ನವದೆಹಲಿ: ಮಾಲಿನ್ಯ ಪ್ರಮಾಣ 2.5% ಗಳಿಗಿಂತ ಹೆಚ್ಚಾಗಿರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಕೊರೋನಾ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಎನ್ನಬಹುದು ಎಂದು ಅಧ್ಯಯನ ವರದಿಯೊಂದು ಹೇಳಿದೆ.
ದೇಶದ ನವದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ವಾರಣಾಸಿ, ಲಕ್ನೋ, ಸೂರತ್ ಮೊದಲಾದ ನಗರಗಳಲ್ಲಿ ಕೊರೋನಾ ಸೋಂಕಿತರ ಪ್ರಕರಣ ಹೆಚ್ಚು ಕಂಡುಬಂದಿದೆ. ಈ ನಗರಗಳಲ್ಲಿ ಮಾಲಿನ್ಯ ಕಣಗಳ ಹೊರಸೂಸುವಿಕೆ 2.5% ಗಿಃತ ಹೆಚ್ಚು ಎಂದು ವರದಿ ಹೇಳಿದೆ.
ಈ ಅಧ್ಯಯನವನ್ನು ಭುವನೇಶ್ವರದ ಉತ್ಕಲ ವಿಶ್ವವಿದ್ಯಾಲಯ, ಪುಣೆಯ ಐಐಟಿಎಂ, ರೂರ್ಕೆಲಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಭುವನೇಶ್ವರದ ಐಐಟಿ ತಜ್ಞರು ನಡೆಸಿದ್ದಾರೆ. ವಾಯು ಗುಣಮಟ್ಟ, ಕೊರೋನಾ ಪ್ರಕರಣಗಳು ಮತ್ತು ಸಾವು ಎಂಬ ವಿಷಯದ ಮೇಲೆ ಅಧ್ಯಯನ ನಡೆಫಿ ವರದಿ ನೀಡಿದ್ದಾರೆ. ಇದರಲ್ಲಿ ಕೊರೋನಾ ಮತ್ತು ಪಿಎಂ 2.5 ಹೊರಸೂಸುವಿಕೆಗೆ ಸಂಬಂಧ ಇರುವುದನ್ನು ಅವರು ಕಂಡುಕೊಂಡಿದ್ದು, ರೋಗ ಉಲ್ಬಣ ಮತ್ತು ಸಾವಿಗೆ ಇದು ಕಾರಣವಾಗಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.