ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ರಾಜಕೀಯ ಅವ್ಯವಸ್ಥೆ ಉಂಟಾಗಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡಿದೆ. ಆಡಳಿತರೂಢ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ)ನ ಮಿತ್ರ ಪಕ್ಷವಾದ ಮುತ್ತಹಿದಾ ಕ್ವಾಮಿ ಮೂವ್ಮೆಂಟ್ – ಪಾಕಿಸ್ಥಾನ (ಎಂಕ್ಯೂಎಂ-ಪಿ) ಪ್ರತಿಪಕ್ಷಗಳೊಂದಿಗೆ ಕೈಜೋಡಿಸಲು ನಿರ್ಧರಿಸಿದೆ. ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಅದು ಪ್ರತಿಪಕ್ಷಗಳನ್ನು ಬೆಂಬಲಿಸಲಿದೆ.
ಈ ಬೆಳವಣಿಗೆಯ ನಂತರ ಇಮ್ರಾನ್ ಖಾನ್ ಸರ್ಕಾರವು ಪಾಕಿಸ್ಥಾನ ಸಂಸತ್ತಿನ ಕೆಳಮನೆಯಲ್ಲಿ ತನ್ನ ಬಹುಮತವನ್ನು ಕಳೆದುಕೊಂಡಿದೆ.
ಈಗ ಸಂಸತ್ತಿನಲ್ಲಿ ಪಾಕಿಸ್ಥಾನ ಸರ್ಕಾರ ಕೇವಲ 164 ಸದಸ್ಯರನ್ನು ಹೊಂದಿದೆ. ಪಾಕಿಸ್ತಾನಿ ರಾಷ್ಟ್ರೀಯ ಅಸೆಂಬ್ಲಿ ಒಟ್ಟು 342 ಸದಸ್ಯರ ಬಲವನ್ನು ಹೊಂದಿದೆ, ಬಹುಮತಕ್ಕೆ 172 ಸ್ಥಾನ ಬೇಕು. ಪಿಟಿಐ ನೇತೃತ್ವದ ಒಕ್ಕೂಟವು 179 ಸದಸ್ಯರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತು, ಆದರೆ ಈಗ, ಎಂಕ್ಯೂಎಂ-ಪಿ ಒಕ್ಕೂಟ ತೊರೆದ ನಂತರ ಪಿಟಿಐ 164 ಸದಸ್ಯರನ್ನು ಮಾತ್ರ ಹೊಂದಿದೆ. ಈಗ ವಿರೋಧ ಪಕ್ಷವು ರಾಷ್ಟ್ರೀಯ ಅಸೆಂಬ್ಲಿಯಲ್ಲಿ 177 ಸದಸ್ಯರ ಬೆಂಬಲ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.