ಬೆಂಗಳೂರು: ವಾರ್ಷಿಕ ಆದಾಯ ತೆರಿಗೆ(ರಿಟರ್ನ್ಸ್) ಪಾವತಿಸಲು ಆದಾಯ ತೆರಿಗೆ ಇಲಾಖೆ ನಗರದ ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ತೆರಿಗೆ ಪಾವತಿಗೆ ವಿಶೇಷ ಕೌಂಟರ್ಗಳನ್ನು ಸ್ಥಾಪಿಸಿದೆ. ಇದು ಶನಿವಾರದಿಂದ ಕಾರ್ಯ ನಿರ್ವಹಿಸಲಿದೆ.
ಪಾವತಿ ಕೌಂಟರ್ಗಳನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಉದ್ಘಾಟಿಸಿದರು. ತೆರಿಗೆದಾರರು ತಮ್ಮ ತೆರಿಗೆಯನ್ನು ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶನಿವಾರದಿಂದ ಬೆಳಗ್ಗೆ 9.30ರಿಂದ 5.30ರ ವರೆಗೆ ಪಾವತಿಸಬಹುದು. ತೆರಿಗೆದಾರರು ತಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ, ಬ್ಯಾಂಕ್ ಖಾತೆ ಸಂಖ್ಯೆ, ಪ್ಯಾನ್ ಕಾರ್ಡ್, ನಮೂನೆ 16 ಅಥವಾ 26 ಎಎಸ್, ಆದಾಯ-ಹೂಡಿಕೆ ಹಾಗೂ ಆದಾಯದ ವಿವರಗಳನ್ನು ನೀಡಬೇಕಿದೆ.
ಒಟ್ಟು 36 ಕೌಂಟರ್ಗಳು, 10 ಇ-ಪಾವತಿ ಕೌಂಟರ್, ಪ್ಯಾನ್ ಪರಿಶೀಲನೆ ಮತ್ತು ಟಿಆರ್ಪಿಎಸ್ ಕೌಂಟರ್ಗಳು ಲಭ್ಯವಿರಲಿದೆ. 5 ಲಕ್ಷಕ್ಕೂ ಅಧಿಕ ಆದಾಯವುಳ್ಳವರು ಆನ್ಲೈನ್ ಪಾವತಿ ಮಾಡಬೇಕಿದ್ದು, ಪಿಂಚಣಿದಾರರು, ವೇತನ ಪಡೆಯುವ ನೌಕರರು ಆ.31ರ ಒಳಗೆ ತೆರಿಗೆ ಪಾವತಿಸಬೇಕೆಂದು ಕರ್ನಾಟಕ ಹಾಗೂ ಗೋವಾ ಹೆಚ್ಚುವರಿ ಆಯುಕ್ತ ಜಯರಾಮ ರಾಯಪುರ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.