ನವದೆಹಲಿ: ಪ್ರಧಾನಿ ನರೇಂದ್ರ ಮೋದಿವರು ಮಂಗಳವಾರ ಬಿಹಾರದ ಭಾಗಲ್ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಇದು ಆ ರಾಜ್ಯದಲ್ಲಿ ಅವರು ನಡೆಸುತ್ತಿರುವ ನಾಲ್ಕನೇ ಸಮಾವೇಶವಾಗಿದೆ. ನವೆಂಬರ್ ತಿಂಗಳಲ್ಲಿ ಇಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ಅಭಿವೃದ್ಧಿಗಾಗಿ, ಬದಲಾವಣೆಗಾಗಿ ಮತದಾನ ಮಾಡಿ ಎಂದು ಅವರು ಈ ವೇಳೆ ಜನತೆಗೆ ಕರೆ ನೀಡಿದರು.
ನೇಪಾಳದಲ್ಲಿ ಭೂಕಂಪ ಸಂಭವಿಸಿದ ಕೂಡಲೇ ಬಿಹಾರದಲ್ಲಿ ಪರಿಸ್ಥಿತಿ ಹೇಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ವಿಚಾರಿಸಿದ ಮೊದಲ ವ್ಯಕ್ತಿ ನಾನು. ನಮ್ಮಿಂದ (ಕೇಂದ್ರದಿಂದ) ಬಿಹಾರಕ್ಕೆ 3.66 ಲಕ್ಷ ಕೋಟಿ ಬರುತ್ತದೆ, ಆದರೆ ನೀವು ಕೇವಲ 2.7 ಲಕ್ಷ ಕೋಟಿ ಪ್ಯಾಕೇಜ್ ಮಾತ್ರ ಬಳಕೆ ಮಾಡುತ್ತಿದ್ದೀರಿ, ಉಳಿದ 1ಕೋಟಿ ಆರು ಸಾವಿರ ಕೋಟಿ ಎಲ್ಲಿಗೆ ಹೋಯಿತು? ಮೇವಿನ ಪುಸ್ತಕಕ್ಕೆ ಹೋಯಿತೇ? ಎಂದು ಅವರು ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮೊನ್ನೆ ನಡೆದ ಕಾಂಗ್ರೆಸ್, ಜೆಡಿಯು, ಆರ್ಜೆಡಿ ಸಮಾವೇಶವನ್ನು ಟೀಕಿಸಿದ ಅವರು, ಈ ಸಮಾವೇಶ ಬಿಹಾರವನ್ನು ಹೇಗೆ ಮುಂದಕ್ಕೆ ಕರೆದೊಯ್ಯಬೇಕು ಎಂಬುದನ್ನು ವಿವರಿಸುವಲ್ಲಿ ವಿಫಲವಾಗಿದೆ. ಇದೊಂದು ತಿಲಾಂಜಲಿ ಸಮಾವೇಶ, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಅವರಿಗೆ ಮಾಡಿದ ವಂಚನೆ ಎಂದು ಹರಿಹಾಯ್ದರು.
ಬಿಹಾರದ ಈಗಿನ ಸರ್ಕಾರ ತನ್ನ ಕೆಲಸಕಾರ್ಯದ ನಿಖರ ಅಕೌಂಟ್ ನೀಡಲು ವಿಫಲವಾಗಿದೆ, 25 ವರ್ಷದಿಂದ ಆಡಳಿತ ನಡೆಸುತ್ತಿರುವ ಸರ್ಕಾರ ನಿಖರ ಲೆಕ್ಕಾಚಾರಗಳನ್ನು ನೀಡಬೇಕು. 2019ರಲ್ಲಿ ಲೋಕಸಭಾ ಚುನಾವಣೆಯ ವೇಳೆ ನಿಮ್ಮ ಬಳಿಗೆ ಬಂದಾಗ ನಮ್ಮ ಸರ್ಕಾರ ಮಾಡಿದ ಪ್ರತಿ ಕಾರ್ಯದ ಅಂಕಿಅಂಶಗಳನ್ನು ನಿಮಗೆ ನೀಡುತ್ತೇನೆ ಎಂದು ವಾಗ್ದಾನ ನೀಡಿದರು.
ಬಿಹಾರಕ್ಕೆ ರೈತ ಪರವಾಗಿರುವ ಸರ್ಕಾರ ಬೇಕು, ಅಭಿವೃದ್ಧಿ, ಉದ್ಯೋಗ, ಮಹಿಳೆಯರಿಗೆ ಸುರಕ್ಷತೆ ನೀಡುವ ಸರ್ಕಾರ ಬೇಕು, 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಿಹಾರದ ಜನತೆಗೆ ಅಭಿವೃದ್ಧಿ ಪರವಾಗಿ ಮತ ಹಾಕಲು ನಿರ್ಧರಿಸಿದ್ದಾರೆ ಎಂದರು.
ಎನ್ಡಿಎಯ ನಾಲ್ಕನೇ ಸಮಾವೇಶ ಎಲ್ಲಾ ದಾಖಲೆಗಳನ್ನು ಮುರಿದಿದೆ ಎಂದ ಅವರು, ಅಪಾರ ಪ್ರಮಾಣದಲ್ಲಿ ಸೇರಿದ ಜನಸ್ತೋಮಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.