ನವದೆಹಲಿ: ರಾಯಲ್ ಇನ್ಸ್ಟಿಟ್ಯೂಟ್ ಆಫ್ ಬ್ರಿಟಿಷ್ ಆರ್ಕಿಟೆಕ್ಟ್ಸ್ (RIBA) ಭಾರತೀಯ ವಾಸ್ತುಶಿಲ್ಪಿ ಬಾಲಕೃಷ್ಣ ದೋಷಿ ಅವರಿಗೆ 2022 ರ ರಾಯಲ್ ಗೋಲ್ಡ್ ಮೆಡಲ್ ಅನ್ನು ಘೋಷಿಸಿದೆ.
ಬ್ರಿಟನ್ ರಾಣಿಯಿಂದ ಅನುಮೋದಿಸಲ್ಪಟ್ಟ ಮತ್ತು 1848 ರಿಂದ ಪ್ರತಿ ವರ್ಷ ಈ ಪ್ರಶಸ್ತಿಯನ್ನು ವಿಶ್ವದ ಶ್ರೇಷ್ಠ ವಾಸ್ತುಶಿಲ್ಪಿಗಳು ಅಥವಾ ವಾಸ್ತುಶಿಲ್ಪದಲ್ಲಿ ಜೀವಮಾನದ ಸಾಧನೆ ಮಾಡಿದವರಿಗೆ ಮತ್ತು ಕ್ಷೇತ್ರ ಮತ್ತು ನಿರ್ಮಿತ ಪರಿಸರದ ವಿಕಾಸದ ಮೇಲೆ ಪ್ರಭಾವವನ್ನು ಗುರುತಿಸಿ ನೀಡಲಾಗುತ್ತದೆ.
ಆರು ದಶಕಗಳ ಕಾಲದ ವೃತ್ತಿಜೀವನದಲ್ಲಿ ಬಾಲಕೃಷ್ಣ ದೋಷಿ ಅಪ್ರತಿಮ ಸಾಧನೆ ಮಾಡಿದ್ದು, ಸ್ಥಳೀಯ ಸಂಸ್ಕೃತಿ, ಸಂದರ್ಭ ಮತ್ತು ಕರಕುಶಲತೆಯನ್ನು ಯೋಜನೆಗಳಿಗೆ ಅನ್ವಯಿಸಿ ಆಧುನಿಕವಾಗಿ ಭಾರತದ ವಾಸ್ತುಶಿಲ್ಪವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಅತ್ಯಂತ ಪ್ರಸಿದ್ಧ ಭಾರತೀಯ ವಾಸ್ತುಶಿಲ್ಪಿಗಳಲ್ಲಿ ಒಬ್ಬರಾದ ಅವರು, 2018 ರ ಪ್ರಿಟ್ಜ್ಕರ್ ಪ್ರಶಸ್ತಿ ವಿಜೇತರಾಗಿದ್ದಾರೆ. ವಿಶಿಷ್ಟವಾದ ವಾಸ್ತುಶಿಲ್ಪದ ತತ್ವಶಾಸ್ತ್ರ ಮತ್ತು ಅಭಿವ್ಯಕ್ತಿಯನ್ನು ರೂಪಿಸಿದ್ದಾರೆ, ಆಧುನಿಕ ಮೌಲ್ಯಗಳು ಮತ್ತು ಸ್ಥಳೀಯ ಸಂಪ್ರದಾಯಗಳಿಂದ ಇದು ಆವರಿಸಲ್ಪಟ್ಟಿದೆ. ಅವರ ನಗರ ಯೋಜನಾ ತಂತ್ರಗಳು ಮತ್ತು ಸಾಮಾಜಿಕ ವಸತಿ ಯೋಜನೆಗಳು ಅವರಿಗೆ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ, ಪ್ರಪಂಚದಾದ್ಯಂತದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಶೈಕ್ಷಣಿಕ ಸೇವೆ ಕೂಡ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕೂಡ ಬಾಲಕೃಷ್ಣ ದೋಷಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Spoke to the distinguished architect Shri Balkrishna Doshi Ji and congratulated him on being awarded the Royal Gold Medal 2022. His contributions to the world of architecture are monumental. His works are globally admired for their creativity, uniqueness and diverse nature. https://t.co/Fk25Gp7zg0
— Narendra Modi (@narendramodi) December 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.