ನವದೆಹಲಿ: ಪ್ರಸ್ತುತ ಭಾರತ ಕರೋನವೈರಸ್ ಮಹಾಮಾರಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು, ವೈದ್ಯರು ಮಾತ್ರವಲ್ಲದೆ ಭಾರತೀಯ ಸೇನೆಯ ಹೆಮ್ಮೆಯ ಯೋಧರು ಕೂಡ ಜನರಿಗೆ ಸೇವೆ ಸಲ್ಲಿಸುವಲ್ಲಿ ಹಗಲು-ರಾತ್ರಿಯೆನ್ನದೆ ನಿರತರಾಗಿದ್ದಾರೆ.
ಇಂದು ಭಾರತೀಯ ನೌಕಾಸೇನೆಯ ವೈದ್ಯಕೀಯ ಪಡೆಯ 76 ಸದಸ್ಯರು ಅಹಮದಾಬಾದಿಗೆ ಬಂದು ಇಳಿದಿದ್ದಾರೆ. ದೇಶದಾದ್ಯಂತ ಇರುವ ನೌಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಮತ್ತು ನರ್ಸಿಂಗ್ ಅಧಿಕಾರಿಗಳು, ಪ್ಯಾರಾ ಮೆಡಿಕ್ಸ್ ಮತ್ತು ಯುದ್ಧ ನೆಲದ ನರ್ಸಿಂಗ್ ಸಲಹೆಗಾರರು ಇದರಲ್ಲಿ ಸೇರಿದ್ದಾರೆ. ಇವರು ಅಹಮದಾಬಾದಿನ 900 ಹಾಸಿಗೆಗಳ ಧನ್ವಂತರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿ ಕೊರತೆಯನ್ನು ನೀಗಿಸಲು ಸಜ್ಜಾಗಿದ್ದಾರೆ.
ಈಗಾಗಲೇ ಭಾರತೀಯ ವಾಯುಸೇನೆಯು ತನ್ನ ವಿಮಾನಗಳ ಮೂಲಕ ದೇಶದಾದ್ಯಂತ ಔಷಧಿ, ವೇದ್ಯಕೀಯ ಸಿಬ್ಬಂದಿ, ಆಮ್ಲಜನಕ, ವೈದ್ಯಕೀಯ ಪರಿಕರ, ಲಸಿಕೆಗಳನ್ನು ಮಾಡುತ್ತಿದೆ. ಸೇನೆಯ ವೈದ್ಯರು ಕೂಡ ಕೋವಿಡ್ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಭೂಸೇನೆ ಕೂಡ ಕೋವಿಡ್ ಕೇಂದ್ರ ಸ್ಥಾಪನೆಯಿಂದ ಹಿಡಿದು ಎಲ್ಲಾ ರೀತಿಯ ನೆರವನ್ನು ಜನತೆಗೆ ನೀಡುತ್ತಿದೆ.
76 member #IndianNavy Medical Contingent from 5 Naval hospitals around the country reached Ahmedabad to bolster availablity of trained manpower in the 900 bedded #DhanvantariCovidHospital.
Comprises Medical & Nursing Officers, Paramedics & Battle Field Nursing Assistants #BFNA pic.twitter.com/nZsbvGgQpa— SpokespersonNavy (@indiannavy) April 30, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.