ನವದೆಹಲಿ: ಆಯುರ್ವೇದದಲ್ಲಿ ಬಳಸುವ ಗಿಡಮೂಲಿಕೆಯೊಂದು ಕೋವಿಡ್ – 19 ಸೋಂಕಿನ ವಿರುದ್ಧದ ಔಷಧ ಸಂಶೋಧನೆಗೆ ಹೊಸ ತಿರುವು ನೀಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಳಸುವ ಮುಲೇಥಿಗೆ ಕೋವಿಡ್ ಸೋಂಕಿನ ವಿರುದ್ಧದಲ್ಲಿ ಹೋರಾಡುವ ಸಾಮರ್ಥ್ಯ ಕಂಡು ಬಂದಿದೆ. ಕೊರೊನಾ ವೈರಸ್ ಬೆಳವಣಿಗೆಯನ್ನು ತಡೆಯುವ ಶಕ್ತಿ ಹೊಂದಿದೆ ಎನ್ನುವ ಸಂಶೋಧನಾ ವರದಿಯು ಲಭಿಸಿದೆ.
ಈ ಬಗ್ಗೆ ಸಂಶೋಧನೆ ನಡೆಸುತ್ತಿರುವ ಗುರುಗ್ರಾಮದ ಮಾನೇರಸ್ನಲ್ಲಿರುವ ರಾಷ್ಟ್ರೀಯ ಮಿದುಳು ಸಂಶೋಧನಾ ಕೇಂದ್ರದ (ಎನ್ಬಿಆರ್ಸಿ) ವಿಜ್ಞಾನಿಗಳು ಈ ಮಾಹಿತಿಯನ್ನು ತಿಳಿಸಿದ್ದಾರೆ.
ಮಾನವನ ಶ್ವಾಸಕೋಶದ ಕೆಲವು ಕೋಶಗಳಿಗೆ ನಿರ್ದಿಷ್ಟ ವೈರಲ್ ಪ್ರೊಟೀನ್ಗಳನ್ನು ನೀಡಿದ್ದು ಈ ಪ್ರೋಟಿನ್ಗಳು ಕೋಶಗಳಲ್ಲಿ ಉರಿಯೂತವನ್ನು ಪ್ರಚೋದಿಸುವುದು ಕಂಡು ಬಂದಿದೆ ಎನ್ನಲಾಗಿದೆ. ಆದರೆ ಮುಲೇಥಿ ಚಿಕಿತ್ಸೆಯು ಅಂತಹ ಕೋಶಗಳಲ್ಲಿನ ಉರಿಯೂತವನ್ನು ಕಡಿಮೆಗೊಳಿಸಿದೆ. ಈ ವರದಿಯನ್ನು ಸಂಶೋಧನಾ ತಂಡದ ಪ್ರಮುಖರಾದ ಎನ್ಬಿಆರ್ಸಿಯ ಹಿರಿಯ ವಿಜ್ಞಾನಿ ಎಲ್ಲೋರ ಸೇನ್ ತಿಳಿಸಿದ್ದಾರೆ.
ಈ ಔಷಧಿಯು ವೈರಸ್ ಬೆಳವಣಿಗೆ ಪ್ರಮಾಣವನ್ನು ಶೇ. 90 ರಷ್ಟು ಕಡಿಮೆ ಮಾಡಲಿದೆ ಎಂದು ವಿಜ್ಞಾನಿಗಳ ತಂಡ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.