ನವದೆಹಲಿ: ಆಂಗ್ಲ ಭಾಷೆಯ ದಿನಪತ್ರಿಕೆಯಾದ ಸೌದಿ ಗೆಜೆಟ್ ಭಾರತದ ಕೈಗಾರಿಕಾ ವಲಯವನ್ನು ಅದರಲ್ಲೂ ವಿಶೇಷವಾಗಿ ಭಾರತದ ಉತ್ಪಾದನೆಯನ್ನು ಉತ್ತೇಜಿಸುವ ‘ಮೇಕ್ ಇನ್ ಇಂಡಿಯಾ’ ಉಪಕ್ರಮವನ್ನು ಶ್ಲಾಘಿಸಿದೆ ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಇದು ಪ್ರಮುಖ ಅಂಶವಾಗಿದೆ ಎಂದು ಕೊಂಡಾಡಿದೆ.
ಉತ್ಪಾದನಾ ವಲಯವು ಭಾರತದ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಲೇ ಇದೆ ಮತ್ತು ದೇಶವು ಸ್ವಾವಲಂಬಿ ಆರ್ಥಿಕತೆಯಾಗುವ ಗುರಿಯನ್ನು ಸಾಧಿಸಲು ಇದು ನೆರವಾಗುತ್ತಿದೆ. ಭಾರತದ ಕೈಗಾರಿಕಾ ಬೆಳವಣಿಗೆಯು ಕೋವಿಡ್ -19 ನಿಂದ ಹೊಡೆತ ತಿಂದರೂ ಮತ್ತು ಇದು ಋಣಾತ್ಮಕ ಬೆಳವಣಿಗೆಗೆ ಕಾರಣವಾದರೂ ಕೈಗಾರಿಕಾ ವಲಯ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.
ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯ (NSO) ಮಾಹಿತಿಯ ಪ್ರಕಾರ, ಭಾರತದಲ್ಲಿ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (IIP) ಕಳೆದ ವರ್ಷದ 117.9 ಅಂಕಗಳಿಗೆ ಹೋಲಿಸಿದರೆ ಜುಲೈ 2021 ರಲ್ಲಿ 131.4 ಪಾಯಿಂಟ್ಗಳಿಗೆ ಏರಿಕೆಯಾಗಿದೆ.
ಕಳೆದ ಏಳು ವರ್ಷಗಳಲ್ಲಿ ಭಾರತದ ರಕ್ಷಣಾ ರಫ್ತುಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ಕಳೆದ 7 ವರ್ಷಗಳಲ್ಲಿ, ದೇಶದ ರಕ್ಷಣಾ ರಫ್ತುಗಳು ರೂ 38,500 ಕೋಟಿಗಳನ್ನು ದಾಟಿದೆ. ಲೋಕಸಭೆಯಲ್ಲಿ ಮಳೆಗಾಲದ ಅಧಿವೇಶನದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, 2014-15ರಲ್ಲಿ ಭಾರತದ ರಕ್ಷಣಾ ರಫ್ತು 1,940 ಕೋಟಿ ರೂಪಾಯಿಗಳಷ್ಟಿತ್ತು, ಇದು 2020-21ರಲ್ಲಿ 8,434 ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗಿದೆ.
ಮೇಕ್ ಇನ್ ಇಂಡಿಯಾ ಉಪಕ್ರಮದ ಜೊತೆಗೆ, ಭಾರತವು ಉದ್ಯೋಗ ಮತ್ತು ರಫ್ತುಗಳನ್ನು ಹೆಚ್ಚಿಸಲು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಗಳನ್ನು ಆರಂಭಿಸಿದೆ ಎಂದು ಸೌದಿ ಗೆಜೆಟ್ ವರದಿ ಮಾಡಿದೆ.
ಸಾಂಕ್ರಾಮಿಕದ ಹೊರತಾಗಿಯೂ, ಭಾರತವು ತನ್ನನ್ನು ತಾನು ಸ್ವಾವಲಂಬನೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಸ್ಥಿರ ಬೆಳವಣಿಗೆಯತ್ತ ತಳ್ಳಿದೆ. ದೇಶವು ಕೋವಿಡ್-19 ಅನ್ನು ಸಮರ್ಥವಾಗಿ ನಿಭಾಯಿಸಿದೆ ಮತ್ತು ಲಸಿಕೆ ಹಾಕುವಲ್ಲಿ ಮೈಲಿಗಲ್ಲುಗಳನ್ನು ತಲುಪಿದೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.