ಟೊಕಿಯೋ: ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ.
ಇಂದು ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಪಟು ಕೃಷ್ಣ ನಾಗರ್ ಅವರು ಬಂಗಾರದ ಪದಕವನ್ನು ಗೆಲ್ಲುವ ಮೂಲಕ ದೇಶದ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದ್ದಾರೆ.
ಇವರ ಈ ಸಾಧನೆಯನ್ನು ಶ್ಲಾಘಿಸಿ ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದು, ನಮ್ಮ ಬ್ಯಾಡ್ಮಿಂಟನ್ ಪಟುಗಳ ಅದ್ಭುತ ಪ್ರದರ್ಶನಗಳನ್ನು ಕಾಣಲು ಸಂತಸವಾಗುತ್ತಿದೆ. ಕೃಷ್ಣ ನಾಗರ್ ಅವರ ಅಸಾಮಾನ್ಯ ಸಾಧನೆ ಎಲ್ಲಾ ಭಾರತೀಯರ ಮುಖದಲ್ಲೂ ನಗು ತರಿಸಿದೆ. ಚಿನ್ನದ ಪದಕ ಗೆದ್ದ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಭವಿಷ್ಯಕ್ಕೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
Happy to see our Badminton players excel at the Tokyo #Paralympics. The outstanding feat of @Krishnanagar99 has brought smiles on the faces of every Indian. Congratulations to him for winning the Gold Medal. Wishing him the very best for his endeavours ahead. #Praise4Para pic.twitter.com/oVs2BPcsT1
— Narendra Modi (@narendramodi) September 5, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.