ನವದೆಹಲಿ: ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರಫ್ತು ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಇದರ ಭಾಗವಾಗಿ, ಸರ್ಕಾರವು ಇಂದು ಇಸಿಜಿಸಿ ಲಿಮಿಟೆಡ್ಗೆ ಐದು ವರ್ಷಗಳ ಅವಧಿಯಲ್ಲಿ, ಅಂದರೆ 2021-2022 ರಿಂದ 2025- 2026 ನೇ ಹಣಕಾಸು ವರ್ಷದವರೆಗೆ, 4,400 ಕೋಟಿ ರೂ ಬಂಡವಾಳ ಪುನರ್ಧನವನ್ನು ಅನುಮೋದಿಸಿದೆ. ಅನುಮೋದಿತ ಪುನರ್ಧನ ಮತ್ತು ಐಪಿಒ ಮೂಲಕ ಅಧಿಕ ರಫ್ತುಗಳಿಗೆ ಬೆಂಬಲ ನೀಡಲು ಇಸಿಜಿಸಿಯ ತಾಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ವಾಣಿಜ್ಯ ಮತ್ತು ರಾಜಕೀಯ ಕಾರಣಗಳಿಂದಾಗಿ ಸಾಗರೋತ್ತರ ಖರೀದಿದಾರರಿಂದ ಪಾವತಿ ಮಾಡದಿರುವ ಅಪಾಯಗಳ ವಿರುದ್ಧ ರಫ್ತುದಾರರಿಗೆ ಕ್ರೆಡಿಟ್ ವಿಮಾ ಸೇವೆಗಳನ್ನು ಒದಗಿಸುವ ಮೂಲಕ ರಫ್ತುಗಳನ್ನು ಉತ್ತೇಜಿಸಲು 1957 ರಲ್ಲಿ ಕಂಪನಿಗಳ ಕಾಯಿದೆಯಡಿಯಲ್ಲಿ ಭಾರತ ಸರ್ಕಾರವು ಇಸಿಜಿಸಿಯನ್ನು ಸ್ಥಾಪಿಸಿತು. ಇದು ರಫ್ತು ಸಾಲಗಾರರಿಗೆ ರಫ್ತು ಕ್ರೆಡಿಟ್ ಸಾಲದ ಅಪಾಯಗಳ ವಿರುದ್ಧ ಬ್ಯಾಂಕುಗಳಿಗೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಇಸಿಜಿಸಿ ತನ್ನ ಅನುಭವ, ಪರಿಣತಿ ಮತ್ತು ಪ್ರಗತಿಗೆ ಮತ್ತು ಭಾರತದ ರಫ್ತುಗಳ ಮುನ್ನಡೆಯ ಬದ್ಧತೆಯೊಂದಿಗೆ ಭಾರತೀಯ ರಫ್ತು ಉದ್ಯಮವನ್ನು ಬೆಂಬಲಿಸಲು ಶ್ರಮಿಸುತ್ತಿದೆ.
ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳ ರಫ್ತುಗಳನ್ನು ಬೆಂಬಲಿಸುವಲ್ಲಿ ಮತ್ತು ಸಣ್ಣ ರಫ್ತುದಾರರ ಉದ್ಯಮಗಳಿಗೆ ಬ್ಯಾಂಕ್ ಸಾಲವನ್ನು ಉತ್ತೇಜಿಸುವಲ್ಲಿ ಇಸಿಜಿಸಿ ಅಪಾರ ಪಾತ್ರ ವಹಿಸುತ್ತದೆ. ಇದರಿಂದಾಗಿ ಅವರ ಪುನರುಜ್ಜೀವಕ್ಕೆ ಕಾರಣವಾಗುತ್ತದೆ. ಇಸಿಜಿಸಿಯಲ್ಲಿನ ಬಂಡವಾಳ ಪುನರ್ಧನವು ಅದರ ವ್ಯಾಪ್ತಿಯನ್ನು ರಫ್ತು-ಆಧಾರಿತ ಉದ್ಯಮಕ್ಕೆ ವಿಶೇಷವಾಗಿ ಹೆಚ್ಚು ಕಾರ್ಮಿಕರು ಅಗತ್ಯವಿರುವ ವಲಯಗಳಿಗೆ ವಿಸ್ತರಿಸಲು ಅನುಕೂಲ ಮಾಡಿಕೊಡುತ್ತದೆ. ಅನುಮೋದಿತ ಮೊತ್ತವನ್ನು ಕಂತುಗಳಲ್ಲಿ ನೀಡಲಾಗುತ್ತದೆ. ಇದರಿಂದಾಗಿ 88,000 ಕೋಟಿ ರೂ. ಗಳವರೆಗೆ ಅಪಾಯಗಳನ್ನು ಅಂಡರ್ರೈಟ್ ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಇದು ಐದು ವರ್ಷಗಳ ಅವಧಿಯಲ್ಲಿ 5.28 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ರಫ್ತುಗಳನ್ನು ಬೆಂಬಲಿಸಲು ಇಸಿಜಿಸಿಗೆ ಸಾಧ್ಯವಾಗುತ್ತದೆ.
ಫೆಬ್ರವರಿ 2019 ರಲ್ಲಿ ವಿಶ್ವಬ್ಯಾಂಕ್ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಪ್ರಕಟಿಸಿದ ‘ಉದ್ಯೋಗಗಳಿಗೆ ರಫ್ತು’ ವರದಿಯ ಪ್ರಕಾರ, 5.28 ಲಕ್ಷ ಕೋಟಿ ರೂ. ರಫ್ತುಗಳು 2.6 ಲಕ್ಷ ಕಾರ್ಮಿಕರ ಔಪಚಾರಿಕತೆಗೆ ಕಾರಣವಾಗುತ್ತವೆ. ಇದಲ್ಲದೆ, ವರದಿಯ ಪ್ರಕಾರ ಒಟ್ಟು ಕಾರ್ಮಿಕರ ಸಂಖ್ಯೆ (ಔಪಚಾರಿಕ ಮತ್ತು ಅನೌಪಚಾರಿಕ) 59 ಲಕ್ಷಗಳಷ್ಟು ಹೆಚ್ಚಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.