ಬಂಟ್ವಾಳ : ಇಲ್ಲೊಬ್ಬ ಪರಿಸರ ಪ್ರೇಮಿ ಅವನತಿಯ ಅಂಚಿನಲ್ಲಿರುವ ನೀರು ಹಾವಿನ ಸಂತಾನೋತ್ಪತ್ತಿ ಭಾಗ್ಯ ಕರುಣಿಸಿ ಅರಣ್ಯ ಇಲಾಖೆಯ ಗಮನ ಸೆಳೆದಿದ್ದಾರೆ. ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ, ಮರಿಗಳನ್ನು ಹೊರಗೆ ತೆಗೆಯುವಲ್ಲಿ ಯಶಸ್ವಿಯಾದ ಸ್ನೇಕ್ ಕಿರಣ್ ಅವರ ಸಾಹಸವನ್ನು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ಅಭಿನಂದಿಸಿದ್ದಾರೆ.
ಬಿ.ಸಿ.ರೋಡ್ ಬೈಪಾಸ್ ವಿವೇಕ್ ಪ್ರಭು ಮನೆಯ ತುಳಸಿಕಟ್ಟೆ ಸಮೀಪ 14 ನೀರು ಹಾವು ಮೊಟ್ಟೆ ಪತ್ತೆ ಹಚ್ಚಲಾಯಿತು. ತಾಯಿ ಹಾವು ಸಹಿತ ಮೊಟ್ಟೆ ಮರಿಗಳನ್ನು ಸ್ಥಳೀಯ ಉಗರ ಪ್ರೇಮಿ ಕಿರಣ್ ಪಿಂಟೋ ಅವರ ವಶಕ್ಕೆ ನೀಡಲಾಯಿತು. ಸುಮಾರು 19 ದಿನಗಳ ಮನೆಯಲ್ಲೇ ಶುಶ್ರೂಷೆ ನೀಡಿದ ಕಿರಣ್, ಮೊಟ್ಟೆಗಳಿಂದ ಮರಿಗಳನ್ನು ಸುರಕ್ಷಿತವಾಗಿ ಹೊರ ತೆಗೆದರು. ಫ್ಲೈವುಡ್ ಪೆಟ್ಟಿಗೆಯಲ್ಲಿ ಎರಡು ವಿಭಾಗ ರಚಿಸಿ, ಒಂದರಲ್ಲಿ ನೀರು ಹಾಗೂ ಮತ್ತೊಂದರಲ್ಲಿ ಕಲ್ಲು-ಮರಳು ಶೇಖರಿಸಿಡಲಾಯಿತು. ಪೆಟ್ಟಿಗೆಯ ಪಾರ್ಶ್ಚದಲ್ಲಿ ಹುಲ್ಲು ಹಾಸಿ ಅದರ ಮೇಲೆ ಹಾಸಲಾದ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡಲಾಯಿತು. ಮೊಟ್ಟೆಗಳ ಸುತ್ತಾ ತಾಯಿ ಹಾವನ್ನು ಸುತ್ತು ವರಿಸುವಂತೆ ಮಾಡಲಾಯಿತು ಎಂದು ಕಿರಣ್ ಕೃತಕ ಕಾವು ಪ್ರಯೋಗವನ್ನು ವಿವರಿಸಿದ್ದಾರೆ.
ಮೊಟ್ಟೆಯ ಕವಚವನ್ನು ಹೊಡೆಯಲು ಮರಿಗಳು ಸುರಕ್ಷಿತವಾಗಿ ಹೊರಲಾರಂಭಿಸಿತು. ತಾಯಿ ಹಾವು ಸಹಿತ 14 ಮರಿಗಳನ್ನು ನಾವೂರು ನೇತ್ರಾವತಿ ನದಿ ನೀರಿಗೆ ಬಿಡಲಾಯಿತು. ಕೃಷಿಗೆ ಬಳಸಲಾಗುವ ಔಷಧಿಯಿಂದಾಗಿ ನೀರು ಹಾವು ಸಂತಾನ ನಾಶವಾಗುತ್ತಿದೆ. ಜಲ ಶುದ್ಧಿ ಕರಣದಲ್ಲಿ ಪ್ರಮುಖ ಪಾತ್ರವಹಿಸುವ ನೀರು ಹಾವುಗಳನ್ನು ಸಂರಕ್ಷಣೆಗೆ ಸ್ಥಳೀಯ ಮಟ್ಟದಲ್ಲಿ ಜಾಗೃತಿ ಮೂಡಬೇಕಾಗಿದೆ ಎಂದು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ರಾವ್ ತಿಳಿಸಿದ್ದಾರೆ. ಸಹಾಯಕ ಅಧಿಕಾರಿ ಕೆ.ಸಿ. ಮ್ಯಾಥ್ಯೂ, ಪತ್ರಕರ್ತ ರಾಜಾ ಬಂಟ್ವಾಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.