ಕೊರೋನಾ ಸಾಂಕ್ರಾಮಿಕವು ನಮ್ಮಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗೆಗಿನ ಒಳನೋಟವನ್ನು ಹೆಚ್ಚಿಸಿದೆ.
ಕೊರೋನಾ ಸೋಂಕಿನ ನಿಯಂತ್ರಣ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ನೀಡುವ ಅಭಿಯಾನ ದೇಶದೆಲ್ಲೆಡೆ ನಡೆಯುತ್ತಿದೆ. ಈ ನಡುವೆ ಲಸಿಕೆ ಕೊರತೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಲಸಿಕೆಗಳು ವ್ಯರ್ಥವಾಗುವ ಬಗೆಗೂ ವರದಿಗಳು ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಹೆಚ್ಚು ಉಪಯುಕ್ತವೆನಿಸಿದ ಕೊರೋನಾ ಲಸಿಕೆಗಳು ವ್ಯರ್ಥವಾಗುವುದನ್ನು ತಡೆಯಲು ಮಣಿಪಾಲ ಮೂಲದ ಸ್ಟಾರ್ಟ್ಅಪ್ ಒಂದು ನವೀನ ಸಾಧನವನ್ನು ರೂಪಿಸಿದೆ.
ಎಮ್ವಲಿಯೋ ಪೋರ್ಟೇಬಲ್ ಎಂಬ ಬ್ಯಾಟರಿ ಚಾಲಿತ ಶೈತ್ಯೀಕರಣ ಸಾಧನವೊಂದರ ಮೂಲಕ ಲಸಿಕೆಗಳನ್ನು ಕೆಡದಂತೆ ಉಳಿಕೆ ಮಾಡಬಹುದಾಗಿದೆ. ಲಸಿಕೆಗಳನ್ನು ಅದಕ್ಕೆ ಪೂರಕವಾದ ತಾಪಮಾನದಲ್ಲಿ ಸಂಗ್ರಹಿಸಿಡಲು, ಅದನ್ನು ನಿರ್ವಹಣೆ ಮಾಡಲು ಈ ಸಾಧನ ಸಹಕಾರಿಯಾಗಿದೆ.
ಮಣಿಪಾಲ ಮೂಲದ ಬ್ಲ್ಯಾಕ್ ಫ್ರಾಗ್ ಟೆಕ್ನಾಲಜಿಸ್ ಪ್ರೈ. ಲಿ. ಈ ಸಾಧನವನ್ನು ಸಂಶೋಧನೆ ಮಾಡಿದ್ದು, ಇದರ ಸಂಸ್ಥಾಪಕ ಮತ್ತು ಸಿಇಒ ಈ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ್ದಾರೆ. ಲಸಿಕೆಗಳನ್ನು ಅದಕ್ಕೆ ಪೂರಕವಾದ ವಾತಾವರಣದಲ್ಲಿ ಸಂರಕ್ಷಿಸಲು, ನಿರ್ವಹಿಸಲು ಇದು ನೆರವಾಗುತ್ತದೆ ಎಂದಿದ್ದಾರೆ. ಲಸಿಕೆಯನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವ ಸಂದರ್ಭದಲ್ಲಿಸಹ ಈ ತಾಪಮಾನವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲೂ ಈ ಉಪಕರಣ ಸಹಕಾರಿಯಾಗಿದೆ.
ಕೊರೋನಾ ಲಸಿಕೆಗಳನ್ನೇ ಉದಾಹರಣೆ ನೀಡಿರುವ ಅವರು, ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳೆರಡನ್ನೂ 2 ಡಿಗ್ರಿ ಸೆಲ್ಸಿಯಸ್ ಮತ್ತು 8 ರ ನಡುವಿನ ತಾಪಮಾನದಲ್ಲಿ ಸಂಗ್ರಹಿಸಬೇಕಾಗಿದೆ. ಹಾಗೂ ಅವುಗಳು ಫ್ರೀಜ್ ಸೆನ್ಸಿಟಿವ್ ಆಗಿರುತ್ತದೆ. ಇವುಗಳನ್ನು ಸಾಗಿಸುವಾಗ ಲಸಿಕೆ ಕೆಡದಂತೆ ತಾಪಮಾನ ನಿರ್ವಹಣೆಗೆ ಈ ಸಾಧನ ಪರಿಣಾಮಕಾರಿ. ಕೇವಲ ಕೊರೋನಾ ಲಸಿಕೆ ಮಾತ್ರವಲ್ಲದೆ ಇದರ ಮೂಲಕ ಇನ್ನಿತರ ಲಸಿಕೆಗಳನ್ನು ಸಹ ಕೆಡದಂತೆ, ವ್ಯರ್ಥವಾಗದಂತೆ ಸಂರಕ್ಷಣೆ ಮಾಡಬಹುದಾಗಿದೆ.
