ನವದೆಹಲಿ: ಕಳೆದ 75 ವರ್ಷಗಳ ಹಿಂದೆ ಈ ದಿನ ಅಂದರೆ 1946ರ ಡಿಸೆಂಬರ್ 9 ರಂದು ಮೊದಲ ಬಾರಿಗೆ ಸಂವಿಧಾನ ರಚನಾ ಸಭೆ ನಡೆಸಲಾಯಿತು. ಈ ಸಂದರ್ಭವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಸ್ಮರಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, ” ಇಂದಿನ ದಿನ 75 ವರ್ಷಗಳ ಹಿಂದೆ ನಮ್ಮ ಸಂವಿಧಾನದ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿತು. ಭಾರತದ ವಿವಿಧ ಭಾಗಗಳ ಪ್ರತಿಷ್ಠಿತ ಜನರು, ವಿಭಿನ್ನ ಹಿನ್ನೆಲೆಗಳು ಮತ್ತು ವಿಭಿನ್ನ ಸಿದ್ಧಾಂತಗಳು ಸಹ ಒಂದು ಗುರಿಯೊಂದಿಗೆ ಒಟ್ಟುಗೂಡಿದವು. ಭಾರತದ ಜನರಿಗೆ ಯೋಗ್ಯವಾದ ಸಂವಿಧಾನವನ್ನು ನೀಡುವುದು ಅವರ ಉದ್ದೇಶವಾಗಿತ್ತು. ಈ ಮಹನೀಯರಿಗೆ ನಮನಗಳು” ಎಂದಿದ್ದಾರೆ.
ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆಯನ್ನು ಅಂದಿನ ಸದನದ ಹಿರಿಯ ಸದಸ್ಯರಾಗಿದ್ದ ಡಾ.ಸಚ್ಚಿದಾನಂದ ಸಿನ್ಹಾ ಅವರು ವಹಿಸಿದ್ದು, ಅವರನ್ನು ಆಚಾರ್ಯ ಕೃಪಲಾನಿ ಪೀಠಕ್ಕೆ ಪರಿಚಯಿಸಿದ್ದರು.
1946ರಲ್ಲಿ ನಡೆದ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ ಭಾರತದ ಜನರಿಗೆ ಯೋಗ್ಯವಾದ ಸಂವಿಧಾನವನ್ನು ನೀಡಿರುವ ಮಹನೀಯರಿಗೆ ಗೌರವ ನಮನ ಸಲ್ಲಿಸಿದ್ದಾರೆ.
Today, 75 years ago our Constituent Assembly met for the first time. Distinguished people from different parts of India, different backgrounds and even differing ideologies came together with one aim- to give the people of India a worthy Constitution. Tributes to these greats. pic.twitter.com/JfJUFw2ThK
— Narendra Modi (@narendramodi) December 9, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.