ನವದೆಹಲಿ: ಈ ಹಣಕಾಸು ವರ್ಷದಲ್ಲಿ ಭಾರತೀಯ ಐಟಿ ಉದ್ಯಮವು 200 ಬಿಲಿಯನ್ ಡಾಲರ್ಗೂ ಅಧಿಕ ಆದಾಯವನ್ನು ಗಳಿಸಿದೆ ಎಂದು ಸಾಫ್ಟ್ವೇರ್ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಸಂಘ (NASSCOM) ಹೇಳಿದೆ.
ಸುಮಾರು ಐದು ಮಿಲಿಯನ್ ನೇರ ಉದ್ಯೋಗಗಳೊಂದಿಗೆ, ಐಟಿ ಉದ್ಯಮವು ಭಾರತದಲ್ಲಿ ಅತಿದೊಡ್ಡ ಖಾಸಗಿ ವಲಯದ ಉದ್ಯೋಗದಾತವಾಗಿ ಹೊರಹೊಮ್ಮಿದೆ. ವಾಸ್ತವವಾಗಿ, ಎರಡು ಮಿಲಿಯನ್ ಉದ್ಯೋಗಗಳು ಕಳೆದ ಒಂದೆರಡು ವರ್ಷಗಳಲ್ಲಿ ಸೇರ್ಪಡೆಯಾಗಿದೆ.
FY22 ರಲ್ಲಿ ಸುಮಾರು 450,000 ಐಟಿ ಉದ್ಯೋಗಗಳನ್ನು ಸೇರಿಸಲಾಗಿದೆ ಎಂದು ಉದ್ಯಮ ಸಂಸ್ಥೆಯ ಸ್ಟ್ರಾಟೆಜಿಕ್ ರಿವ್ಯೂ ವರದಿ ಬಹಿರಂಗಪಡಿಸಿದೆ. ಇದಲ್ಲದೆ, ಪ್ರಸ್ತುತ ಆರ್ಥಿಕ ವರ್ಷದಲ್ಲಿ ಸುಮಾರು 200,000 ಮಹಿಳೆಯರನ್ನು ಐಟಿ ಕಂಪನಿಗಳು ನೇಮಿಸಿಕೊಂಡಿವೆ.
FY22 ರಲ್ಲಿ ಉದ್ಯಮವು ಹೆಚ್ಚುತ್ತಿರುವ ಆದಾಯದಲ್ಲಿ 30 ಬಿಲಿಯನ್ ಡಾಲರ್ ಸೇರಿಸಿದೆಿದು 15.5 ರಷ್ಟು ಒಟ್ಟಾರೆ ಬೆಳವಣಿಗೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನದ ಅಳವಡಿಕೆಯ ತ್ವರಿತ ವೇಗ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ಕ್ಲೌಡ್ ಮೈಗ್ರೇಶನ್ ಈ ವಲಯದಲ್ಲಿ ದಾಖಲಾದ ದೃಢವಾದ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ.
ಐಟಿ ಉದ್ಯಮದಲ್ಲಿ ಶೇಕಡಾ 30-32 ರಷ್ಟು ಬೆಳವಣಿಗೆಯು ಡಿಜಿಟಲ್ ಸೇವೆಗಳಿಂದ ಬರುತ್ತಿದೆ.
178 ಬಿಲಿಯನ್ ಡಾಲರ್ ಪೈಕಿ ಈ ವಲಯವು ಭಾರತದ ಸೇವಾ ರಫ್ತಿನ 51 ಪ್ರತಿಶತವನ್ನು ಹೊಂದಿದೆ ಮತ್ತು ಅನೇಕ ಉಪ-ವಲಯಗಳಲ್ಲಿಯೂ ಎರಡು-ಅಂಕಿಯ ಬೆಳವಣಿಗೆಯನ್ನು ಕಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.