ನವದೆಹಲಿ: ಪ್ರಧಾನಿ ಮೋದಿ ಅವರ ಸತತ ಮೂರನೇ ಅವಧಿಯ ಸರ್ಕಾರವು 11 ವರ್ಷಗಳನ್ನು ಪೂರೈಸಿದೆ. ಅಲ್ಲದೇ ಮೋದಿ 3.O ಸರ್ಕಾರ ಆಡಳಿತಕ್ಕೆ ಬಂದು ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಅವರ ಈ ಒಂದು ವರ್ಷಗಳು ಮಹಿಳಾ ನೇತೃತ್ವದ ಉಪಕ್ರಮಗಳ ಮೂಲಕ ‘ಅಭಿವೃದ್ಧಿಯನ್ನು ಮರು ವ್ಯಾಖ್ಯಾನಿಸಿದೆ’.
ಎಕ್ಸ್ ಪೋಸ್ಟ್ ಮಾಡಿರುವ ಮೋದಿ, ” ದೇಶದ ‘ನಾರಿ ಶಕ್ತಿ’ಯನ್ನು ಸಬಲೀಕರಣಗೊಳಿಸಲು ಹಲವಾರು ಸರ್ಕಾರಿ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಸ್ವಚ್ಛ ಭಾರತ ಮಿಷನ್ ಮಹಿಳೆಯರಿಗೆ ಘನತೆಯನ್ನು ನೀಡಿತು ಮತ್ತು ಜನ ಧನ ಯೋಜನೆ ಅವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸಿತು” ಎಂದಿದ್ದಾರೆ.
ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಮಧ್ಯಾಹ್ನ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಮೋದಿ ಸರ್ಕಾರದ ಸಾಧನೆಗಳ ಪಟ್ಟಿ ನೀಡಲಿದ್ದಾರೆ. ಪಕ್ಷವು ದೇಶಾದ್ಯಂತ ವಿವಿಧ ರಾಜ್ಯ ಮತ್ತು ಜಿಲ್ಲಾ ಪಕ್ಷದ ಕಚೇರಿಗಳಲ್ಲಿ ಕಾರ್ಯಕ್ರಮಗಳನ್ನು ಯೋಜಿಸಿದೆ.
ಪ್ರಧಾನಿಯಾಗಿ ಸತತ ಮೂರನೇ ಅವಧಿ ಜೂನ್ 9, 2024 ರಂದು ಪ್ರಾರಂಭವಾಯಿತು. ಬಿಜೆಪಿಯಿಂದ 60 ಮತ್ತು ಮಿತ್ರ ಪಕ್ಷಗಳಿಂದ 11 ಸದಸ್ಯರು ಒಟ್ಟು 71 ಸಚಿವರು ಆ ದಿನ ಪ್ರಮಾಣ ವಚನ ಸ್ವೀಕರಿಸಿದರು.
ಕಳೆದ 11 ವರ್ಷಗಳಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮೋದಿ ಸರ್ಕಾರ ಹೆಚ್ಚಿನ ಒತ್ತು ನೀಡಲಾಗಿದೆ ಎಂದಿರುವ ಮೋದಿ, ಹೊಗೆ ತುಂಬಿದ ಅಡುಗೆಮನೆಗಳಿಂದ ಲಕ್ಷಾಂತರ ಮನೆಗಳನ್ನು ಮುಕ್ತಗೊಳಿಸುವ ಮೂಲಕ ಮಹಿಳೆಯರ ಜೀವನವನ್ನು ಪರಿವರ್ತಿಸಿದ ಉಜ್ವಲದಂತಹ ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ. ಮುದ್ರಾ ಯೋಜನೆಯು ಅನೇಕ ಮಹಿಳೆಯರು ತಮ್ಮದೇ ಆದ ವ್ಯವಹಾರಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿತು, ತಳಮಟ್ಟದಲ್ಲಿ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಮಹಿಳೆಯರ ಹೆಸರಿನಲ್ಲಿ ಮನೆಗಳನ್ನು ನೋಂದಾಯಿಸುವುದನ್ನು ಖಚಿತಪಡಿಸುತ್ತದೆ ಮತ್ತು ಅವರಿಗೆ ಕುಟುಂಬದ ಆಸ್ತಿಯಲ್ಲಿ ಸ್ಪಷ್ಟವಾದ ಪಾಲನ್ನು ನೀಡುತ್ತದೆ. ಬೇಟಿ ಬಚಾವೊ-ಬೇಟಿ ಪಡಾವೊ ಅಭಿಯಾನವು ಹುಡುಗಿಯರ ಸುರಕ್ಷತೆ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ರಾಷ್ಟ್ರೀಯ ಜಾಗೃತಿ ಮೂಡಿಸುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.