ನವದೆಹಲಿ: ಇಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತಿದೆ. ಇದು ಹಿಂದೂಗಳ ಪವಿತ್ರ ಗ್ರಂಥವಾದ ಶ್ರೀಮದ್ ಭಗವದ್ಗೀತೆಯ ರಚನೆಯನ್ನು ಇದು ಸಂಕೇತಿಸುತ್ತದೆ.
ಮಾರ್ಗಶಿರಮಾಸದ ಶುಕ್ಲಪಕ್ಷದ ಹನ್ನೊಂದನೆಯ ದಿನವೇ ಶ್ರೀಕೃಷ್ಣನು ಗೀತೆಯನ್ನು ಅರ್ಜುನನಿಗೆ ಬೋಧಿಸಿದ ದಿನವೆಂದು ’ಗೀತಾ ಜಯಂತಿ’ ಯನ್ನು ಆಚರಿಸ ಲಾಗುತ್ತದೆ. ಸನಾತನ ಧರ್ಮವನ್ನು ಪಾಲಿಸುವ ಸಾವಿರಾರು ಭಕ್ತಾದಿಗಳಿಂದ ಪ್ರಪಂಚದಾದ್ಯಂತ ಇದರ ಆಚರಣೆ ನಡೆಯುತ್ತದೆ. ಇಡೀ ದಿನ ಗೀತಾಪಠಣ ಉಪವಾಸ, ಭಜನೆ ಇತ್ಯಾದಿ ನಡೆಯುತ್ತದೆ. ಗೀತೆಯ ಪುಸ್ತಕಗಳ ಉಚಿತ ವಿತರಣೆಯೂ ಇರುತ್ತದೆ. ಗೀತಾಜಯಂತಿಯ ದಿನ ಮೋಕ್ಷದ ಏಕಾದಶಿಯೂ ಇರುವುದರಿಂದ ಅನೇಕ ಭಕ್ತರು ಅಂದು ಉಪವಾಸವ್ರತವನ್ನು ಕೈಗೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರು ಟ್ವಿಟ್ ಮೂಲಕ ಗೀತಾ ಜಯಂತಿಯ ಶುಭಾಶಯಗಳನ್ನು ಕೋರಿದ್ದಾರೆ. ಅಲ್ಲದೇ ಭಗವದ್ಗೀತೆ ಬಗ್ಗೆ ಅವರು ಮಾಡಿದ ಇತ್ತೀಚಿನ ಎರಡು ಭಾಷಣದ ತುಣುಕುಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸ್ವಾಮಿ ಚಿದ್ಭವಾನಂದರ ಭಗವದ್ಗೀತೆಯ ಇ-ಬುಕ್ ಆವೃತ್ತಿ ಬಿಡುಗಡೆಯ ಲಿಂಕ್ ಹಂಚಿಕೊಂಡಿದ್ದಾರೆ.
Today, on Gita Jayanti, sharing two recent speeches I gave on the Gita:
Launch of e-book version of Swami Chidbhavananda's Bhagavad Gita. https://t.co/V8X6aHg6dx
Release of a manuscript with commentaries by various scholars on the Gita. https://t.co/CBmD0DSWzR
— Narendra Modi (@narendramodi) December 14, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.