ಈ ತರಹದ ಯಾವುದೇ ಮಾಧ್ಯಮ ತೋರಿಸುವುದಿಲ್ಲ, ಆ ಬಗ್ಗೆ ಯಾರೂ ವರದಿ ಕೂಡ ಮಾಡುವುದಿಲ್ಲ. ಸದ್ಯಕ್ಕೆ ಸಾಮಾಜಿಕ ತಾಣಗಳು ಕೆಲವೊಮ್ಮೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದರಿಂದ ಇಂತಹ ಅನೇಕ ಘಟನೆಗಳು ಜನರಿಗೆ ಗೊತ್ತಾಗುತ್ತಿವೆ. ಆದರೆ ಪೂರ್ವಾಗ್ರಹ ಪೀಡಿತರಾಗಿರುವ ಕೆಲವು ಪ್ರಭಾವಶಾಲಿ ಮಾಧ್ಯಮಗಳು ಮಾತ್ರ ಕಣ್ಣಿಗೆ ಹಳದಿ ಬಟ್ಟೆ ಕಟ್ಟಿ ಎಲ್ಲವನ್ನು ಹಳದಿ ರೋಗದಿಂದಲೇ ನೋಡುತ್ತಿವೆ.
ಮೊನ್ನೆ ಹನುಮ ಜಯಂತಿಯಂದು ಮಧ್ಯಪ್ರದೇಶದ ಹನುಮಂತನ ದೇವಸ್ಥಾನದಲ್ಲಿ ಪೂಜಾ ನಿರತರಾಗಿದ್ದ ಭಕ್ತರ ಮೇಲೆ ಆಸಿಡ್ ಎರಚಿ ಅವರ ಮೇಲೆ ದೌರ್ಜನ್ಯ ಎಸಗಿದ್ದ ಕೃತ್ಯ ಯಾರ ಕಣ್ಣಿಗೂ ಬೀಳಲೇ ಇಲ್ಲ. ಯಾಕೆಂದರೆ ಮೈ ಮೇಲೆ ಆಸಿಡ್ ಬಿದ್ದದ್ದು ಹಿಂದೂಗಳ ಮೇಲೆ. ಯಾವ ಮಾಧ್ಯಮಕ್ಕೂ ಅದು ಕಾಣಲೇ ಇಲ್ಲ. ಅದು ಭಾರತದ ಪ್ರಭಾವಿ ಮಾಧ್ಯಮಗಳಿಗೆ ಕೇವಲ ಒಂದು ಚಿಕ್ಕ ಸಂಗತಿಯಾಗಿಯೇ ಉಳಿಯಿತು. ಮೈ ಇಡೀ ಸುಟ್ಟು ಹೋದವರು ಆಸ್ಪತ್ರೆಯ ಮಂಚದ ಮೇಲೆ ನರಳುತ್ತಿದ್ದರೆ ಮಾಧ್ಯಮಗಳು ಯಾಕೆ ಅದನ್ನು ಸುದ್ದಿ ಮಾಡುವುದಿಲ್ಲ. ಅದೇ ಯಾವುದಾದರೂ ಚರ್ಚ್ ಯಾ ಮಸೀದಿ ಮೇಲೆ ಒಂದು ಸಣ್ಣ ಕಲ್ಲು ಬಿದ್ದರೂ, ಅದನ್ನು ಜಾತಿ, ಮತ, ಧರ್ಮ ಇಲ್ಲದ ದುರುಳರು ಮಾಡಿದರೂ ಟಿವಿ ಯಾ ಪತ್ರಿಕಾ ಮಾಧ್ಯಮದವರಿಗೆ ಇಡೀ ಕ್ರೈಸ್ತ ಅಥವಾ ಮುಸ್ಲಿಮರ ಮೇಲೆನೆ ಹಲ್ಲೆ ಆಗುತ್ತಿದೆ ಎಂದು ಯಾಕೆ ಅನಿಸುತ್ತದೆಯೋ?
