ಬಂಟ್ವಾಳ : ಪ್ರತಿಯೊಂದು ಮನೆಯಲ್ಲಿಯೂ ಮಳೆ ನೀರಿನ ಕೊಯ್ಲನ್ನು ಮಾಡುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಸಾಧ್ಯ. ಇತ್ತೀಚೆಗೆ ನೀರಿನ ಬಳಕೆಯ ಪ್ರಮಾಣವೂ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಯ ನೀರನ್ನು ಜೋಪಾನವಾಗಿ ಶೇಖರಿಸಿ ಬಳಕೆ ಮಾಡುವ ಹಾಗೂ ನೀರಿಂಗಿಸುವ ಬಗ್ಗೆ ಜಾಗೃತರಾಗಿ ಕಾರ್ಯೋನ್ಮುಖರಾದಾಗ ಮಾತ್ರ ಸಹ್ಯ ಪರಿಸರವನ್ನು ಉಳಿಸಿ ಬೆಳೆಸಲು ಸಾಧ್ಯ ನಮ್ಮ ಮನೆಯಂಗಳದಲ್ಲಿ ಇಂಗಿಸುವ ನೀರು ಸ್ಥಳೀಯ ಪರಿರದಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಜೋಸೆಫ್ ಎನ್.ಎಮ್ ತಿಳಿಸಿದರು.
ಪ್ರೊ.ಜೋಸೆಫ್ ಅವರು ಇತ್ತೀಚೆಗೆ ತಮ್ಮ ಮನೆಗೆ ಉಜಿರೆಯ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ವಿಧ್ಯಾರ್ಥಿಗಳು ಬೇಟಿ ನೀಡಿದಾಗ ತಾವು ಅಳವಡಿಸಿರುವ ಮಳೆ ನೀರಿನ ಕೊಯ್ಲಿನ ವಿಧಾನಗಳ ಬಗ್ಗೆ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ವಿವಿ ಅರ್ಥಶಾಸ್ತ್ರ ಒಕ್ಕೂಟದ ಅಧ್ಯಕ್ಷ ಡಾ.ಎ.ಜಯಕುಮಾರ ಶೆಟ್ಟಿ ಮಾತನಾಡುತ್ತಾ ಮಳೆ ನೀರಿನ ಸದ್ಬಳಕೆ ಹಾಗೂ ನೀರಿಂಗಿಸುವ ಕ್ರಮಗಳು ಪರಿಸರ ಸಂವರ್ಧನೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುವ ಸಮಾಜಮುಖಿ ಕೆಲಸ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಜಿರೆ ಕಾಲೇಜಿನ 40ವಿಧ್ಯಾರ್ಥಿಗಳು ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಗಣರಾಜ್, ವಸಂತಿ ಹಾಗೂ ಮಹೇಶ್ ಶೆಟ್ಟಿ ಅವರು ಪ್ರೊ.ಜೋಸೆಫ್ ಅವರು ತಮ್ಮ ಮನೆಯ ಮೇಲೆ ಸಂಗ್ರಹಿಸಿದ ಮಳೆಯ ನೀರು ಹಾಗೂ ಮನೆಯಂಗಳದಲ್ಲಿ ಅಳವಡಿಸಿದ ಮಳೆ ನೀರು ಇಂಗಿಸುವ ವಿಧಾನಗಳನ್ನು ತಿಳಿದುಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.