ಬೆಂಗಳೂರು: ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ ವ್ಯಕ್ತಿಯೋರ್ವರ ಶವವನ್ನು ಸಾಗಿಸಲು ಮೃತ ವ್ಯಕ್ತಿಯ ಪುತ್ರಿಯಲ್ಲಿ ರೂ. 60,000 ಹಣಕ್ಕೆ ಬೇಡಿಕೆ ಇಟ್ಟ ಆಂಬ್ಯುಲೆನ್ಸ್ ಚಾಲಕ ಹನುಮಂತಪ್ಪ ಎಂಬಾತನನ್ನು ಬಂಧಿಸಿರುವ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಭವ್ಯಾ ಎಂಬವರ ತಂದೆ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು, ಅವರ ಶವವನ್ನು ಪೀಣ್ಯಾದಿಂದ ಅಂತಿಮ ಸಂಸ್ಕಾರಕ್ಕಾಗಿ ಚಿತಾಗಾರಕ್ಕೆ ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಿದ್ದರು. ಈ ಸಂದರ್ಭದಲ್ಲಿ 60 ಸಾವಿರ ರೂ. ಗಳನ್ನು ನೀಡಿದಲ್ಲಿ ಶವ ಸಾಗಾಟ ಮಾಡಲಾಗುವುದು, ಇಲ್ಲವಾದಲ್ಲಿ ಹೆಣವನ್ನು ರಸ್ತೆಯಲ್ಲೇ ಎಸೆದು ಹೋಗುವುದಾಗಿ ಆಂಬ್ಯುಲೆನ್ಸ್ ಚಾಲಕ ಭವ್ಯಾ ಅವರನ್ನು ಪೀಡಿಸಿದ್ದಾನೆ. ಆತನ ಬಳಿ ವಿನಂತಿಸಿಕೊಂಡರೂ ಕರಗದ ಆತನಿಗೆ ತನ್ನ ಮಾಂಗಲ್ಯ ಸರವನ್ನೇ ಮಾರಿ ಹಣ ನೀಡುವುದಾಗಿ ಭವ್ಯಾ ತಿಳಿಸಿದ್ದರು.
ಬಳಿಕ ಭವ್ಯಾ ಅವರು ಈ ವಿಚಾರವನ್ನು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರ ಕರೆಗೆ, ಸಂಕಷ್ಟಕ್ಕೆ ಸ್ಪಂದಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆತನ ಅಂಬ್ಯುಲೆನ್ಸ್ ಅನ್ನು ಸಹ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.