ನವದೆಹಲಿ : ಆಹಾರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಿಸುವ ಅತ್ಯಂತ ದೀರ್ಘ ಕಾರ್ಯವನ್ನು ಭಾರತ ಸರ್ಕಾರ ನಡೆಸುತ್ತಿದ್ದು ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ತಿಂಗಳವರೆಗೆ ವಿಸ್ತರಿಸಿದೆ, ಅಂದರೆ ಜುಲೈ-ನವೆಂಬರ್ 2021 ರ ವರೆಗೆ ಮತ್ತು 198.79 ಎಲ್ಎಂಟಿ ಆಹಾರ ಧಾನ್ಯಗಳನ್ನು ಪಿಎಂಜಿಕೆಎವೈ-4ರ ಅಡಿಯಲ್ಲಿ ಹಂಚಿಕೆ ಮಾಡಲಾಗಿದೆ.
ಪಿಎಂಜಿಕೆಎವೈ-4 (ಜುಲೈ-ನವೆಂಬರ್ 2021) ಅಡಿಯಲ್ಲಿ 31 ರಾಜ್ಯಗಳು ಅಂದರೆ ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ್, ದಾದ್ರ ಮತ್ತು ನಗರ ಹವೇಲಿ, ದಮನ್ ಮತ್ತು ಡಿಯು, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಕೇರಳ, ಲಡಾಖ್, ಮಧ್ಯಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳವು 15.30 ಎಲ್ಎಂಟಿ ಆಹಾರ ಧಾನ್ಯಗಳನ್ನು ಜುಲೈ 12, 2021ರವರೆಗೆ ಪಡೆದಿವೆ.
ಪಿಎಂಜಿಕೆಎವೈ- 4ರ ಯಶಸ್ವಿ ಅನುಷ್ಠಾನಕ್ಕಾಗಿ ಭಾರತದ ಆಹಾರ ನಿಗಮವು ಈಗಾಗಲೇ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕಷ್ಟು ದಾಸ್ತಾನನ್ನು ಇರಿಸಿದೆ. ಪ್ರಸ್ತುತ, ಸೆಂಟ್ರಲ್ ಪೂಲ್ ಅಡಿಯಲ್ಲಿ 583 ಎಲ್ಎಂಟಿ ಗೋಧಿ ಮತ್ತು 298 ಎಲ್ಎಂಟಿ ಅಕ್ಕಿ (ಒಟ್ಟು 881 ಎಲ್ಎಂಟಿ ಆಹಾರ ಧಾನ್ಯಗಳು) ಲಭ್ಯವಿದೆ.
ಪಿಎಂಜಿಕೆಎವೈ-3 (ಮೇ-ಜೂನ್ 2021) ರ ಅಡಿಯಲ್ಲಿ ಭಾರತದ ಆಹಾರ ನಿಗಮವು ಎಲ್ಲಾ 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 78.26 ಎಲ್ಎಂಟಿ ಉಚಿತ ಆಹಾರ ಧಾನ್ಯಗಳನ್ನು ಪೂರೈಸಿದೆ.
ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಸುಗಮ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಎಫ್ಸಿಐ ದೇಶಾದ್ಯಂತ ಆಹಾರ ಧಾನ್ಯಗಳನ್ನು ಸಾಗಿಸುತ್ತಿದೆ. 1 ನೇ ಏಪ್ರಿಲ್ 2021 ರಿಂದ 4005 ಆಹಾರ ಧಾನ್ಯದ ರೈಲು ರೇಕ್ಗಳನ್ನು ಎಫ್ಸಿಐ ತುಂಬಿಸಿ ಸಾಗಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.