ನವದೆಹಲಿ: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್ಡಿಡಿಬಿ) ವೆಬ್ ವರ್ಷನ್ ಹೈನುಗಾರರ ಸಹಾಯಕ್ಕಾಗಿ ಇ- ಗೋಪಾಲ ಅಪ್ಲಿಕೇಷನ್ ಅನ್ನು ಅಭಿವೃದ್ಧಿ ಮಾಡಿದ್ದು, ಇದನ್ನು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕಾ ಸಚಿವ ಪುರುಷೋತ್ತಮ ರೂಪಾಲ ಬಿಡುಗಡೆ ಮಾಡಿದ್ದಾರೆ.
ಹೈನುಗಾರರಿಗೆ ಪ್ರಾಣಿಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮಾಹಿತಿಯನ್ನು ನೈಜ ಸಮಯದಲ್ಲಿ ಒದಗಿಸುವ ನಿಟ್ಟಿನಲ್ಲಿ ಈ ಅಪ್ಲಿಕೇಶನ್ ಆರಂಭಿಸಲಾಗಿದೆ. ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಆಕಾಂಕ್ಷೆಗಳ ಮೇಲೆ ಗಮನ ಹರಿಸುತ್ತಿರುವ ಎನ್ಡಿಡಿಬಿ ಕಾರ್ಯ ವೈಖರಿಯ ಬಗೆಗೂ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಅಪ್ಲಿಕೇಶನ್ ರೈತರಿಗೆ ತಮ್ಮ ಜಾನುವಾರುಗಳ ನಿರ್ವಹಣೆ, ರೋಗರಹಿತ ಜರ್ಮ್ಫಾರ್ಮಾ ಖರೀದಿ, ಮಾರಾಟ ಮೊದಲಾದವುಗಳಿಗೆ ಸಹಾಯ ಮಾಡಲಿದೆ. ಉತ್ತಮ ಗುಣಮಟ್ಟದ ಸಂತಾನೋತ್ಪತ್ತಿ ಸೇವೆಗಳ ಲಭ್ಯತೆ, ಪ್ರಾಣಿಗಳ ಪೋಷಣೆ, ಚಿಕಿತ್ಸಾ ವಿಧಾನಗಳ ಬಗೆಗೂ ರೈತರಿಗೆ ಮಾಹಿತಿ ನೀಡಲಿದೆ. ಹಾಗೆಯೇ ಆಯುರ್ವೇದ ಔಷಧಗಳ ಮೂಲಕ ಪ್ರಾಣಿಗಳ ಆರೋಗ್ಯ ರಕ್ಷಣೆ, ಸುಧಾರಣೆ, ರೈತರಿಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ, ಯೋಜನೆಯ ವ್ಯಾಪ್ತಿ, ಪ್ರಗತಿಯ ಬಗ್ಗೆ ಮಾಹಿತಿಯನ್ನು ಈ ಅಪ್ಲಿಕೇಶನ್ ಒದಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.