ನವದೆಹಲಿ: ಸೈನಿಕ್ ಸ್ಕೂಲ್ ಸೊಸೈಟಿಯೊಂದಿಗೆ ಸರ್ಕಾರಿ ಮತ್ತು ಖಾಸಗಿ ವಲಯದ ನೂರು ಶಾಲೆಗಳನ್ನು ಸಂಯೋಜನೆಗೊಳಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ರಕ್ಷಣಾ ಸಚಿವಾಲಯದ ಸೈನಿಕ್ ಸ್ಕೂಲ್ ಸೊಸೈಟಿ ಅಡಿಯಲ್ಲಿ ಸಂಯೋಜಿತ ಸೈನಿಕ ಶಾಲೆಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಅನುಮೋದಿಸಿದೆ. ಈ ಶಾಲೆಗಳು ಅಸ್ತಿತ್ವದಲ್ಲಿರುವ ಸೈನಿಕ್ ಶಾಲೆಗಳಿಗಿಂತ ವಿಭಿನ್ನ ಮತ್ತು ಭಿನ್ನವಾಗಿರುತ್ತದೆ. ಮೊದಲ ಹಂತದಲ್ಲಿ ಇದಕ್ಕಾಗಿ 100 ಪಾಲುದಾರರನ್ನು ರಾಜ್ಯಗಳು, ಎನ್ಜಿಒಗಳು ಮತ್ತು ಖಾಸಗಿಯವರಾಂದ ಪಡೆಯಲು ಉದ್ದೇಶಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರವಾಗಿ ಮುಂದುವರಿಯುತ್ತಿರುವ ಸರ್ಕಾರವು ಮೌಲ್ಯಾಧಾರಿತ ಶಿಕ್ಷಣದ ಮೇಲೆ ಹೆಚ್ಚಿನ ಗಮನವನ್ನು ನೀಡಲು ನಿರ್ಧರಿಸಿದೆ, ಈ ರಾಷ್ಟ್ರದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಮ್ಮೆಯನ್ನು ಬೆಳೆಸಲು ಅನುವು ಮಾಡಿಕೊಡಲಾಗುತ್ತಿದೆ. ಶಿಸ್ತು, ರಾಷ್ಟ್ರೀಯ ಕರ್ತವ್ಯ ಪ್ರಜ್ಞೆ ಮತ್ತು ದೇಶಭಕ್ತಿಯೊಂದಿಗೆ ಪರಿಣಾಮಕಾರಿ ನಾಯಕತ್ವ ಇದರ ಗುರಿಯಾಗಿದೆ. 2022-23ರ ಶೈಕ್ಷಣಿಕ ವರ್ಷದಿಂದ ಆರಂಭಗೊಂಡು ಅಂದಾಜು ಐದು ಸಾವಿರ ವಿದ್ಯಾರ್ಥಿಗಳು ಇಂತಹ 100 ಸಂಯೋಜಿತ ಶಾಲೆಗಳಲ್ಲಿ ಆರನೇ ತರಗತಿಗೆ ಪ್ರವೇಶ ಪಡೆಯುವ ನಿರೀಕ್ಷೆಯಿದೆ. ಪ್ರಸ್ತುತ ಇರುವ 33 ಸೈನಿಕ ಶಾಲೆಗಳು ಆರನೇ ತರಗತಿಯಲ್ಲಿ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯವನ್ನು ಹೊಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.