ನವದೆಹಲಿ: 2016 ರಲ್ಲಿ ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್ನೊಂದಿಗೆ ವಿಲೀನಗೊಳಿಸಿದ ನಂತರ 813 ಹೊಸ ರೈಲುಗಳನ್ನು ಪರಿಚಯಿಸಲಾಯಿತು ಎಂದು ರೈಲ್ವೆ ಮಂಡಳಿ ತಿಳಿಸಿದೆ. ಆರ್ಟಿಐ ಉತ್ತರದಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.
2015-16ರಲ್ಲಿ ರೈಲ್ವೆ ಬಜೆಟ್ ಮಂಡಿಸುವಾಗ ಅಂದಿನ ಕೇಂದ್ರ ಸಚಿವ ಸುರೇಶ್ ಪ್ರಭು ಒಂದೇ ಒಂದು ಹೊಸ ರೈಲು ಅಥವಾ ಸೇವೆಗಳ ವಿಸ್ತರಣೆಯನ್ನು ಘೋಷಿಸಲಿಲ್ಲ ಮತ್ತು ಈ ಮೂಲಕ ಒಂದೇ ಬಾರಿಗೆ ರೈಲುಗಳ ಬಗ್ಗೆ ಘೋಷಣೆ ಮಾಡುವ ಅಭ್ಯಾಸವನ್ನು ಕೊನೆಗೊಳಿಸಿದರು.
ಭಾರತೀಯ ರೈಲ್ವೆಯು 2019-20ರಲ್ಲಿ 144, 2018-2019ರಲ್ಲಿ 266, 2017-2018ರಲ್ಲಿ 170 ಮತ್ತು 2016-2017ರಲ್ಲಿ 223 ಹೊಸ ರೈಲು ಸೇವೆಗಳನ್ನು ತಂದಿದೆ ಎಂದು ಮೂಲಗಳು ವರದಿ ಮಾಡಿವೆ.
ಆದರೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020-21ರಲ್ಲಿ ಯಾವುದೇ ಹೊಸ ರೈಲುಗಳನ್ನು ಪರಿಚಯಿಸಲಾಗಿಲ್ಲ.
“ಹೊಸ ರೈಲುಗಳ ಘೋಷಣೆಯನ್ನು ಹೆಚ್ಚಾಗಿ ರಾಜಕೀಯ ಕಾರಣಗಳಿಗಾಗಿ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ, ರೈಲುಗಳನ್ನು ಯಾವಾಗ ಮತ್ತು ಎಲ್ಲಿ ಅಗತ್ಯವಿದೆಯೆಂದು ತಿಳಿದು ಘೋಷಿಸಲಾಗುತ್ತಿದೆ” ಎಂದು ರೈಲ್ವೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.