ಪ್ರತಿ ಎಮ್ವಲಿಯೋ ದಲ್ಲಿ 30 -40 ರ ವರೆಗಿನ ಬಾಟಲಿಗಳನ್ನು ಸಂಗ್ರಹಿಸಬಹುದು. ದಿನದ 24 ಗಂಟೆಯೂ ಈ ಸಾಧನ ಲಸಿಕೆಗಳನ್ನು ಕೆಡದಂತೆ ಸಂರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ. ತಾಪಮಾನ ಮೇಲ್ವಿಚಾರಣೆ, ಟ್ರ್ಯಾಕಿಂಗ್, ಬ್ಯಾಟರಿ ಪರಿಶೀಲನೆ, ಲೈವ್ ಟ್ರ್ಯಾಕಿಂಗ್ ಜೊತೆಗೆ ಸೌರ ಶಕ್ತಿ ಬಳಸಿಯೂ ಇದು ಕಾರ್ಯ ನಿರ್ವಹಿಸುತ್ತದೆ.
ಇದರ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಬಿಐಆರ್ಎಸಿ ಬೆಂಬಲದ ಜೊತೆಗೆ ಸಂಸ್ಥೆ ಪೇಟೆಂಟ್ ಮಾಡಿದೆ. ಇದರ ವೆಚ್ಚವೂ ಕಡಿಮೆ ಎಂದು ಮಯೂರ್ ತಿಳಿಸಿದ್ದಾರೆ. ಈ ಸಂಸ್ಥೆ ರಾಷ್ಟ್ರೀಯ ಪ್ರಮುಖ ರಾಸಾಯನಿಕ ಪ್ರಯೋಗಾಲಯವಾದ ಪಪುಣೆಯ ವೆಂಚರ್ ಸೆಂಟರ್ ಮತ್ತು ಸೋಷಿಯಲ್ ಆಲ್ಫಾ ಜೊತೆಗೂಡಿ ಅಭಿವೃದ್ಧಿ ಮಾಡಿದೆ.
ಈ ಸಾಧನದೊಳಗೆ ಏಕರೂಪದ ಟೆಂಪರೇಚರ್ ಸೌಲಭ್ಯ ಇದೆ. ಹಾಗೆಯೇ ಇದು ಸಾಂಪ್ರದಾಯಿಕ ವ್ಯವಸ್ಥೆಗಿಂತ 96% ವೇಗವಾಗಿ ಲಸಿಕೆಗಳಿಗೆ ಪೂರಕ ತಾಪಮಾನ ಸೃಷ್ಟಿಸುತ್ತವೆ. 2017 ರಲ್ಲಿ ಇದನ್ನು ಆವಿಷ್ಕಾರ ಮಾಡುವ ಕೆಲಸದಲ್ಲಿ ಸಂಸ್ಥೆ ತೊಡಗಿಕೊಂಡಿದ್ದು 2019 ರಲ್ಲಿ ಇದನ್ನು ಸಂಪೂರ್ಣಗೊಳಿಸಿದೆ. ಇದನ್ನು ಕರ್ನಾಟಕ, ಬಿಹಾರ, ತಮಿಳುನಾಡುಗಳಲ್ಲಿನ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿಯೂ ಬಳಕೆ ಮಾಡಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಕಾರ್ಯಕ್ರಮದಡಿ ವ್ಯಾಕ್ಸಿನೇಷನ್ ಡ್ರೈವ್ಗಳನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯ ಸಾಧನಗಳ ಉತ್ಪಾದನಾ ಕಾರ್ಯ ಸಹ ನಡೆಯುತ್ತಿದೆ. ಪ್ರಸ್ತುತ ಸುಮಾರು 200 ಕ್ಕೂ ಹೆಚ್ಚು ಸಾಧನಗಳು ಬಳಕೆಯಲ್ಲಿದ್ದು, 54 ಸಾವಿರ ರೂ. ಗಳನ್ನು ಇದಕ್ಕೆ ನಿಗದಿ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.