ನವದೆಹಲಿ: ಯೋಗದಿಂದ ಲಾಭ ಪಡೆದಂತೆ ಭಾರತೀಯ ಸಂಗೀತದ ಲಾಭ ಪಡೆಯಲು ಜಗತ್ತು ಅರ್ಹವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಂಡಿತ್ ಜಸರಾಜ್ ಕಲ್ಚರಲ್ ಫೌಂಡೇಶನ್ ಅನ್ನು ಉದ್ಘಾಟಿಸಿದ ನಂತರ ನಿನ್ನೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗದಂತೆಯೇ ಭಾರತೀಯ ಸಂಗೀತವೂ ಮಾನವನ ಮನಸ್ಸಿನ ಆಳವನ್ನು ಕಲಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪ್ರಪಂಚವು ಅದರ ಪ್ರಯೋಜನವನ್ನು ಪಡೆಯಲು ಅರ್ಹವಾಗಿದೆ ಎಂದಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಜಸರಾಜ್ ಜಯಂತಿಯ ಸಂದರ್ಭದಲ್ಲಿ ಪಂಡಿತ್ ಜಸರಾಜ್ ಅವರಿಗೆ ಗೌರವ ಸಲ್ಲಿಸಿದ ಮೋದಿ, ಅವರ ಅದ್ಭುತ ಪರಂಪರೆಯನ್ನು ಜೀವಂತವಾಗಿಟ್ಟಿದ್ದಕ್ಕಾಗಿ ದುರ್ಗಾ ಜಸರಾಜ್ ಮತ್ತು ಪಂಡಿತ್ ಶಾರಂಗ್ ದೇವ್ ಅವರನ್ನು ಶ್ಲಾಘಿಸಿದರು.
ಭಾರತದ ಶ್ರೀಮಂತ ಪರಂಪರೆಯ ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವ ಗುರಿಗಾಗಿ ಸ್ಥಾಪಿಸಲ್ಪಟ್ಟ ಪಂಡಿತ್ ಜಸರಾಜ್ ಕಲ್ಚರಲ್ ಫೌಂಡೇಶನ್ ಅನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಕಾಶಿಯಂತಹ ಸಂಸ್ಕೃತಿ ಮತ್ತು ಕಲೆಯ ಕೇಂದ್ರಗಳನ್ನು ಪುನರುಜ್ಜೀವನಗೊಳಿಸುವ ಇತ್ತೀಚಿನ ಪ್ರಯತ್ನಗಳನ್ನು ಅವರು ಕೊಂಡಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.