭಾರತದಲ್ಲಿ ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತಿದೆ. ಆಹಾರದಲ್ಲಿ ಧರ್ಮ ಬೇಡ ಅನ್ನುವವರು ಕೂಡ ಹಲಾಲ್ ಪದ್ಧತಿಯಲ್ಲಿ ಅಡಗಿರುವ ಧರ್ಮದ ಹಿಡನ್ ಅಜೆಂಡಾ ಕುರಿತು ಚರ್ಚೆಗೆ ಮುಂದಾಗುತ್ತಿಲ್ಲ.
ಹಲಾಲ್ ಮಾಂಸ ಎಂದರೇನು ?
ಮುಸ್ಲಿಮರು ಷರಿಯಾ ನಿಯಮದ ಪ್ರಕಾರ ಪ್ರಾಣಿಗಳನ್ನು ಕೊಂದರೆ ಮಾತ್ರ ಹಲಾಲ್ ಎಂದು ಪರಿಗಣಿಸಲಾಗುತ್ತದೆ. ಒಂದೊಂದು ಪ್ರಾಣಿಯ ವಧೆಗೂ ಪ್ರತ್ಯೇಕ ನಿಯಮವಿರುತ್ತದೆ. ಸೌದಿಯಲ್ಲಿರುವ ಮೆಕ್ಕಾ ಮಸೀದಿಯತ್ತ ಮುಖ ಮಾಡಿ ಪ್ರಾಣಿಯನ್ನು ವಧಿಸಲಾಗುತ್ತದೆ. ವಧಿಸುವ ವ್ಯಕ್ತಿಯು ಅಲ್ಲಾಹುವಿನ ನಾಮೋಚ್ಛಾರ ಮಾಡುತ್ತಾ, ಕಡಿಯುವ ಮುಂಚೆ ಕುರಾನಿನ ಕೆಲ ಸಾಲುಗಳನ್ನು ಉಚ್ಚರಿಸಿ, ಗಂಟಲಿನ ರಕ್ತನಾಳವನ್ನು ಸೀಳಲಾಗುತ್ತದೆ. ವಧಿಸಲ್ಪಟ್ಟ ಪ್ರಾಣಿಯ ದೇಹದಿಂದ ರಕ್ತವೆಲ್ಲವೂ ಹೊರಬಂದು ನರಳಾಡಿ ನಿಧಾನವಾಗಿ ಸಾಯುತ್ತದೆ. ಇಲ್ಲಿ ವಧಿಸುವವ ಮುಸ್ಲಿಮ್ ಸಮುದಾಯದವನೇ ಆಗಿರಬೇಕು. ಆ ಮೂಲಕ ಹಿಂದೂಗಳ ಉದ್ಯೋಗವನ್ನು ಕಸಿದುಕೊಳ್ಳುತ್ತಾರೆ.
ಜನಸಂಖ್ಯೆಯ 15% – 20% ರಷ್ಟಿರುವ ಮುಸ್ಲಿಮರು ‘ಹಲಾಲ್’ ಮಾಂಸವನ್ನು ಸೇವಿಸಲು ಬಯಸುತ್ತಾರೆ ಎಂಬ ಕಾರಣದಿಂದಾಗಿ, ಅದನ್ನು ಉಳಿದ 85% ಜನರ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ. ಈಗ, ಈ ‘ಹಲಾಲ್’ ಪ್ರಮಾಣೀಕರಣವು ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ, ಇಂದು ಇದು ಆಹಾರ ಪದಾರ್ಥಗಳು, ಸೌಂದರ್ಯವರ್ಧಕಗಳು, ಔಷಧಿಗಳು, ಆಸ್ಪತ್ರೆಗಳು, ಅಪಾರ್ಟ್ಮೆಂಟ್ ಮತ್ತು ಮಾಲ್ಗಳಿಗೂ ವಿಸ್ತರಿಸಿದೆ. ಇದು ತಿಂಡಿಗಳು, ಸಿಹಿತಿಂಡಿಗಳು, ಧಾನ್ಯಗಳು, ಎಣ್ಣೆಗಳು, ಸೌಂದರ್ಯವರ್ಧಕಗಳು, ಸಾಬೂನುಗಳು, ಶಾಂಪೂ, ಟೂತ್ಪೇಸ್ಟ್, ನೇಲ್ ಪಾಲಿಷ್, ಲಿಪ್ಸ್ಟೀಕ್ ಸಹ ಒಳಗೊಂಡಿದೆ. ಹಲಾಲ್ ಪ್ರಮಾಣೀಕರಣದ ವ್ಯಾಪ್ತಿ ಈಗ 40,000 ಕ್ಕೂ ಅಧಿಕ ಉತ್ಪನ್ನಗಳು. ದಿನನಿತ್ಯ ಬಳಸುವ ಟೂಥ್ ಪೇಸ್ಟ್, ಬಿಸ್ಕತ್ತುನಿಂದ ಹಿಡಿದು ಆಸ್ಪತ್ರೆವರೆಗೆ ಹಲಾಲ್ ಸರ್ಟಿಫಿಕೇಟ್ ಇದ್ದರೆ ಮಾತ್ರ ನಾವು ಬಳಸುತ್ತೇವೆ ಎಂದು ಒತ್ತಡ ಹೇರುವ ಮೂಲಕ ದೊಡ್ಡ ದೊಡ್ಡ ಕಂಪೆನಿಗಳೂ ಹಲಾಲ್ ಸರ್ಟಿಫಿಕೇಟ್ ಪಡೆಯುವಂತೆ ಮಾಡಲಾಗುತ್ತಿದೆ. ಇತ್ತೀಚೆಗೆ ಆರಂಭವಾದ ಹಲಾಲ್ ಪ್ರವಾಸೋದ್ಯಮದಲ್ಲಿ, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಮದ್ಯವನ್ನು ನೀಡುವುದಿಲ್ಲ ಮತ್ತು ಅವರ ರೆಸ್ಟೋರೆಂಟ್ಗಳಲ್ಲಿ ಹಲಾಲ್ ಪ್ರಮಾಣೀಕೃತ ಆಹಾರವನ್ನು ಮಾತ್ರ ನೀಡಬೇಕು. ಸ್ಪಾ ಮತ್ತು ಈಜುಕೊಳದ ಸೌಲಭ್ಯಗಳು, ಪ್ರಾರ್ಥನಾ ಕೊಠಡಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿರಬೇಕು ಎಂಬ ನಿಯಮವಿದೆ. ಮುಸ್ಲಿಮರಿಗಾಗಿ ಆಸ್ಪತೆಗಳಿಗೂ ಹಲಾಲ್ ಸರ್ಟಿಫಿಕೇಟ್ ಆರಂಭವಾಗಿರುವುದು ದುರಂತವಾಗಿದೆ. ಅಲ್ಲಿ ಹಲಾಲ್ ಪ್ರಮಾಣೀಕೃತ ಆಹಾರ, ಔಷಧಿಗಳು ಮಾತ್ರವಲ್ಲದೇ ಆಸ್ಪತ್ರೆಗಳ ಬೆಡ್ಗಳು ಮೆಕ್ಕಾದ ದಿಕ್ಕಿಗೆ ಮುಖಮಾಡುವಂತೆ ನಿರ್ಬಂಧ ಹೇರುತ್ತಿದ್ದಾರೆ. ಈ ಹಲಾಲ್ ಪ್ರಮಾಣೀಕರಣ ಹಿಂದೂ ಉದ್ಯಮಿಗಳ ವ್ಯವಹಾರಗಳನ್ನು, ಹಿಂದೂ ಉದ್ಯೋಗಿಗಳ ಕೆಲಸವನ್ನು ನಿರ್ಬಂಧಿಸುತ್ತಿದೆ.
