ನವದೆಹಲಿ: ಕೌಂಟರ್ಪಾಯಿಂಟ್ ರಿಸರ್ಚ್ನ ವರದಿಯ ಪ್ರಕಾರ, ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯು 2021 ರಲ್ಲಿ 169 ಮಿಲಿಯನ್ ಯುನಿಟ್ ಮಾರಾಟವನ್ನು ತಲುಪುವ ಮೂಲಕ ಮಹತ್ವದ ಸಾಧನೆ ಮಾಡಿದೆ.
ಕೌಂಟರ್ಪಾಯಿಂಟ್ ರಿಸರ್ಚ್ನ ಮಾರುಕಟ್ಟೆ ಮಾನಿಟರ್ ಸೇವೆಯ ಪ್ರಾಥಮಿಕ ಮಾಹಿತಿಯು 2021 ರಲ್ಲಿ ಭಾರತದ ಸ್ಮಾರ್ಟ್ಫೋನ್ ಸಾಗಣೆಗಳು 169 ಮಿಲಿಯನ್ ಯುನಿಟ್ಗಳನ್ನು ದಾಟಿದೆ ಎಂದಿದೆ. ಇದು 2020 ರಲ್ಲಿ ಸುಮಾರು 152 ಮಿಲಿಯನ್ ಯುನಿಟ್ ಆಗಿತ್ತು. ವರ್ಷದಿಂದ ವರ್ಷಕ್ಕೆ ಶೇಕಡಾ 11 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
5G ಸ್ಮಾರ್ಟ್ಫೋನ್ಗಳಿಗೆ ಹೆಚ್ಚಿದ ಬೇಡಿಕೆಯು 2021 ರಲ್ಲಿ ಹೆಚ್ಚಿನ ಮಾರಾಟಕ್ಕೆ ಪ್ರಮುಖವಾದ ಅಂಶಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.
5G ಸ್ಮಾರ್ಟ್ಫೋನ್ಗಳು 2021 ರಲ್ಲಿ ಒಟ್ಟಾರೆ ಸಾಗಣೆಗಳಲ್ಲಿ ಸುಮಾರು ಶೇ.17 ರಷ್ಟು ಕೊಡುಗೆ ನೀಡಿದ್ದು, 2020 ಕ್ಕೆ ಹೋಲಿಸಿದರೆ 6x ಬೆಳವಣಿಗೆಯನ್ನು ದಾಖಲಿಸಿದೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.