ನವದೆಹಲಿ: ಡಿಆರ್ಡಿಒ ಅಭಿವೃದ್ಧಿಪಡಿಸಿದ ಆಂಟಿ ಕೋವಿಡ್ ಔಷಧಿ 2-deoxy -D- ಗ್ಲೂಕೋಸ್ ಕೊರೋನಾವೈರಸ್ ವಿರುದ್ಧದ ಹೋರಾಟದಲ್ಲಿ ಕೇವಲ ಭಾರತವಲ್ಲ ಜಗತ್ತಿಗೆ ಸೇವೆ ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಮೊದಲ ಬ್ಯಾಚ್ ನ 2-ಡಿಜಿ ಔಷಧಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಚಾಲನೆಯನ್ನು ನೀಡಿದ್ದಾರೆ. ಈ ಔಷಧಿ ಹಿಂದಿನಿಂದ ಬಳಕೆಗೆ ಲಭ್ಯವಾಗಲಿದೆ.
ಔಷಧಿಗೆ ಚಾಲನೆ ದೊರೆತ ಬಳಿಕ ಮಾತನಾಡಿದ ಹರ್ಷವರ್ಧನ್, 2-ಡಿಜಿ ಬಳಕೆಯಿಂದ ಕೋವಿಡ್ ರೋಗಿಗಳ ಚೇತರಿಕೆ ಅವಧಿ ಕಡಿಮೆಯಾಗಲಿದೆ ಮತ್ತು ಆಮ್ಲಜನಕದ ಮೇಲಿನ ಅವಲಂಬನೆ ಕೂಡ ಕಡಿಮೆಯಾಗಲಿದೆ ಎಂದಿದ್ದಾರೆ.
“ಡಿಆರ್ ಡಿಓ ಬೆಂಬಲದೊಂದಿಗೆ ಮತ್ತು ರಾಜನಾಥ್ ಸಿಂಗ್ ಅವರ ನಾಯಕತ್ವದ ಅಡಿ ಹೊರಬಂದಿರುವ ಈ ಔಷಧಿಯು ಕೋವಿಡ್ ವಿರುದ್ಧದ ನಮ್ಮ ಮೊದಲ ದೇಶಿಯ ಸಂಶೋಧನೆ ಆಧಾರಿತ ಫಲಿತಾಂಶವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.