ನವದೆಹಲಿ: ಪಂಜಾಬ್, ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳು ಶೀಘ್ರದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲಿವೆ. ಸಮೀಕ್ಷೆಯೊಂದರ ಪ್ರಕಾರ ಈ ರಾಜ್ಯಗಳ ಒಟ್ಟು ಶೇ.41.4ರಷ್ಟು ಜನರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆಯ ಬಗ್ಗೆ ತುಂಬಾ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಎಬಿಪಿ – ಸಿ ವೋಟರ್ – ಐಎಎನ್ಎಸ್ 5 ರಾಜ್ಯಗಳಲ್ಲಿ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚುನಾವಣೆಗೆ ಒಳಪಟ್ಟಿರುವ ಐದು ರಾಜ್ಯಗಳ ಒಟ್ಟು 36.3 ಪ್ರತಿಶತದಷ್ಟು ಜನರು ‘ಬಹಳ ತೃಪ್ತಿ’ ಹೊಂದಿದ್ದಾರೆ. 28.4 ಪ್ರತಿಶತದಷ್ಟು ಜನರು ‘ಸ್ವಲ್ಪ ಮಟ್ಟಿಗೆ ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಮತ್ತು 31.8 ಪ್ರತಿಶತದಷ್ಟು ಜನರು ತೃಪ್ತಿ ಹೊಂದಿಲ್ಲ. ಪ್ರತಿಕ್ರಿಯಿಸಿದವರಲ್ಲಿ ಒಟ್ಟು 3.5 ಪ್ರತಿಶತ ಜನರು ‘ಏನೂ ಹೇಳಲು ಆಗದು’ ಅನ್ನು ಆಯ್ಕೆ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಬಗ್ಗೆ ತುಂಬಾ ತೃಪ್ತಿಇದೆ ಎಂದವರಲ್ಲಿ 50.1 ಪ್ರತಿಶತ ಜನರು ಉತ್ತರ ಪ್ರದೇಶದವರು, ನಂತರ 36.1 ಪ್ರತಿಶತ ಉತ್ತರಾಖಂಡದವರು, 35.4 ಪ್ರತಿಶತ ಗೋವಾದವರು, 19.2 ಪ್ರತಿಶತ ಮಣಿಪುರದವರು ಮತ್ತು ಮತ್ತು 14 ಪ್ರತಿಶತ ಪಂಜಾಬ್ನವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.