ಕರ್ನೂಲ್: ಆಂಧ್ರಪ್ರದೇಶ ತನ್ನ ಆರನೇ ಕಾರ್ಯಾಚರಣಾ ವಿಮಾನನಿಲ್ದಾಣವನ್ನು ಪಡೆದುಕೊಂಡಿದೆ. ಕರ್ನೂಲ್ನ ಓರ್ವಕಲ್ನಲ್ಲಿ ಗುರುವಾರ ಉದ್ಘಾಟಿಸಲ್ಪಟ್ಟ ಈ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಉಯಲವಾಡ ನರಸಿಂಹ ರೆಡ್ಡಿ ಹೆಸರಿಡಲಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಈ ವಿಮಾನ ನಿಲ್ದಾನವನ್ನು ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, “ಇದು ಕರ್ನೂಲ್ ಇತಿಹಾಸದಲ್ಲಿ ಮರೆಯಲಾಗದ ದಿನವಾಗಿದ್ದು, ಇದುವರೆಗೂ ಕೇವಲ ರಸ್ತೆ ಮತ್ತು ರೈಲು ಸಂಪರ್ಕವನ್ನು ಹೊಂದಿದ ಜಿಲ್ಲೆಯು ವಿಮಾನ ನಿಲ್ದಾಣವನ್ನೂ ಪಡೆದುಕೊಂಡಿದೆ. ಹೊಸ ವಿಮಾನ ನಿಲ್ದಾಣವು ಕರ್ನೂಲ್ರ ಖ್ಯಾತಿಯನ್ನು ಹೆಚ್ಚಿಸಲಿದೆ, ಈ ಜಿಲ್ಲೆ ಈಗ ರಾಜ್ಯದ ನ್ಯಾಯಾಂಗ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ” ಎಂದಿದ್ದಾರೆ.
ಓರ್ವಕಲ್ ವಿಮಾನ ನಿಲ್ದಾಣದಿಂದ ವಿಮಾನ ಸೇವೆಗಳ ಕಾರ್ಯಾಚರಣೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅನುಮತಿ ಪಡೆಯುವಲ್ಲಿ ಹಣಕಾಸು ಸಚಿವ ಬುಗ್ಗನಾ ರಾಜೇಂದ್ರನಾಥ ರೆಡ್ಡಿ ಮತ್ತು ಕಲೆಕ್ಟರ್ ಜಿ ವೀರಪಾಂಡಿಯನ್ ಅವರ ಪ್ರಯತ್ನವನ್ನು ಜಗನ್ ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.