ನವದೆಹಲಿ: ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ನಂತರ ಚೀನಾ ಮೇಡ್ ಉತ್ಪನ್ನವನ್ನು ಖರೀದಿಸುವುದರಿಂದ ಸುಮಾರು 43% ರಷ್ಟು ಭಾರತೀಯರು ದೂರ ಉಳಿದಿದ್ದಾರೆ ಎಂದು ಕಮ್ಯೂನಿಟಿ ಸೋಷಿಯಲ್ ಮೀಡಿಯಾ ವೇದಿಕೆ ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಚೀನಾ ನಿರ್ಮಿತ ಉತ್ಪನ್ನಗಳನ್ನು ಖರೀದಿಸಿದವರ ಪೈಕಿ ಶೇಕಡಾ 60 ರಷ್ಟು ಜನರು ಈ ಅವಧಿಯಲ್ಲಿ ಕೇವಲ ಒಂದು ಎರಡು ವಸ್ತುಗಳನ್ನು ಮಾತ್ರ ಖರೀದಿಸಿದ್ದಾಗಿ ಬಹಿರಂಗಪಡಿಸಿದ್ದಾರೆ.
ಈ ಸಮೀಕ್ಷೆಯು ದೇಶದ 281 ವಿವಿಧ ಜಿಲ್ಲೆಗಳಿಗೆ ಸೇರಿದ ಸುಮಾರು 18,000 ಗ್ರಾಹಕರ ಪ್ರತಿಕ್ರಿಯೆಗಳನ್ನು ದಾಖಲಿಸಿದೆ.
‘ಮೇಡ್ ಇನ್ ಚೀನಾ’ ಉತ್ಪನ್ನಗಳ ಖರೀದಿದಾರರಲ್ಲಿ 70%ರಷ್ಟು ಜನರು ಚೀನಿ ವಸ್ತುಗಳನ್ನು ಖರೀದಿಸಲು ಹಣ ಕಾರಣವಾಯಿತು ಎಂದು ಹೇಳಿದ್ದಾರೆ.
2020 ರ ನವೆಂಬರ್ ಹಬ್ಬದ ಸಮಯದಲ್ಲಿ ಲೋಕಲ್ ಸರ್ಕಲ್ಸ್ ನಡೆಸಿದ ಮತ್ತೊಂದು ಅಧ್ಯಯನವು, ಸುಮಾರು 71 ರಷ್ಟು ಭಾರತೀಯ ಗ್ರಾಹಕರು ಆ ನಿರ್ದಿಷ್ಟ ಅವಧಿಯಲ್ಲಿ ಚೀನೀ ಉತ್ಪನ್ನಗಳನ್ನು ಖರೀದಿಸುವುದನ್ನು ತಪ್ಪಿಸಿದ್ದಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.