ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳ ನಡುವೆ, ದೇಶದ ಉನ್ನತ ವೈದ್ಯರಾದ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ, ನಾರಾಯಣ ಹೆಲ್ತ್ನ ನಿರ್ದೇಶಕ ಡಾ.ಶೆಟ್ಟಿ ಮತ್ತು ಮೆದಾಂತ ಹಾಸ್ಪಿಟಲ್ ಅಧ್ಯಕ್ಷ ಡಾ.ನರೇಶ್ ಟ್ರೆಹನ್ ಅವರು ಹೊಸ ಕೋವಿಡ್-19ನ ಎರಡನೇ ಅಲೆಯನ್ನು ಹೇಗೆ ಎದುರಿಸಬೇಕೆಂದು ಜನರಿಗೆ ಸಲಹೆ ನೀಡಿದ್ದಾರೆ.
ಪ್ರತಿ 6 ಗಂಟೆಗಳಿಗೊಮ್ಮೆ ಜನರು ತಮ್ಮ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಪರೀಕ್ಷಿಸುವಂತೆ ಡಾ.ಶೆಟ್ಟಿ ಸಲಹೆ ನೀಡಿದರು. “ನಿಮ್ಮ ಆಮ್ಲಜನಕದ ಶುದ್ಧತ್ವವು 94% ಕ್ಕಿಂತ ಹೆಚ್ಚಿದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ವ್ಯಾಯಾಮದ ನಂತರ ಅದು ಕೆಳಗಿಳಿದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ನೀವು ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಬಹಳ ಮುಖ್ಯ” ಎಂದಿದ್ದಾರೆ.
ಕೋವಿಡ್-19 ಅನ್ನು ಲಘುವಾಗಿ ತೆಗೆದುಕೊಳ್ಳಬಾರದು ಮತ್ತು ರೋಗಲಕ್ಷಣಗಳು ಕರೋನವೈರಸ್ ಇರುವುದನ್ನು ಖಚಿತವಾಗಿ ಸೂಚಿಸದಿದ್ದರೂ ಸಹ ಸೋಂಕಿನ ಪರೀಕ್ಷೆಗೆ ಒಳಗಾಗಬೇಕು. ಯಾವುದೇ ರೋಗಿಯು ತಮ್ಮ ದೇಹದಲ್ಲಿನ ಯಾವುದೇ ಬದಲಾವಣೆ ಬಗ್ಗೆ ಅಸಡ್ಡೆ ಮಾಡಬಾರದು” ಎಂದು ಡಾ.ಶೆಟ್ಟಿ ಹೇಳಿದ್ದಾರೆ.
#WATCH Dr Guleria, AIIMS, Dr Shetty, Narayana Health and Dr Trehan, Medanta address issues related to COVID19 https://t.co/SQZdGuWC9M
— ANI (@ANI) April 21, 2021
“ನೀವು ಲಕ್ಷಣರಹಿತರಾಗಿರುವ ಸಾಧ್ಯತೆಯಿದೆ, ಆಗ ವೈದ್ಯರು ಮನೆಯಲ್ಲಿಯೇ ಇರಲು, ನಿಮ್ಮನ್ನು ಪ್ರತ್ಯೇಕಿಸಲು, ಮುಖಗವಸು ಧರಿಸಲು ಮತ್ತು ಪ್ರತಿ 6 ಗಂಟೆಗಳಿಗೊಮ್ಮೆ ನಿಮ್ಮ ಆಮ್ಲಜನಕದ ಶುದ್ಧತ್ವವನ್ನು ಪರೀಕ್ಷಿಸಲು ಹೇಳುತ್ತಾರೆ. ನಿಮಗೆ ದೇಹದ ನೋವು, ಶೀತ, ಕೆಮ್ಮು, ಅಜೀರ್ಣ, ವಾಂತಿ ಮುಂತಾದ ಯಾವುದೇ ರೋಗಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಇದು ಅತ್ಯಂತ ಮುಖ್ಯವಾದ ವಿಷಯ” ಎಂದು ಅವರು ಹೇಳಿದ್ದಾರೆ.
ಇನ್ನು ವೈದ್ಯ ಡಾ. ಟ್ರೆಹನ್ ಅವರು ಮಾತನಾಡಿ, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ನಿರ್ಣಾಯಕ ಆಂಟಿವೈರಲ್ ಔಷಧ ರೆಮಿಡ್ಸ್ವಿರ್ ಮಂತ್ರದಂಡವಲ್ಲ ಎಂದು ಹೇಳಿದ್ದಾರೆ. ಜನಸಾಮಾನ್ಯರಲ್ಲಿ ಇರುವ ಕೋವಿಡ್ -19 ಬಗೆಗಿನ ಸಂದೇಹಗಳನ್ನು ಬಗೆಹರಿಸಲು ಪ್ರಯತ್ನಿಸಿದ ಅವರು, ಅತಿ ಕಡಿಮೆ ಶೇಕಡಾವಾರು ಜನರಿಗೆ ಆಸ್ಪತ್ರೆಗೆ ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ. ಆಸ್ಪತ್ರೆಯ ಹಾಸಿಗೆಗಳನ್ನು ನ್ಯಾಯಯುತವಾಗಿ ಮತ್ತು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಕೊರೋನಾವೈರಸ್ನ ಎರಡನೇ ಅಲೆ ಭಾರತವನ್ನು ಅಪ್ಪಳಿಸಿದಾಗಿನಿಂದಲೂ ಭಾರಿ ಬೇಡಿಕೆಯಿರುವ ಆಂಟಿವೈರಲ್ ಔಷಧಿ ರೆಮ್ಡೆಸಿವಿರ್ ಬಳಕೆಯ ಬಗ್ಗೆ ಮಾತನಾಡಿದ ಅವರು, ಪಾಸಿಟಿವ್ ಬಂದ ಎಲ್ಲರೂ ಈ ಔಷಧವನ್ನು ಬಳಸದಂತೆ ಸೂಚಿಸುವುದಾಗಿ ತಿಳಿಸಿದ್ದಾರೆ. ಪರೀಕ್ಷೆಯ ಫಲಿತಾಂಶಗಳು, ರೋಗಲಕ್ಷಣಗಳು, ರೋಗಿಯ ಕೊಮೊರ್ಬಿಡಿಟಿಗಳನ್ನು ವೈದ್ಯರು ಗಮನಿಸಿದ ನಂತರವೇ ಅವರು ಈ ಔಷಧಿಯನ್ನು ನೀಡಬೇಕು ಎಂದು ಹೇಳಿದ್ದಾರೆ. ರೆಮ್ಡೆಸಿವಿರ್ ಒಂದು ಮಂತ್ರದಂಡ ಅಲ್ಲ, ಇದು ಅಗತ್ಯವಿರುವ ಜನರಲ್ಲಿ ಮಾತ್ರ ವೈರಸ್ ಅನ್ನು ಕಡಿಮೆ ಮಾಡುತ್ತದೆ ಎಂದಿದ್ದಾರೆ.
ರೋಗಿಗಳಿಗೆ ಆಮ್ಲಜನಕವನ್ನು ನ್ಯಾಯಯುತವಾಗಿ ಬಳಸುವಂತೆ ಸಲಹೆ ನೀಡಿದ ಅವರು, ಇತರರಿಗೆ ಕೊರತೆಯಾಗುವಂತೆ ಆಮ್ಲಜನಕವನ್ನು ಸಂಗ್ರಹಿಸಬಾರದು ಮತ್ತು ಅದರ ವ್ಯರ್ಥವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ.
“ನ್ಯಾಯಯುತವಾಗಿ ಬಳಸಲು ಪ್ರಯತ್ನಿಸಿದರೆ ಇಂದು ನಮಗೆ ಸಾಕಷ್ಟು ಆಮ್ಲಜನಕವಿದೆ. ನಿಮಗೆ ಆಮ್ಲಜನಕ ಅಗತ್ಯವಿಲ್ಲದಿದ್ದರೆ ಅದನ್ನು ರಕ್ಷಣೆಗಾಗಿ ಬಳಸಬೇಡಿ ಎಂದು ನಾನು ಸಾರ್ವಜನಿಕರಿಗೆ ಹೇಳಲು ಬಯಸುತ್ತೇನೆ. ಆಮ್ಲಜನಕದ ವ್ಯರ್ಥವು ಅಗತ್ಯವಿರುವವರು ಜೀವ ಕಳೆದುಕೊಳ್ಳಲು ಕಾರಣವಾಗುತ್ತದೆ” ಎಂದು ಅವರು ಎಚ್ಚರಿಸಿದ್ದಾರೆ.
ಡಾ.ರಂದೀಪ್ ಗುಲೇರಿಯಾ ಮಾತನಾಡಿ, ದೇಶದಲ್ಲಿ ಹೆಚ್ಚುತ್ತಿರುವ 85% ಕ್ಕಿಂತ ಹೆಚ್ಚು ಜನರು ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ ಎಂದು ಹೇಳಿದರು. ನೆಗಡಿ, ನೋಯುತ್ತಿರುವ ಗಂಟಲು ಮುಂತಾದ ರೋಗಲಕ್ಷಣಗಳನ್ನು ಹೆಚ್ಚಿನವರು ಹೊಂದಿರುತ್ತಾರೆ ಮತ್ತು 5-7 ದಿನಗಳಲ್ಲಿ ಚೇತರಿಕೆ ಕಾಣುತ್ತಾರೆ, ಕೇವಲ 15 ಶೇಕಡಾ ಮಂದಿಗೆ ಮಾತ್ರ ಮಧ್ಯಮ ರೋಗ ಮಟ್ಟಕ್ಕೆ ಈ ವೈರಸ್ ಹೋಗಬಹುದು ಎಂದು ತಿಳಿಸಿದ್ದಾರೆ.
