ಬೆಂಗಳೂರು: ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿರುವ ರೆಮ್ಡೆಸಿವಿರ್ ಲಸಿಕೆ ಅಭಾವ ಸೃಷ್ಟಿಯ ಪ್ರಕರಣದಲ್ಲಿ ಭಾಗಿಯಾದ ಡ್ರಗ್ ಕಂಟ್ರೋಲ್ ಆಫೀಸರ್ ಬಿ ಆರ್ ವೆಂಕಟೇಶ್ ವಿರುದ್ಧ ದೂರು ಬಂದ ತಕ್ಷಣವೇ, ಅವರನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸುವ ಮೂಲಕ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿಸುತ್ತಿರುವ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ಆರೋಗ್ಯ ಸಚಿವ ಡಾ ಕೆ ಸುಧಾಕರ್ ರವಾನಿಸಿದ್ದಾರೆ.
ಈ ಸಂಬಂಧ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್ ಮಾಡಿದ್ದು, ʼರೆಮ್ಡಿಸಿವಿರ್ ಅಭಾವ ಸೃಷ್ಟಿಯ ಪ್ರಕರಣದಲ್ಲಿ ಭಾಗಿಯಾದ ಡ್ರಗ್ ಕಂಟ್ರೋಲ್ ಆಫಿಸರ್ ಬಿ ಆರ್ ವೆಂಕಟೇಶ್ ವಿರುದ್ಧ ನಮ್ಮ ಕಛೇರಿಯಿಂದ ದೂರು ಸಲ್ಲಿಸಿದ ತಕ್ಷಣ, ಸಸ್ಪೆಂಡ್ ಮಾಡುವ ಮೂಲಕ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿಸುತ್ತಿರುವ ಅಧಿಕಾರಿಗಳಿಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸ್ಪಷ್ಟ ಸಂದೇಶ ನೀಡಿದ್ದು, ಇತರರಿಗೆ ಇದು ಪಾಠವಾಗಬೇಕಿದೆʼ ಎಂದು ತಿಳಿಸಿದ್ದಾರೆ.
ರೆಮ್ಡಿಸಿವಿರ್ ಅಭಾವ ಸೃಷ್ಟಿಯ ಪ್ರಕರಣದಲ್ಲಿ ಭಾಗಿಯಾದ ಡ್ರಗ್ ಕಂಟ್ರೋಲ್ ಆಫಿಸರ್ ಬಿ ಆರ್ ವೆಂಕಟೇಶ್ ವಿರುದ್ಧ ನಮ್ಮ ಕಛೇರಿಯಿಂದ ದೂರು ಸಲ್ಲಿಸಿದ ತಕ್ಷಣ, ಸಸ್ಪೆನ್ಡ್ ಮಾಡುವ ಮೂಲಕ ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿಸುತ್ತಿರುವ ಅಧಿಕಾರಿಗಳಿಗೆ ಆರೋಗ್ಯ ಸಚಿವ ಶ್ರೀ@mla_sudhakar ಸ್ಪಷ್ಟ ಸಂದೇಶ ನೀಡಿದ್ದು, ಇತರರಿಗೆ ಇದು ಪಾಠವಾಗಬೇಕಿದೆ
— Tejasvi Surya (@Tejasvi_Surya) April 22, 2021
ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿರುವ ಔಷಧಗಳ ಅಭಾವ ಸೃಷ್ಟಿಸದಂತೆ, ಅವುಗಳಲ್ಲಿ ಅಕ್ರಮ ಎಸಗದಂತೆಯೂ ಈ ಹಿಂದೆಯೇ ರಾಜ್ಯ ಸರ್ಕಾರ ಇಲಾಖೆಗಳಿಗೆ, ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಅಂತಹದ್ದೇ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಯನ್ನು ವಜಾ ಮಾಡುವ ಮೂಲಕ ಇಂತಹ ಕೃತ್ಯಗಳಲ್ಲಿ ಭಾಗಿಗಳಾಗುವ ಇತರ ಅಧಿಕಾರಿಗಳಿಗೂ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.