ಭಾರತೀಯ ಮಾಧ್ಯಮದ ಬಗ್ಗೆ ಚರ್ಚೆ ಶುರು ಆಗಿದೆ. ಚರ್ಚೆ ಆಗುತ್ತಿರುವುದು ಜಾತ್ಯಾತೀತ ಭಾರತದಲ್ಲಿ ಅಲ್ಲವೇ ಅಲ್ಲ. ಹೀಗೆ ಪೂರ್ವಾಗ್ರಹ ಪೀಡಿತವಾಗಿರುವ ಭಾರತದ ಮಾಧ್ಯಮದ ಮನಸ್ಥಿತಿಯ ಬಗ್ಗೆ ಲಂಡನ್ನ ಬುದ್ಧಿಜೀವಿಗಳು, ಕಾನೂನು ಪಂಡಿತರು, ಮನಶಾಸ್ತ್ರಜ್ಞರು ಚರ್ಚೆಗಿಳಿದಿದ್ದಾರೆ. ಯುಟ್ಯೂಬ್ನಲ್ಲಿ ಅದರ ತುಣುಕುಗಳು ಸಿಗುತ್ತವೆ. ಅವರ ಪ್ರಕಾರ ಕಳೆದ ದೆಹಲಿಯ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಇಡೀ ಭಾರತೀಯ ಮೀಡಿಯಾದ ಗಮನ ಇದದ್ದು ಆ ಸಮಯದಲ್ಲಿ ಆದಂತಹ ಚರ್ಚು ಘಟನೆಗಳ ಬಗ್ಗೆ. ಹೋಲಿ ಅಕ್ಸಿಲಿನ್ ಸ್ಕೂಲ್ನ ಬಗ್ಗೆ ಮಾತನಾಡುತ್ತಾ ಆ ಚರ್ಚೆಯಲ್ಲಿ ಭಾಗವಹಿಸಿದ ಪರಿಣಿತರು ಹೇಳುತ್ತಾರೆ. ಸ್ವತ: ಆ ಚರ್ಚ್ನ ಸಿಸ್ಟರ್ ಲೂಸಿಯವರೇ ನಮ್ಮ ಚರ್ಚಿನಲ್ಲಿರುವ ಯಾವುದೇ ಧಾರ್ಮಿಕ ಮೂರ್ತಿಗಳಿಗೆ ಏನೂ ಆಗಿಲ್ಲ ಎಂದು ಹೇಳಿದರೂ ಮಾಧ್ಯಮಗಳು ಅದನ್ನು ವೈಭವಿಕರಿಸಿ ಕ್ರೈಸ್ತರ ಮೇಲೆ ದಾಳಿಯಾಯಿತು ಎಂದು ಇಡೀ ದಿನ ತಮ್ಮ ಚಾನೆಲ್ಗಳಲ್ಲಿ ಬಿಂಬಿಸಿದವು.
ಇನ್ನೂ ಅದೇ ಸಮಯದಲ್ಲಿ ದೆಹಲಿಯ ಜಾಸೋಲಾ ಎನ್ನುವ ಚರ್ಚ್ ವಠಾರದ ಮೇಲೆ ಕಲ್ಲು ಬಿದ್ದಾಗ ಮೋದಿಯವರು ಹೇಳಿಯೇ ಹೀಗೆ ಮಾಡಿಸಿದ್ದಾರೆ ಎನ್ನುವ ಅರ್ಥದಲ್ಲಿ ಮಾಧ್ಯಮಗಳಲ್ಲಿ ವರ್ಣನೆಯಾಯಿತು. ಬಿಜೆಪಿ ಸರ್ಕಾರ ಬಂದ ಮೇಲೆ ಕ್ರೈಸ್ತರಿಗೆ ಉಳಿಗಾಲವಿಲ್ಲ ಎನ್ನುವ ಅರ್ಥದಲ್ಲಿ ಬಿಂಬಿಸಲಾಯಿತು. ದೆಹಲಿಯ ವಿಕಾಸಪುರಿ ಎಂಬಲ್ಲಿ ಆದ ಅಹಿತಕರ ಘಟನೆಗಳ ಬಳಿಕ ಮೂವರ ಬಂಧನವಾಗಿ ಅವರು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ಗೊತ್ತಾದ ಬಳಿಕವೂ ಮಾಧ್ಯಮಗಳು ಸುಮ್ಮನೆ ಕೂರಲಿಲ್ಲ. ಎಲ್ಲಿಯ ತನಕ ಅಂದರೆ ದೆಹಲಿಯ ರೋಹಿಣಿ ಚರ್ಚ್ ಎಂಬಲ್ಲಿ ಶಾರ್ಟ್ ಸರ್ಕಿಟ್ ಬೆಂಕಿ ಹುಟ್ಟಿದಾಗಲೂ ಮಾಧ್ಯಮಗಳಿಗೆ ಅವುಗಳ ಹಿಂದೆ ಕಂಡದು ಕೇಸರಿ ಪಡೆಯ ಕೈವಾಡವೇ. ಪಶ್ಚಿಮ ಬಂಗಾಳದಲ್ಲಿ ೭೩ ವರ್ಷದ ನನ್ ಒಬ್ಬರ ಮೇಲೆ ಅತ್ಯಾಚಾರ?ವಾದಾಗಲೂ ಮಾಧ್ಯಮಗಳು ಚರ್ಚೆ ಮಾಡಿದ್ದು, ಗೂಬೆ ಕೂರಿಸಿದ್ದು ಯಾರ ಮೇಲೆ ಎಂದು ಪ್ರಪಂಚಕ್ಕೆ ಗೊತ್ತಾಗಿದೆ. ಆದರೆ ಇಷ್ಟೆಲ್ಲಾ ತನಿಖೆ ಮಾಡುವ ಮಾಧ್ಯಮಗಳು ಯಾಕೆ ಅಷ್ಟೊಂದು ಪೂರ್ವಾಗ್ರಹ ಪೀಡಿತರಾಗಿರುತ್ತಾರೆ ಎನ್ನುವ ಉತ್ತರ ಭಾರತದಲ್ಲಿ ಸಿಕ್ಕಿಲ್ಲ.
ಅಷ್ಟೇ ಯಾಕೆ, ಮಂಗಳೂರಿನಲ್ಲಿಯೂ ಒಂದು ಮಗುವಿನ ಮೇಲೆ ಅತ್ಯಾಚಾರವಾಯಿತು ಎಂದು ಪ್ರತಿಭಟನೆ, ಹೋರಾಟಗಳು ನಡೆದಾಗ ಅದಕ್ಕೆ ಅನೇಕ ಬುದ್ಧಿಜೀವಿ ನಾಯಕ, ನಾಯಕಿಯರು ತಮ್ಮ ಬೆಂಬಲ ಸೂಚಿಸಿ ಬೀದಿಗೆ ಇಳಿದರೇ ವಿನ: ಅಲ್ಲಿ ನಿಜಕ್ಕೂ ಅತ್ಯಾಚಾರವಾಗಿದೆಯಾ, ವೈದ್ಯರ ವರದಿ ಎನು ಹೇಳುತ್ತದೆ ಎಂದು ನೋಡುವ ಗೋಜಿಗೆ ಹೋಗಲಿಲ್ಲ. ಒಂದು ವೇಳೆ ವೈದ್ಯರ ವರದಿಯಲ್ಲಿ ಅತ್ಯಾಚಾರ ಆಗಿಲ್ಲ ಎಂದು ಬಂದರೆ ನಾಳೆ ಆ ಚಾಲಕನ ಕಳೆದು ಹೋದ ಮಾನ ವಾಪಾಸು ಬರಲು ಇದೇ ಬುದ್ದಿಜೀವಿಗಳು ಪ್ರಯತ್ನಿಸುತ್ತಾರಾ? ಒಂದು ಆ ಚಾಲಕ ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು. ಆದರೆ ಅದಯ ಸಾಬೀತಾಗುವ ಮೊದಲೇ ಆ ಬಗ್ಗೆ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿದೆಯಾ? ಡಿ.ಕೆ.ರವಿ ಪ್ರಕರಣದಲ್ಲಿ ಯಾವುದೇ ಮಾಧ್ಯಮದಲ್ಲಿ ಬಾಯಿ ಬಿಡದ ಬುದ್ದೀಜೀವಿಗಳು ಯಾಕೆ ಎಲ್ಲಾ ಪ್ರಕರಣಗಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.