ಅತ್ಯಂತ ಮುಖ್ಯವಾದ ವಿಷಯವೆಂದರೆ ಅಂತಹ ಪ್ರಮಾಣೀಕರಣವನ್ನು ಭಾರತದ ಎಫ್ಎಸ್ಎಸ್ಎಐ ನೀಡುತ್ತಿಲ್ಲ. ಹಲಾಲ್ ಪ್ರಮಾಣೀಕರಣವನ್ನು ಭಾರತದಲ್ಲಿ ಮುಸ್ಲಿಂ ಒಡೆತನದ ಅನೇಕ ಖಾಸಗಿ ಕಂಪನಿಗಳು/ ಟ್ರಸ್ಟ್ ಗಳು ನೀಡುತ್ತವೆ, ಇದಕ್ಕೆ ಕಾನೂನು ಮಾನ್ಯತೆ ದೇಶದಲ್ಲಿ ಇಲ್ಲ. ಆದರೂ ಅದನ್ನು ಬಲವಂತವಾಗಿ ಹೇರಲಾಗುತ್ತಿದೆ. ಇದು ಇಸ್ಲಾಂ ಧರ್ಮದ ಅನುಯಾಯಿಗಳಿಗೆ ಅನುಮತಿಸುವ ಆಹಾರ ಅಥವಾ ಉತ್ಪನ್ನಗಳನ್ನು ವರ್ಗೀಕರಿಸುತ್ತಿದೆ.
ಭಾರತದಲ್ಲಿನ ಪ್ರಮುಖ ಹಲಾಲ್ ಪ್ರಮಾಣೀಕರಣ ಕಂಪನಿಗಳು:
1- ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್.
2- ಹಲಾಲ್ ಸರ್ಟಿಫಿಕೇಶನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್.
3- ಜಮಿಯತ್ ಉಲಮಾ-ಇ-ಮಹಾರಾಷ್ಟ್ರ- ಜಮಿಯತ್ ಉಲಮಾ-ಇ-ಹಿಂದ್ನ ರಾಜ್ಯ ಘಟಕ.
4- ಜಮಿಯತ್ ಉಲಮಾ-ಇ-ಹಿಂದ್ ಹಲಾಲ್ ಟ್ರಸ್ಟ್
ಇವರ ಈ ಸರ್ಟಿಫಿಕೇಟ್ ಗೆ ತೆರಬೇಕಾದ ಬೆಲೆ ರೂ 20-70 ಸಾವಿರದ ತನಕ. ಪ್ರತಿ ಉತ್ಪನ್ನಗಳಿಗೆ ಪ್ರತ್ಯೇಕ ಸರ್ಟಿಫಿಕೇಟ್, ಅದರಲ್ಲೂ ಲೋಗೋ, ವಾರ್ಷಿಕ ನವೀಕರಣ ವೆಚ್ಚ ಬೇರೆ ಬೇರೆ ಇರುತ್ತದೆ. https://www.jamiathalaltrust.org/fee-structure.php
ಈ ಸಂಸ್ಥೆಗಳು ಒಮ್ಮೆ ಅಪ್ಲಿಕೇಶನ್ ಮಾಹಿತಿಯನ್ನು ಪರಿಶೀಲಿಸಿದ ನಂತರ, ಲೆಕ್ಕಪರಿಶೋಧಕರು (ಸಾಮಾನ್ಯವಾಗಿ ಒಬ್ಬ ಷರಿಯಾ ಲೆಕ್ಕ ಪರಿಶೋಧಕರು ಮತ್ತು ಒಬ್ಬರು ತಾಂತ್ರಿಕ ಲೆಕ್ಕ ಪರಿಶೋಧಕರು) ತಪಾಸಣೆಗಾಗಿ ವ್ಯಾಪಾರಕ್ಕೆ ಭೇಟಿ ನೀಡುತ್ತಾರೆ. ಹಲಾಲ್ ಪ್ರಮಾಣೀಕರಣಕ್ಕೆ ಕಂಪೆನಿ/ ಸಂಸ್ಥೆ ಸ್ವೀಕಾರಾರ್ಹವೇ ಎಂದು ಲೆಕ್ಕಪರಿಶೋಧಕರು ಪರಿಶೀಲಿಸುತ್ತಾರೆ. ಷರಿಯಾ ಪ್ರಕಾರ ಉತ್ಪನ್ನಗಳ ತಯಾರಿಸುತ್ತಾರೆಯೇ ಅಂತ ಗಮನಿಸಲಾಗುತ್ತದೆ. ಇದರಿಂದಾಗಿ ಹಲಾಲ್ ಪ್ರಮಾಣೀಕರಣವನ್ನು ಪಡೆಯಲು, ತಯಾರಿಕೆಯ ಪ್ರಕ್ರಿಯೆಯಲ್ಲಿ ಹಲವಾರು ಮಾರ್ಪಾಡುಗಳನ್ನು ಕಂಪೆನಿಗಳು ಮಾಡಬೇಕಾಗುತ್ತದೆ.
