ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಹೆಚ್ಚಿನ ಬೆಳೆಗಾರರನ್ನು ನೋಂದಣಿ ಮಾಡಿಕೊಳ್ಳಲು ವಿಶೇಷ ಅಭಿಯಾನಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ನಿನ್ನೆಯಿಂದ ಆರಂಭಗೊಂಡಿರುವ ಒಂದು ವಾರಗಳ ಅಭಿಯಾನ ಖಾರಿಫ್ 2021 ಋತುವಿನಡಿ ಎಲ್ಲಾ ಅಧಿಸೂಚಿತ ಪ್ರದೇಶಗಳನ್ನು ಒಳಗೊಂಡಿದೆ. ಕಡಿಮೆ ಇರುವ 75 ಮಹತ್ವಾಕಾಂಕ್ಷಿ ಜಿಲ್ಲೆಗಳ ಮೇಲೆಯೂ ಇದು ಗಮನ ಹರಿಸಿದೆ. ಈ ಯೋಜನೆ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ರೈತರಿಗೆ ಸಮಗ್ರ ವಿಪತ್ತು ಪರಿಹಾರ ಒದಗಿಸುವ ಗುರಿಯನ್ನು ಇರಿಸಿಕೊಂಡಿದೆ.
ಈ ಸಂಬಂಧ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮಾತನಾಡಿದ್ದು, ಈ ಯೋಜನೆಯಡಿ ಈಗಾಗಲೇ 29.16 ಕೋಟಿ ರೈತರು ವಿಮೆ ಹೊಂದಿದ್ದಾರೆ. ಯೋಜನೆ ಆರಂಭವಾದಂದಿನಿಂದ ಒಟ್ಟಾರೆ 17 ಸಾವಿರ ಕೋಟಿ ಪ್ರೀಮಿಯಂಗೆ 95 ಸಾವಿರ ಕೋಟಿಗೂ ಅಧಿಕ ವಿಮೆಯನ್ನು ರೈತರಿಗೆ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೂ ಈ ಯೋಜನೆಯನ್ನು ವಿಸ್ತರಿಸುವ ಅಗತ್ಯ ಇದ್ದು, ಹೆಚ್ಚಿನ ರೈತರಿಗೆ ಇದರ ಪ್ರಯೋಜನ ನೀಡುವಂತಾಗಬೇಕು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.