ನವದೆಹಲಿ: ಮೇ 7 ರಂದು ಗರಿಷ್ಠ ಮಟ್ಟವನ್ನು ತಲುಪಿದ ನಂತರ ಕಳೆದ 20 ದಿನಗಳಿಂದ ಕೋವಿಡ್ -19 ನ ಹೊಸ ಪ್ರಕರಣಗಳು ದೇಶದಲ್ಲಿ ಸ್ಥಿರವಾಗಿ ಕುಸಿಯುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ಮೇ 7 ರಂದು 4.14 ಲಕ್ಷ ಪ್ರಕರಣಗಳು ವರದಿಯಾಗಿತ್ತು, ಅದು ಈಗ ಸುಮಾರು 2.11 ಲಕ್ಷಕ್ಕೆ ಇಳಿದಿದೆ ಎಂದಿದ್ದಾರೆ.
ಕಳೆದ ಮೂರು ವಾರಗಳಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿರುವ ಜಿಲ್ಲೆಗಳ ಸಂಖ್ಯೆಯೂ 531 ರಿಂದ 359 ಜಿಲ್ಲೆಗಳಿಗೆ ಇಳಿದಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ ಶೇ 17.13 ರ ಮಟ್ಟದಿಂದ ಶೇಕಡಾ 8.84 ಕ್ಕೆ ಇಳಿದಿದೆ ಮತ್ತು ಮೇ 3 ರಂದು ಶೇಕಡಾ 81.8 ರಷ್ಟಿದ್ದ ಚೇತರಿಕೆ ಪ್ರಮಾಣವು ಈಗ ಶೇಕಡಾ 90 ಕ್ಕೆ ಏರಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಳೆದ 17 ದಿನಗಳಲ್ಲಿ ದೇಶವು ಸುಮಾರು 13 ಲಕ್ಷ ಸಕ್ರಿಯ ಪ್ರಕರಣಗಳ ಕುಸಿತವನ್ನು ವರದಿ ಮಾಡಿದೆ ಮತ್ತು ಈಗ ಕುಸಿತ 24. 19 ಲಕ್ಷ ಮಟ್ಟದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ಒಂದು ವಾರದಲ್ಲಿ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡ 24 ರಾಜ್ಯಗಳಿವೆ ಎಂದು ಅಗರ್ವಾಲ್ ಹೇಳಿದ್ದಾರೆ.
ಕಳೆದ 15 ವಾರಗಳಲ್ಲಿ ಸರ್ಕಾರವು ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಿದೆ ಮತ್ತು ಪರೀಕ್ಷೆಗಳು ದೇಶಾದ್ಯಂತ 3.1 ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ನಿನ್ನೆ 22.17 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.