ಹಲಾಲ್ ಪ್ರಮಾಣೀಕರಣ ನೀಡುವ ಕೆಲ ಟ್ರಸ್ಟ್ ದೇಶ ವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿದೆ. ಉತ್ತರ ಪ್ರದೇಶದ ಹಿಂದೂ ಮುಖಂಡ ಕಮಲೇಶ್ ತಿವಾರಿ ಹತ್ಯೆಯ ಆರೋಪಿಗಳಿಗೆ ಕಾನೂನು ನೆರವು ನೀಡುವುದಾಗಿ ಜಮಿಯತ್ ಘೋಷಿಸಿತ್ತು. ಭಯೋತ್ಪಾದನೆಯಂತಹ ಹೇಯ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸಹಾಯ ಮಾಡಲು ಹಲಾಲ್ ಹಣವನ್ನು ಬಳಸಲಾಗಿದೆ. ದೇಶದ್ರೋಹಿ ಚಟುವಟಿಕೆಗಳಿಗೆ ಪರೋಕ್ಷವಾಗಿ ಹಲಾಲ್ ಆರ್ಥಿಕತೆ ಬೆಂಬಲಕ್ಕೆ ನಿಂತಿದೆ.
ಹಲಾಲ್ ಹಿಂದಿರುವ ಮುಚ್ಚಿಟ್ಟಿರುವ ಸತ್ಯವನ್ನು ಅರಿಯಬೇಕಿದೆ. ಈ ಹಲಾಲ್ ಆರ್ಥಿಕತೆಯು ಪ್ರಪಂಚದಾದ್ಯಂತ ವಿಸ್ತಾರವಾದ ನೆಲೆಯನ್ನು ಗಳಿಸಿದೆ. ಅಡ್ರೊಯಿಟ್ ಮಾರ್ಕೆಟ್ ರಿಸರ್ಚ್ನ ಅಧ್ಯಯನವು 2017 ರಲ್ಲಿ ಜಾಗತಿಕ ಹಲಾಲ್ ಮಾರುಕಟ್ಟೆಯ ಗಾತ್ರವು 4.54 ಟ್ರಿಲಿಯನ್ ಡಾಲರ್ಗಳನ್ನು ತಲುಪಿದೆ (ಜರ್ಮನಿ, ಭಾರತ ಮತ್ತು ಯುಕೆ ದೇಶಗಳ ಪ್ರಸ್ತುತ ಜಿಡಿಪಿಗಿಂತ ಹೆಚ್ಚು) ಮತ್ತು 2025 ರ ವೇಳೆಗೆ 9.71 ಟ್ರಿಲಿಯನ್ ಡಾಲರ್ಗೆ ಏರುವ ನಿರೀಕ್ಷೆಯಿದೆ ಎಂದಿದೆ. ಭಾರತದಲ್ಲಿ ಹಲಾಲ್ ಎಂಬ ಪ್ರಮಾಣೀಕರಣ ಧಂದೆ ಹಿಂದೂಗಳ ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಧ್ಯಪ್ರವೇಶಿಸುವ ಅಂತರರಾಷ್ಟ್ರೀಯ ಪಿತೂರಿಯಾಗಿದೆ. ಇದು ಬಹುಸಂಖ್ಯಾತರ ಮೇಲೆ ಅಲ್ಪಸಂಖ್ಯಾತ ಮುಸ್ಲಿಮರು ನಡೆಸುವ ಸರ್ವಾಧಿಕಾರವಾಗಿದೆ. ಇಂದು ಇದು ಕೇವಲ ಮಾಂಸಕ್ಕೆ ಸಂಬಂಧಿಸಿದ ಸರ್ಟಿಫಿಕೇಟ್ ಆಗಿ ಮಾತ್ರ ಉಳಿದಿಲ್ಲ ಇದೊಂದು ಪರೋಕ್ಷವಾದ ಆರ್ಥಿಕ ಜಿಹಾದ್ !
✍️ಪ್ರಶಾಂತ್ ಎಂ. ಉಬಾರ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.