ನವದೆಹಲಿ: ಕ್ರಿಶ್ಚಿಯನ್ ಧರ್ಮದ ಜೊತೆಗೆ ಯಾವುದೇ ಸಂಬಂಧಗಳನ್ನು ಹೊಂದದ, ಹಿಂದೂ ಧರ್ಮದ ಹಲವು ಆಚರಣೆ, ಸಂಪ್ರದಾಯಗಳನ್ನು ಭಾರತೀಯ ಹಲವು ಕ್ರೈಸ್ತರು ಆಚರಣೆ ಮಾಡುತ್ತಾರೆ ಎಂದು ಪ್ಯೂ ರಿಸರ್ಚ್ನ ವರದಿ ತಿಳಿಸಿದೆ.
ಹಿಂದೂ ಧಾರ್ಮಿಕ ನಂಬಿಕೆಗಳಾದ ಕರ್ಮ, ಪುನರ್ಜನ್ಮ, ಗಂಗೆಯಿಂದ ಸಕಲವೂ ಶುದ್ಧವಾಗುವುದೆಂಬ ನಂಬಿಕೆ ಸೇರಿದಂತೆ ಇನ್ನಿತರ ಹಿಂದೂ ಸಾಂಪ್ರದಾಯಿಕ ವಿಚಾರಗಳನ್ನು ಭಾರತದಲ್ಲಿನ ಕ್ರೈಸ್ತರು ಆಚರಣೆ ಮಾಡುತ್ತಾರೆ. 54% ಕ್ರೈಸ್ತರು ಕರ್ಮ ಫಲದ ಬಗ್ಗೆ ನಂಬಿಕೆ ಇರಿಸಿದ್ದಾರೆ, 29% ಕ್ರೈಸ್ತರು ಪುನರ್ಜನ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದಾರೆ, 32% ಕ್ರೈಸ್ತರು ಗಂಗೆ ಎಲ್ಲವನ್ನು ಶುದ್ಧ ಮಾಡುವ ನಂಬಿಕೆ ಇದೆ. ಇವೆಲ್ಲವೂ ಹಿಂದೂ ಧರ್ಮದಲ್ಲಿ ಬಹಳ ಹಿಂದಿನಿಂದಲೂ ಇರುವ ನಂಬಿಕೆಯಾಗಿದೆ ಎಂದು ಈ ಸಂಶೋಧನಾ ವರದಿ ಹೇಳಿದೆ.
ಹಾಗೆಯೇ ಕೆಲವು ಕ್ರೈಸ್ತರು ಹೋಳಿ, ದೀಪಾವಳಿ ಸೇರಿದಂತೆ ಇನ್ನಿತರ ಹಿಂದೂ ಧರ್ಮದ ಹಬ್ಬಗಳನ್ನು ಆಚರಣೆ ಮಾಡುತ್ತಾರೆ. ಕೆಲವು ಕ್ರೈಸ್ತ ಮಹಿಳೆಯರು ಹಣೆಗೆ ಬೊಟ್ಟಿರಿಸುವ ಪದ್ಧತಿಯನ್ನು ಸಹ ಅನುಸರಿಸುತ್ತಿದ್ದಾರೆ ಎಂದು ಈ ವರದಿ ಹೇಳಿದೆ. ಕ್ರೈಸ್ತರಲ್ಲಿ ಹಿಂದುಳಿದ ವರ್ಗಗಳ ಕ್ರೈಸ್ತರು ಇತರ ಧರ್ಮಗಳ ನಂಬಿಕೆ, ಸಂಪ್ರದಾಯ, ಆಚಾರ, ವಿಚಾರಗಳನ್ನು ಅನುಸರಿಸುವುದು ಹೆಚ್ಚು ಎಂಬುದಾಗಿಯೂ ಈ ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.