ಸಾಂಕ್ರಾಮಿಕವು ಅನೇಕರ ಜೀವನದಲ್ಲಿ ದೊಡ್ಡ ಮಟ್ಟದ ಆಘಾತವನ್ನುಂಟು ಮಾಡಿದೆ. ದಯೆ, ನಿಸ್ವಾರ್ಥತೆ ಮತ್ತು ತ್ಯಾಗದ ಕಥೆಗಳು ಇಂತಹ ಕರಾಳ ಕಾಲದಲ್ಲಿ ಭರವಸೆಯ ಕಿರಣವಾಗಿ ಕಾರ್ಯನಿರ್ವಹಿಸುತ್ತಿದೆ.
ಅಂತಹ ಒಂದು ಘಟನೆಯನ್ನು ಆರ್ಎಸ್ಎಸ್ ಸೇವಿಕಾ ಶಿವಾನಿ ವಖಾರೆ ಹೇಳಿಕೊಂಡಿದ್ದಾರೆ. ನಾಗ್ಪುರದ 85 ವರ್ಷದ ಆರ್ಎಸ್ಎಸ್ ಕಾರ್ಯಕರ್ತ ನಾರಾಯಣ್ ದಬಡ್ಕರ್ ಮಾಡಿದ ತ್ಯಾಗದ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ.
ಈ ಘಟನೆಯನ್ನು ಸ್ವಯಂಸೇವಕ ರಾಹುಲ್ ಕೌಶಿಕ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ
ಈ ಘಟನೆಯನ್ನು ಮೂಲತಃ ಫೇಸ್ಬುಕ್ನಲ್ಲಿ ಮರಾಠಿಯಲ್ಲಿ ವಿವರಿಸಲಾಗಿದೆ. ಆರ್ಎಸ್ಎಸ್ ಕಾರ್ಯಕರ್ತ ನಾರಾಯಣ್ ದಭಡ್ಕರ್ ತಮ್ಮ ಇಡೀ ಜೀವನವನ್ನು ಸಮಾಜದ ಸೇವೆಗಾಗಿ ಕಳೆದವರ., ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಮಧ್ಯೆ ಕೋವಿಡ್ಗೆ ಅವರು ತುತ್ತಾದರು, ಅವರ ಎಸ್ಪಿಒ 2 ಮಟ್ಟ ಕುಸಿಯುತ್ತಿದ್ದಂತೆ, ಅವರ ಮಗಳು ಅವರನ್ನು ನಗರದಲ್ಲಿ ಆಸ್ಪತ್ರೆಗೆ ದಾಖಲಿಸಲು ಹಾಸಿಗೆಯನ್ನು ಗೊತ್ತುಪಡಿಸಲು ಪ್ರಯತ್ನಿಸಿದರು.
ಹದಿನೈದು ಪ್ರಯತ್ನಗಳ ಬಳಿಕ, ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಹಾಸಿಗೆಯನ್ನು ಕಾಯ್ದಿರಿಸುವಲ್ಲಿ ಅವರು ಯಶಸ್ವಿಯಾದರು. ಆದರೆ ಧಬಡ್ಕರ್ 40 ರ ಹರೆಯದ ಮಹಿಳೆಯೊಬ್ಬಳು ತನ್ನ ಮಕ್ಕಳೊಂದಿಗೆ ಅಳುವುದನ್ನು ಮತ್ತು ಗಂಭೀರ ಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ದಾಖಲಿಸಲು ಹಾಸಿಗೆಗಾಗಿ ಆಸ್ಪತ್ರೆಯ ಅಧಿಕಾರಿಗಳನ್ನು ಬೇಡಿಕೊಳ್ಳುವುದನ್ನು ನೋಡಿದರು.
ತಕ್ಷಣವೇ ಧಬಡ್ಕರ್ ತನಗೆ ಗೊತ್ತುಪಡಿಸಿದ ಹಾಸಿಗೆಯನ್ನು ಅಳುತ್ತಿದ್ದ ಮಹಿಳೆಯ ಗಂಡನಿಗೆ ನೀಡಬೇಕು ಎಂದು ವೈದ್ಯಕೀಯ ತಂಡಕ್ಕೆ ತಿಳಿಸಿದರು. “ನನಗೆ ಈಗ 85 ವರ್ಷ, ನಾನು ತುಂಬು ಜೀವನವನ್ನು ನಡೆಸಿದ್ದೇನೆ, ನನ್ನ ಬದಲಿಗೆ ನೀವು ಆ ವ್ಯಕ್ತಿಗೆ ಹಾಸಿಗೆಯನ್ನು ಅರ್ಪಿಸಬೇಕು, ಅವನ ಮಕ್ಕಳಿಗೆ ಅವನ ಅವಶ್ಯಕತೆ ಇದೆ” ಎಂದು ಅವರನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಮನೆಯವರನ್ನೂ ಒಪ್ಪಿಸಿದರು. ಈ ಬಗೆಗಿನ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.
ನಂತರ ಮೂರು ದಿನಗಳ ಕಾಲ ಕೋವಿಡ್ ವಿರುದ್ಧ ಹೋರಾಡಿದ ಅವರು, ಇಹಲೋಕವನ್ನು ತ್ಯಜಿಸಿದರು. ಆದರೆ ತನ್ನ ಬದಲು ಇನ್ನೊಬ್ಬ ವ್ಯಕ್ತಿಯ ಜೀವವನ್ನು ಅವರು ಉಳಿಸಿ ಹೊರಟರು ಎಂಬುದು ನಿಜಕ್ಕೂ ಭಾವನಾತ್ಮಕ ವಿಷಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.