ನವದೆಹಲಿ: ಡಿಆರ್ಡಿಒ ಅಭಿವೃದ್ಧಿಪಡಿಸಿದ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಆಂಟಿ ಕೋವಿಡ್ -19 ಔಷಧದ ಬೆಲೆಯನ್ನು ಡಾ. ರೆಡ್ಡೀಸ್ ನಿಗದಿಪಡಿಸಿದೆ.
ಔಷಧದ ಪ್ರತಿ ಸಾಕೆಟ್ಗೆ 990 ರೂ.ದರ ನಿಗದಿಪಡಿಸಲಾಗಿದೆ.
ಆದರೂ, ಆ್ಯಂಟಿ ಕೋವಿಡ್ -19 ಔಷಧಿಯನ್ನು ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಿಯಾಯಿತಿ ದರದಲ್ಲಿ ಸರಬರಾಜು ಮಾಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ‘ಸರ್ವೀಸಸ್ ಇ-ಹೆಲ್ತ್ ಅಸಿಸ್ಟೆನ್ಸ್ ಮತ್ತು ಟೆಲಿ-ಕನ್ಸಲ್ಟೇಶನ್ (ಸೆಹಾಟ್)’ ಒಪಿಡಿ ಪೋರ್ಟಲ್ ಅನ್ನು ಪ್ರಾರಂಭಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಮೇ 27 ರಿಂದ 2- ಡಿಜಿ ಔಷಧದ 10,000 ಸಾಕೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ ಎಂದು ಹೇಳಿದ್ದರು.
ಡಾ. ರೆಡ್ಡಿ ಲ್ಯಾಬ್ನ ಸಹಾಯದಿಂದ ಡಿಆರ್ಡಿಒ ಅತ್ಯಗತ್ಯವಾದ ಆ್ಯಂಟಿ-ಕೋವಿಡ್ ಔಷಧ 2-ಡಿಜಿ ಉತ್ಪಾದಿಸಿದೆ. ಅನೇಕ ರಾಜ್ಯಗಳು ಈ ಔಷಧಿಯನ್ನು ಖರೀದಿಸಲು ಆಸಕ್ತಿ ತೋರಿಸಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.