ನವದೆಹಲಿ: 1 ಕೋಟಿ ಆರು ಲಕ್ಷ ಡೋಸ್ ಕೋವಿಡ್ ಲಸಿಕೆಗಳು ಇನ್ನೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕೇಂದ್ರ ಸರ್ಕಾರ ಈವರೆಗೆ 16 ಕೋಟಿ 16 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಿದೆ. ಇದರಲ್ಲಿ, ವ್ಯರ್ಥ ಸೇರಿದಂತೆ ಡೋಸ್ಗಳ ಒಟ್ಟು ಬಳಕೆ 15 ಕೋಟಿ 10 ಲಕ್ಷಕ್ಕೂ ಅಧಿಕವಾಗಿದೆ ಎಂದು ಮಾಹಿತಿ ನೀಡಿದೆ.
ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 20 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ. ಲಸಿಕೆ ಕೊರತೆ ಇದೆ ಎಂದು ಹೇಳುತ್ತಿರುವ ಮಹಾರಾಷ್ಟ್ರವು ಇದುವರೆಗೆ 1 ಕೋಟಿ 63 ಲಕ್ಷ ಡೋಸ್ ಲಸಿಕೆಗಳನ್ನು ಸ್ವೀಕರಿಸಿದೆ. ಇದರಲ್ಲಿ ವ್ಯರ್ಥ ಸೇರಿದಂತೆ ಒಟ್ಟು ಬಳಕೆ ಒಂದು ಕೋಟಿ 56 ಲಕ್ಷಕ್ಕೂ ಅಧಿಕವಾಗಿದೆ. ಒಟ್ಟು ಏಳು ಲಕ್ಷ 49 ಸಾವಿರ 960 ಲಸಿಕೆ ಪ್ರಮಾಣಗಳು ಇನ್ನೂ ಇಲ್ಲಿ ಲಭ್ಯವಿದೆ. ಮುಂದಿನ ಮೂರು ದಿನಗಳಲ್ಲಿ 20 ಲಕ್ಷ 48 ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ವಿತರಿಸಲಾಗುವುದು ಎಂದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕರೋನವೈರಸ್ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನೇಷನ್ ನಿರ್ಣಾಯಕ ಆಧಾರಸ್ತಂಭವಾಗಿದೆ ಮತ್ತು ಮೂರನೇ ಹಂತದ ಕೋವಿಡ್ -19 ವ್ಯಾಕ್ಸಿನೇಷನ್ ಅನ್ನು ಮೇ 1 ರಿಂದ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು 11 ಲಕ್ಷ 80 ಸಾವಿರ ಡೋಸ್ ಲಸಿಕೆಗಳು ಲಭ್ಯವಿವೆ ಎಂದು ಸಚಿವಾಲಯ ತಿಳಿಸಿದೆ, ನಂತರ ಬಿಹಾರದಲ್ಲಿ 8 ಲಕ್ಷ 36 ಸಾವಿರ ಡೋಸ್ಗಳು ನೀಡಲು ಬಾಕಿ ಇವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.