ಬೆಂಗಳೂರು: ಕೊರೋನಾ ಲಸಿಕಾ ಅಭಿಯಾನದ ಅಂಗವಾಗಿ ಬಿಬಿಎಂಪಿಯ ಲಸಿಕಾ ವಾಹನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಪ್ಯಾರೆಕ್ಸೆಲ್, ಫ್ಲೋಸರ್ವ್, ಕೀಸೈಟ್ ಮತ್ತು ಯುನೈಟೆಡ್ ವೇ ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ ಈ ಲಸಿಕಾ ವಾಹನಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಷಣ್ಮುಖ ಇನ್ನೋವೇಶನ್ಸ್ ತಯಾರಿಸಿವೆ. ಇವುಗಳು ಐಸಿಎಂಆರ್ ಅನುಮೋದಿತ ಸಂಚಾರಿ ಪ್ರಯೋಗಾಲಯದ ಮೂಲಕ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳ ಸಂಗ್ರಹವನ್ನು ಮಾಡಲಿವೆ.
ಈ ವಾಹನಗಳನ್ನು ಬಳಸಿ ನಗರದಾದ್ಯಂತ ಲಸಿಕೆಯನ್ನು ಬಿಬಿಎಂಪಿ ವಿತರಿಸಲಿದೆ. ಲಸಿಕಾ ಕೇಂದ್ರಗಳಿಗೂ ಲಸಿಕೆ ತಲುಪಿಸಲು ಈ ವಾಹನವನ್ನು ಬಳಕೆ ಮಾಡಲಾಗುತ್ತದೆ. ಒಂದು ವಾಹನದಲ್ಲಿ 8 ಪೆಟ್ಟಿಗೆ ಲಸಿಕೆ, 6 ಪೆಟ್ಟಿಗೆ ಸಿರೇಂಜ್ಗಳನ್ನು ಸಾಗಿಸಬಹುದು. ಇದು ಒಂದು ಬಾರಿಗೆ ಸುಮಾರು 9 ಸಾವಿರ ಡೋಸ್ ಲಸಿಕೆಗಳನ್ನು ಸಾಗಾಟ ಮಾಡುವ ಸಾಮರ್ಥ್ಯ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.