ಬೆಂಗಳೂರು: ವಾತಾವರಣದಲ್ಲಿನ ಗಾಳಿಯಲ್ಲಿ ಯಥೇಚ್ಛವಾಗಿ ಲಭ್ಯವಿರುವ ಗಾಳಿಯಿಂದಲೇ ಆಕ್ಸಿಜನ್ ಹೀರಿ, ಅದನ್ನು ರೋಗಿಗಳಿಗೆ ಪೂರೈಕ ಮಾಡುವ ದೃಷ್ಟಿಯಿಂದ, ಇದಕ್ಕೆ ಪೂರಕವಾದಂತಹ ತಂತ್ರಜ್ಞಾನವೊಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿ ಮಾಡಿದ್ದು, ಈ ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಗಳಿಗೆ ಅಗತ್ಯ ಆಕ್ಸಿಜನ್ ಪೂರೈಕೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಮಾದರಿಯ ಸಣ್ಣ ಮಟ್ಟಿನ ವ್ಯವಸ್ಥೆ ಬೆಳಗಾವಿ ಮತ್ತು ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಈಗಾಗಲೇ ಕಾರ್ಯರೂಪಕ್ಕೆ ಬಂದಿವೆ. ಈ ತಂತ್ರಜ್ಞಾನವನ್ನು ಗಡಿ ಪ್ರದೇಶಗಳ ಅತೀ ಎತ್ತರದ ಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಯೋಧರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡಲಾಗಿದೆ. ʼಡಿಫೆನ್ಸ್ ಬಯೋ-ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೋರೇಟರಿʼ ಅಭಿವೃದ್ಧಿ ಮಾಡಿರುವ ʼಪ್ರೆಷರ್ ಸ್ಟಿಂಗ್ ಅಡ್ಸೋಪ್ರ್ಷನ್ʼ ತಂತ್ರಜ್ಞಾನದಡಿ ಗಾಳಿಯಿಂದ ಆಮ್ಲಜನಕ ಸಂಗ್ರಹಿಸುವ ಕೆಲಸ ಮಾಡಲಾಗುತ್ತದೆ. ಇದರಲ್ಲಿ 93.3% ಗಳಷ್ಟು ಶುದ್ಧ ಆಮ್ಲಜನಕ ಪೂರೈಸಲು ಸಾಧ್ಯವಿದೆ.
ಈ ಘಟಕಗಳು ಈಗಾಗಲೇ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಡಿಆರ್ಡಿಒ ಮಾರ್ಗದರ್ಶನದಲ್ಲಿ ಹಲವು ಘಟಕಗಳನ್ನು ಸ್ಥಾಪಿಸಲಾಗಿದೆ. ಇದೀಗ ರಾಜ್ಯದಲ್ಲಿಯೂ ಹೊಸ ಘಟಕಗಳ ಸ್ಥಾಪನೆಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪರವಾನಗಿ ನೀಡಿ ಅಗತ್ಯ ಸೌಕರ್ಯ ಕಲ್ಪಿಸಲು ಚಿಂತನೆ ನಡೆಸಿದೆ. ಇದು ಗಾಳಿಯನ್ನು ಕಂಪ್ರೆಸ್ ಮಾಡಿ ಹಲವು ಹಂತಗಳ ಮೂಲಕ ಗಾಳಿಯಲ್ಲಿನ ಬೇರೆ ಬೇರೆ ಅನಿಲಗಳನ್ನು ಹೀರಿಕೊಳ್ಳುವ ಹೀರಕಗಳ ಮೂಲಕ ಹಾಯಿಸಲಾಗುತ್ತದೆ. ಕೊನೆಯಲ್ಲಿ 93% ಗಳಷ್ಟು ಶುದ್ಧವಾದ ಆಮ್ಲಜನಕ ಅತಿ ಒತ್ತಡದಲ್ಲಿ ಹೊರಬರುತ್ತದೆ. ಇದನ್ನು ರೋಗಿಗಳಿಗೆ ಪೂರೈಕೆ ಮಾಡಬಹುದಾಗಿದೆ.
ಈ ತಂತ್ರಜ್ಞಾನದ ಅಭಿವೃದ್ಧಿಗೆ ಡಿಆರ್ಡಿಒ, ಬಿಎಚ್ಇಎಲ್ ಜೊತೆಗೆ ಒಡಂಬಡಿಕೆಯನ್ನೂ ಮಾಡಿಕೊಂಡಿದೆ. ಪ್ರೆಷರ್ ಸ್ವಿಂಗ್ ಅಡ್ಸೋಪ್ರ್ಷನ್ ಉಪಕರನವನ್ನು ಸ್ಥಾಪಿಸುವಂತೆ ಈ ಎರಡೂ ಸಂಸ್ಥೆಗಳ ಜೊತೆಗೆ ಕೈಗಾರಿಕಾ ಇಲಾಖೆ ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನೂ ಮುಗಿಸಿದೆ. ಬಿಇಎಲ್ ಸಹ 6 ಉಪಕರಣಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಮುಂದೆ ಬಂದಿದೆ. ಕೊಯಮತ್ತೂರಿನ ಟ್ರಿಡೆಂಟ್ ಫೆನುಮೆಟಿಕ್ಸ್ ಕಂಪೆನಿಯು ಈ ಉಪಕರಣ ಸ್ಥಾಪಿಸಲು ಆಸಕ್ತಿಯನ್ನು ತೋರಿದೆ ಎಂದು ಕೈಗಾರಿಕಾ ಇಲಾಖೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.