ನವದೆಹಲಿ: ಕೊರೋನಾ ಸಂಕಷ್ಟ ಆರಂಭವಾದ ಬಳಿಕ ವಿಶ್ವವೇ ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ವಿಶ್ವ ದಾನಿಗಳ ಪಟ್ಟಿಯಲ್ಲಿ ಭಾರತ 14 ನೇ ಸ್ಥಾನದಲ್ಲಿದೆ.
ಚಾರಿಟೀಸ್ ಏಡ್ ಫೌಂಡೇಶನ್ ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕೊರೋನಾ ಲಾಕ್ಡೌನ್ ಕಾರಣದಿಂದ ವಿಶ್ವದಲ್ಲಿ ಆರ್ಥಿಕ ಕುಸಿತ ಕಂಡಿದೆ ಎಂದು ಫೌಂಡೇಶನ್ ತನ್ನ ವರದಿಯಲ್ಲಿ ತಿಳಿಸಿದೆ. ಹಾಗೆಯೇ ಇದರಿಂದಾಗಿ ದತ್ತಿ ನೀಡುವಿಕೆಗೆ ಸಂಬಂಧಿಸಿದಂತೆ ಅಮೆರಿಕ, ಕೆನಡ, ಬ್ರಿಟನ್, ನೆದರ್ಲ್ಯಾಂಡ್ಗಳು ಕಾಪಿಟ್ಟುಕೊಂಡಿದ್ದ ಅಗ್ರ ಶ್ರೇಣಿಯೂ ಕುಸಿದಿದೆ ಎಂದು ಈ ಅಂಕಿಅಂಶಗಳು ಹೇಳಿವೆ.
ಇನ್ನು ದಾನಿಗಳ ಪಟ್ಟಿಯಲ್ಲಿ ವಿಶ್ವಕ್ಕೆ ಸಂಬಂಧಿಸಿದಂತೆ ದಶಕಗಳ ಹಿಂದೆ ಭಾರತ 82 ನೇ ಸ್ಥಾನದಲ್ಲಿತ್ತು. ಆದರೆ ಪ್ರಸ್ತುತ ಭಾರತ ಈ ಸ್ಥಾನದಿಂದ ಮೇಲೇರಿದ್ದು, 14 ನೇ ಸ್ಥಾನವನ್ನು ಅಲಂಕರಿಸಿದೆ. ಅದರಂತೆ ಈ ವರೆಗೆ ಪಟ್ಟಿಯಲ್ಲಿ ಸ್ಥಾನ ಪಡೆಯದೇ ಇದ್ದ ನೈಜೀರಿಯಾ, ಘಾನಾ, ಉಗಾಂಡ ಮೊದಲಾದ ದೇಶಗಳು ಮೊದಲ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ವರದಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.