ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ಎಲ್ಲರ ಜೀವನದಲ್ಲೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವುಗಳಿಂದ ಕೂಡಿದಾಗ ಮಾತ್ರ ಆತ ಆರೋಗ್ಯವಂತನಾಗಿರಲು ಸಾಧ್ಯ. ಇಲ್ಲದಿದ್ದರೆ ಆ ವ್ಯಕ್ತಿಯಲ್ಲಿ ಆಲಸ್ಯ ಉಂಟಾಗಿ ಅನಾರೋಗ್ಯದಿಂದ ಬಳಲುತ್ತಾನೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ವಿದ್ಯಾರ್ಥಿಗಳು ಸಮಯವನ್ನು ಹೊಂದಿಸಿಕೊಳ್ಳುವುದು ಮುಖ್ಯ. ಹೀಗೆ ಮಾಡಿದರೆ ಮಾತ್ರ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವುದು ಸಾಧ್ಯವಾಗುತ್ತದೆ.
ಯಶಸ್ಸನ್ನು ಗಳಿಸುವ ಕೊನೆಗೆ ದೊರಕುವ ಘಳಿಗೆ ಎಂದೆಲ್ಲಾ ತಿಳಿದುಕೊಳ್ಳಬೇಕು. ಆಗ ಸಮಯದ ನಿಜವಾದ ಅದ್ಭುತ ಶಕ್ತಿ ಗೊತ್ತಾಗುತ್ತದೆ. ಕೇವಲ ಕೈಯಲ್ಲಿ ಗಡಿಯಾರವನ್ನು ಕಟ್ಟಿಕೊಂಡು ಗಂಟೆಯ ನಿಮಿಷದ ಮುಳ್ಳನ್ನು ನೋಡಿ ಸಮಯ ಪಾಲನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಜೀವನಕ್ಕೊಂದು ಅರ್ಥ ಬರುವ ಹಾಗೆ ಸಮಯವನ್ನು ಬಳಸಿಕೊಳ್ಳಬೇಕು. ಕೆಲವೊಂದು ಒತ್ತಡಗಳಿಗೆ ಮಣಿದು ಬಾಲ್ಯವನ್ನು ಯೌವನದಲ್ಲಿ, ಯೌವ್ವನವನ್ನು ಮುಪ್ಪಿನಲ್ಲಿ ಕಾಣಲು ಪ್ರಯತ್ನಿಸುತ್ತೇವೆ. ಆಗ ಹಲವರ ಟೀಕೆಗಳಿಗೆ ಗುರಿಯಾಗುತ್ತವೆ.
ಸಮಯ ಇದ್ದಾಗಲೇ ನಾವು ನೀವುಗಳು ತಂದೆ -ತಾಯಿ ಆಗಿರಬಹುದು, ಹೆಂಡತಿ -ಮಕ್ಕಳಾಗಿರಬಹುದು, ಇಲ್ಲ ಪ್ರೇಯಸಿಯಾಗಿರಬಹುದು, ಬಂಧು-ಬಳಗವೇ ಆಗಿರಬಹುದು ಅವರು ನಮ್ಮಿಂದ ಸ್ವಲ್ಪ ಸಮಯ, ಪ್ರೀತಿಯ ಎರಡು ಮಾತು, ಅಕ್ಕರೆಯ ನೋಟ, ಬಯಸುವದನ್ನು ನಾವು ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ.
ಆದರೆ ಸಮಯದ ಸದುಪಯೋಗ ಹೇಗೆ ಪಡೆಯಬೇಕೆಂದು ನಮ್ಮ ಕೈಯಲ್ಲಿದೆ. ಸಮಯ ನಿರ್ವಹಣೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಬಹಳ ಮುಖ್ಯ. ಸಮಯದ ಬಗ್ಗೆ ನಮಗೆ ಎಲ್ಲವೂ ಗೊತ್ತು. ಆದರೆ, ಬಳಸಿಕೊಳ್ಳುವ ವಿಧಾನ ಮಾತ್ರ ಬದಲಾಗಬೇಕಿದೆ. ಈಗಿನ ಪರಿಸ್ಥಿತಿಯಲ್ಲಂತೂ ಏನಾಗುತ್ತದೆ ಗೊತ್ತಾಗುವುದಿಲ್ಲ. ತಾಂತ್ರಿಕಮಯ ಜೀವನ ಆಗಿದೆ. ಕೊರೊನಾ ಬಂದ ಮೇಲೆ ಹೊರಗಡೆ ತಿರುಗಾಡುವುದು ಕಷ್ಟವಾಗಿದೆ ಹಾಗೂ ಸಮಯ ಕಳೆಯುವುದೇ ಕಷ್ಟವಾಗಿದೆ. ಕಳೆದು ಹೋದ ಸಮಯ ಮತ್ತೆ ಸಿಗಲ್ಲ , ಸಮಯ ಸಿಕ್ಕಾಗ ಅದರ ಸದುಪಯೋಗ ಮಾಡಿಕೊಳ್ಳಬೇಕು.
✍️ ಆಕರ್ಷ ಆರಿಗ
ಎಸ್ ಡಿ ಎಮ್ ಕಾಲೇಜು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.