ಚೆನ್ನೈ: ಏರ್ಥಿಂಗ್ಸ್ ಮಾಸ್ಟರ್ಸ್ ಆನ್ಲೈನ್ ರಾಪಿಡ್ ಚೆಸ್ ಟೂರ್ನಿಯಲ್ಲಿ ಭಾರತದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸೋಮವಾರ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಮಣಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.
16 ವರ್ಷದ ಪ್ರಜ್ಞಾನಂದ ಅವರು ಟೂರ್ನಿಯ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿ 39 ನಡೆಗಳಲ್ಲಿ ನಾರ್ವೆ ಆಟಗಾರ ಮ್ಯಾಗ್ನಸ್ ಕಾರ್ಲಸನ್ ಅವರನ್ನು ಸೋಲಿಸಿದ್ದಾರೆ. ಇದರಿಂದಾಗಿ ಸತತ ಮೂರು ಆಟಗಳಲ್ಲಿ ಗೆದ್ದು ಮುನ್ನಡೆಯನ್ನು ಸಾಧಿಸಿದ್ದ ಕಾರ್ಲ್ಸನ್ ಅವರಿಗೆ ಹಿನ್ನಡೆಯಾಗಿದೆ.
8 ಸುತ್ತುಗಳ ಬಳಿಕ 8 ಪಾಯಿಂಟ್ ಗಳಿಸಿರುವ ಪ್ರಜ್ಞಾನಂದ ಸದ್ಯ ಜಂಟಿ 12ನೇ ಸ್ಥಾನದಲ್ಲಿದ್ದಾರೆ.
ಆರ್.ಪ್ರಜ್ಞಾನಂದ ಅವರ ಸಾಧನೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಕೊಂಡಾಡಿದ್ದು, ನೀವು ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದೀರ ಎಂದು ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
What a wonderful feeling it must be for Pragg. All of 16, and to have beaten the experienced & decorated Magnus Carlsen, and that too while playing black, is magical!
Best wishes on a long & successful chess career ahead. You’ve made India proud! pic.twitter.com/hTQiwznJvX
— Sachin Tendulkar (@sachin_rt) February 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.