ಪ್ಯಾರಸಿಟಮಾಲ್ ಅನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಜನರು ಕೋವಿಡ್-19 ಅನ್ನು ನಿವಾರಿಸಬಹುದು ಎಂದಿದ್ದಾರೆ. ರೆಮ್ಡೆಸಿವಿರ್ ಮ್ಯಾಜಿಕ್ ಬುಲೆಟ್ ಅಲ್ಲ ಮತ್ತು ಜನರು ಹೈಡ್ರೇಟ್ ಆಗಿ ಇರಬೇಕೆಂದು ಅವರು ಕೋರಿದರು, ಕೋವಿಡ್-19 ನಿಂದ ಚೇತರಿಸಿಕೊಳ್ಳಲು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಬೇಕು ಎಂದಿದ್ದಾರೆ.
“ಭಯಭೀತಿಯಿಂದಾಗಿ ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವ ಅಥವಾ ಆಸ್ಪತ್ರೆಯಲ್ಲಿರುವ ನಮ್ಮಲ್ಲಿ ಹೆಚ್ಚಿನವರಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯ ಅಗತ್ಯವಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅಲ್ಪ ಶೇಕಡಾವಾರು ಜನರಿಗೆ ಮಾತ್ರ ರೆಮ್ಡೆಸಿವಿರ್ ಅಗತ್ಯವಿದೆ. ಇದನ್ನು ಮ್ಯಾಜಿಕ್ ಬುಲೆಟ್ ಎಂದು ಪರಿಗಣಿಸಬೇಡಿ ”ಎಂದು ಡಾ ಗುಲೇರಿಯಾ ಹೇಳಿದ್ದಾರೆ.
ಆಮ್ಲಜನಕದ ಬೇಡಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆಮ್ಲಜನಕದ ಶುದ್ಧತ್ವವು ಶೇಕಡಾ 94 ಕ್ಕಿಂತ ಹೆಚ್ಚಿರುವ ಜನರು ಪೂರಕ ಆಮ್ಲಜನಕವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಆಮ್ಲಜನಕದ ಮಟ್ಟವು 90-92 ಶೇಕಡಾಕ್ಕೆ ಇಳಿದ ಜನರಿಗೆ ಕೂಡ ಆಮ್ಲಜನಕದ ತಕ್ಷಣದ ಅಗತ್ಯವಿಲ್ಲ ಎಂದು ಅವರು ಸಲಹೆ ನೀಡಿದರು. ಅಂತಹ ಸಂದರ್ಭಗಳಲ್ಲಿ, ರೋಗಿಗಳು ತಮ್ಮ ಆಮ್ಲಜನಕದ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಅವರ ಚಿಕಿತ್ಸೆಗಾಗಿ ವೈದ್ಯರೊಂದಿಗೆ ಸಮಾಲೋಚಿಸಬೇಕು” ಎಂದಿದ್ದಾರೆ.
“ಒಂದು ದೇಶವಾಗಿ ನಾವು ಒಟ್ಟಿಗೆ ಕೆಲಸ ಮಾಡಿದರೆ, ಆಮ್ಲಜನಕ ಮತ್ತು ರೆಮ್ಡೆಸಿವಿರ್ ಅನ್ನು ನ್ಯಾಯಯುತವಾಗಿ ಬಳಸಿದರೆ, ಎಲ್ಲಿಯೂ ಯಾವುದೇ ಕೊರತೆ ಇರುವುದಿಲ್ಲ. ಆಮ್ಲಜನಕ ಮತ್ತು ಆಮ್ಲಜನಕದ ಪೂರೈಕೆಯ ಅಗತ್ಯವಿರುವ ಜನರ ಸಂಖ್ಯೆಗೆ ಅನುಗುಣವಾಗಿ ನಾವು ಸಮತೋಲಿತರಾಗಿದ್ದೇವೆ”ಎಂದು ಅವರು ಹೇಳಿದ್ದಾರೆ.
“ಲಸಿಕೆಗಳು ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯುತ್ತದೆ, ಐಸಿಯುಗೆ ಹೋಗುವುದನ್ನು ತಡೆಯುತ್ತವೆ. ಲಸಿಕೆ ಪಡೆದ ಬಳಿಕವೂ ಮುಖಗವಸು ಧರಿಸುವುದು ಮುಂತಾದ ಕೋವಿಡ್ ಸೂಕ್ತ ನಡವಳಿಕೆಗಳನ್ನು ಪಾಲನೆ ಮಾಡಬೇಕು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.