ಬೆಂಗಳೂರು: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕರ್ನಾಟಕ ದಾಖಲೆಯ ಸಾಧನೆ ಮಾಡಿದೆ. ಕೇವಲ 8 ತಿಂಗಳಲ್ಲಿ 12.52 ಕೋಟಿ ಮಾನವ ದಿನ ಸೃಜಿಸಲಾಗಿದೆ. ರಾಜ್ಯದಲ್ಲಿ ಪ್ರಥಮ ಬಾರಿಗೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಮಾನವ ದಿನ ಸೃಜನೆ ಮಾಡಿದ ದಾಖಲೆ ನಿರ್ಮಾಣವಾಗಿದೆ.
ಎಪ್ರಿಲ್ ತಿಂಗಳಿನಿಂದ ಡಿಸೆಂಬರ್ ಪ್ರಾರಂಭದ ದಿನಗಳವರೆಗೆ ಒಟ್ಟು 3.57 ಲಕ್ಷ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಈ ಬಾರಿ 13 ಕೋಟಿ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು, ಆದರೆ ಕೇವಲ ಎಂಟು ತಿಂಗಳಲ್ಲಿ 12.52 ಕೋಟಿ ಮಾನವ ದಿನಗಳ ಸೃಷ್ಟಿಯಾಗಿದೆ. ಈ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 400 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ.
ಸದ್ಯ ರಾಜ್ಯದಲ್ಲಿ 75.52 ಲಕ್ಷ ಕುಟುಂಬಗಳು ಜಾಬ್ ಕಾರ್ಡ್ ಗಳನ್ನು ಹೊಂದಿವೆ. ಇದರಿಂದ 1.76 ಕೋಟಿ ಜನರು ಉದ್ಯೋಗ ಪಡೆದಿದ್ದಾರೆ. ಈ ಪೈಕಿ 86 ಲಕ್ಷ ಮಂದಿ ನರೇಗಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.